»   » ನೀರಿನ ಸಂರಕ್ಷಣೆಗಾಗಿ ಸದ್ಗುರು ಜೊತೆ ಕೈ ಜೋಡಿಸಿದ ಪುನೀತ್, ಗಣೇಶ್

ನೀರಿನ ಸಂರಕ್ಷಣೆಗಾಗಿ ಸದ್ಗುರು ಜೊತೆ ಕೈ ಜೋಡಿಸಿದ ಪುನೀತ್, ಗಣೇಶ್

Posted By:
Subscribe to Filmibeat Kannada

ಅಂತಾರಾಷ್ಟ್ರೀಯ ಖ್ಯಾತಿಯ ಯೋಗ ಗುರು, ಧರ್ಮಗುರು ಶ್ರಿ ಸದ್ಗುರು ಜಗ್ಗಿ ವಾಸುದೇವ್ ಅವರ ನೇತೃತ್ವದಲ್ಲಿ ನದಿ ನೀರು ರಕ್ಷಣೆ ಜಾಗೃತಿಗಾಗಿ ''Rally For River'' ಎಂಬ ಅಭಿಯಾನವನ್ನ ನಡೆಸುತ್ತಿದ್ದಾರೆ. ಈ ಅಭಿಯಾನಕ್ಕೆ ಕನ್ನಡದ ಸ್ಟಾರ್ ನಟರು ಸಾಥ್ ಕೊಟ್ಟಿದ್ದಾರೆ.

ಇಶಾ ಫೌಂಡೇಶನ್ ಎಂಬ ಸಂಸ್ಥೆಯ ನದಿ ನೀರು ರಕ್ಷಣೆ ಜಾಗೃತಿ ಅಭಿಯಾನಕ್ಕೆ ಸದ್ಗುರು ಜೊತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೈ ಜೋಡಿಸಿದ್ದಾರೆ. ಇತ್ತೀಚೆಗಷ್ಟೇ ಪುನೀತ್ ರಾಜ್ ಕುಮಾರ್ ಅವರನ್ನ ಭೇಟಿ ಮಾಡಿದ ಸದ್ಗುರು ವಾಸ್ ದೇವ್ ಅವರು ಈ ಬಗ್ಗೆ ಪುನೀತ್ ಅವರ ಬಳಿ ಚರ್ಚಿಸಿದ್ದಾರೆ. ಈ ವೇಳೆ ನಟ ರಾಘವೇಂದ್ರ ರಾಜ್ ಕುಮಾರ್, ವಿನಯ್ ರಾಜ್ ಕುಮಾರ್ ಕೂಡ ಭಾಗಿಯಾಗಿದ್ದರು.

Sadguru Jaggi Vasudevan Met Puneeth Rajkumar

ಇನ್ನು ಕಳೆದ ಕೆಲದಿನಗಳ ಹಿಂದೆಯಷ್ಟೇ ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನ ಕೂಡ ಸದ್ಗುರು ಜಗ್ಗಿ ವಾಸುದೇವ್ ಅವರು ಭೇಟಿ ಮಾಡಿದ್ದರು. ಕೇವಲ ಸಿನಿಮಾ ತಾರೆಯರು ಮಾತ್ರವಲ್ಲ, ದೇಶಾದ್ಯಂತ ರಾಜಕೀಯ ಗಣ್ಯರು ''Rally For River'' ಅಭಿಯಾನಕ್ಕೆ ಕೈ ಜೋಡಿಸುತ್ತಿದ್ದಾರೆ.

English summary
Kannada Actor Puneeth Rajkumar joins Hands With Sadguru Jaggi Vasudevan For 'Rally For River' Campaign. Recently, Sadguru Jaggi Vasudevan Met Kannada Actor Puneeth Rajkumar and Ganesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada