twitter
    For Quick Alerts
    ALLOW NOTIFICATIONS  
    For Daily Alerts

    ಸಿನಿ ಬಂಧುಗಳಿಗಾಗಿ ಉಪೇಂದ್ರ ಜೊತೆ ಕೈ ಜೋಡಿಸಿದ ತಾರೆಯರು

    |

    ಕೊರೊನಾ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಚಿತ್ರರಂಗದ ಕಾರ್ಮಿಕರು, ಕಲಾವಿದ, ತಂತ್ರಜ್ಞರಿಗೆ ನಟ-ನಿರ್ದೇಶಕ ಉಪೇಂದ್ರ ಸಹಾಯ ಹಸ್ತ ಚಾಚಿದ್ದಾರೆ. ಒಕ್ಕೂಟದ ಎಲ್ಲಾ ಸಂಘಗಳ ಸುಮಾರು ಮೂರು ಸಾವಿರ ಕುಟುಂಬಕ್ಕೆ ದಿನಸಿ ಕಿಟ್ ನೀಡಲು ನಿರ್ಧರಿಸಿದ್ದರು.

    ಉಪೇಂದ್ರ ಅವರ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ, ಉಪ್ಪಿ ಜೊತೆ ಮತ್ತಷ್ಟು ಸೆಲೆಬ್ರಿಟಿಗಳು ಕೈ ಜೋಡಿಸಿದ್ದಾರೆ. ಕನ್ನಡ ಚಿತ್ರರಂಗದ ಕಲಾವಿದ, ಕಾರ್ಮಿಕ, ತಂತ್ರಜ್ಞರಿಗೆ ಸಹಾಯ ಮಾಡುವ ಉದ್ದೇಶದಿಂದ ರಿಯಲ್ ಸ್ಟಾರ್ ಜೊತೆ ನಿಂತಿದ್ದಾರೆ. ಇದರ ಜೊತೆಗೆ ಉಪ್ಪಿ ಫೌಂಡೇಶನ್‌ಗೆ ಎನ್‌ಜಿಓ, ಸಮಾಜಸೇವೆ ಮನೋಭಾವ ಹೊಂದಿರುವವರು ಸ್ವಇಚ್ಛೆಯಿಂದ ಸಹಾಯ ಮಾಡುತ್ತಿರುವುದಾಗಿ ಖುದ್ದು ಉಪ್ಪಿ ತಿಳಿಸಿದ್ದಾರೆ. ಮುಂದೆ ಓದಿ...

    ಸಂಗೀತ ಕಲಾವಿದರಿಗೆ ಬಿ ಸರೋಜಾದೇವಿ ನೆರವು

    ಸಂಗೀತ ಕಲಾವಿದರಿಗೆ ಬಿ ಸರೋಜಾದೇವಿ ನೆರವು

    ಸುಪ್ರಸಿದ್ಧ ಅಭಿನೇತ್ರಿ ಬಿ. ಸರೋಜಾದೇವಿ ಅವರು ನಾಲ್ಕು ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದಾರೆ. ಈ ಹಣವನ್ನು ಸಾಧು ಕೋಕಿಲರವರ ನೇತೃತ್ವದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಂಕಷ್ಟದಲ್ಲಿರುವವರಿಗೆ ನೀಡಲು ತಿಳಿಸಿದ್ದಾರೆ ಎಂದು ಉಪೇಂದ್ರ ತಿಳಿಸಿದ್ದಾರೆ.

    ಸಂಕಷ್ಟದಲ್ಲಿರುವ ಕಾರ್ಮಿಕ, ಕಲಾವಿದ, ತಂತ್ರಜ್ಞರ ನೆರವಿಗೆ ಧಾವಿಸಿದ ಉಪೇಂದ್ರಸಂಕಷ್ಟದಲ್ಲಿರುವ ಕಾರ್ಮಿಕ, ಕಲಾವಿದ, ತಂತ್ರಜ್ಞರ ನೆರವಿಗೆ ಧಾವಿಸಿದ ಉಪೇಂದ್ರ

    ಆರ್ಕೆಸ್ಟ್ರಾ ಕಲಾವಿದರ ಸಂಕಷ್ಟಕ್ಕೆ ಸಾಧು ಸಹಾಯ

    ಆರ್ಕೆಸ್ಟ್ರಾ ಕಲಾವಿದರ ಸಂಕಷ್ಟಕ್ಕೆ ಸಾಧು ಸಹಾಯ

    ಖ್ಯಾತ ನಟ ಸಾಧುಕೋಕಿಲ ಅವರು ಎರಡೂವರೆ ಲಕ್ಷ ರೂಪಾಯಿ ಮೊತ್ತದಲ್ಲಿ ದಿನಸಿ ಕಿಟ್‌ಗಳನ್ನು ಆರ್ಕೆಸ್ಟ್ರಾ ಕಲಾವಿದರುಗಳಿಗೆ ಹಂಚಲು ಮುಂದೆ ಬಂದಿದ್ದಾರೆ ಎಂದು ಉಪೇಂದ್ರ ಮಾಹಿತಿ ನೀಡಿದ್ದಾರೆ.

    ಸಹ ಕಲಾವಿದರಿಗೆ ಶೋಭರಾಜ್ ನೆರವು

    ಸಹ ಕಲಾವಿದರಿಗೆ ಶೋಭರಾಜ್ ನೆರವು

    ಖ್ಯಾತ ನಟ ಶೋಭರಾಜ್ ರವರು ಸಹ ಕಲಾವಿದರಿಗೆ ಕಿಟ್ ನೀಡಲು ಹತ್ತು ಸಾವಿರ ರೂಪಾಯಿ ನೀಡಿದ್ದಾರೆ ಎಂದು ಉಪೇಂದ್ರ ಟ್ವೀಟ್ ಮಾಡಿ ತಿಳಿಸಿದ್ದಾರೆ.

    'ರಾಜಕೀಯದಿಂದ ಹಣ ಕಿತ್ತಾಕಿ, ಎಲ್ಲವೂ ಉತ್ತಮವಾಗುತ್ತದೆ - ಉಪೇಂದ್ರ'ರಾಜಕೀಯದಿಂದ ಹಣ ಕಿತ್ತಾಕಿ, ಎಲ್ಲವೂ ಉತ್ತಮವಾಗುತ್ತದೆ - ಉಪೇಂದ್ರ

    ಪವನ್ ಪಡೆಯರ್ ನೆರವು

    ಪವನ್ ಪಡೆಯರ್ ನೆರವು

    ಖ್ಯಾತ ನಿರ್ದೇಶಕ ಪವನ್ ಒಡೆಯರ್ 20 ಸಾವಿರ ರೂಪಾಯಿ ಕೊಟ್ಟಿದ್ದಾರೆ. ಕೆ ಎಫ್ ಎಮ್ಎ ಚಲನಚಿತ್ರ ಸಂಗೀತ ಕಲಾವಿದರಿಗೆ ನೀಡಲು ತಿಳಿಸಿದ್ದಾರೆ ಎಂದು ಉಪ್ಪಿ ಮಾಹಿತಿ ಹಂಚಿಕೊಂಡಿದ್ದಾರೆ.

    Recommended Video

    Rashmika Mandanna ಬಾಲಿವುಡ್ ಎಂಟ್ರಿ ಕೊಡೋದಕ್ಕೆ ಹೆಲ್ಪ್ ಮಾಡಿದ್ದು ಯಾರು ಗೊತ್ತಾ? | Filmibeat Kannada
    ಮಾಜಿ ಶಾಸಕರ ಪುತ್ರನಿಂದ ನೆರವು

    ಮಾಜಿ ಶಾಸಕರ ಪುತ್ರನಿಂದ ನೆರವು

    - ದಾವಣಗೆರೆ ಮಾಜಿ ಶಾಸಕರು ಯಜಮಾನ್ ಮೋತಿ ವೀರಣ್ಣ ಅವರ ಪುತ್ರ ಯಜಮಾನ್ ಮೋತಿ ರಾಜೇಂದ್ರ ಅವರು ಒಂದು ಲಕ್ಷ ರೂಪಾಯಿ ದೇಣಿಗೆ ನೀಡಲು ಮುಂದಾಗಿದ್ದಾರೆ. ಆ ಹಣವನ್ನು ನಮ್ಮ ಚಲನಚಿತ್ರ ನಿರ್ದೇಶಕರ ಸಂಘಕ್ಕೆ ನೀಡಲು ಸೂಚಿಸಿದ್ದಾರೆ.

    - "ಉನ್ನತಿ" ತಂಡದವರು ಕರೋನಾ ಸಂತ್ರಸ್ಥರಿಗೆ ದಿನಸಿ ಕಿಟ್ ಗಳನ್ನು ವಿತರಿಸಲು 20000/- ರೂಪಾಯಿಗಳನ್ನು ಉಪ್ಪಿ ಫೌಂಡೇಷನ್ ಖಾತೆಗೆ ಸ್ವಯಂಪ್ರೇರಿತರಾಗಿ ವರ್ಗಾವಣೆ ಮಾಡಿರುತ್ತಾರೆ ಎಂದು ಉಪೇಂದ್ರ ತಿಳಿಸಿದ್ದಾರೆ.

    English summary
    Sadhu Kokila, B Sarojadevi, Shobaraj Join Hands With Upendra to Help Sandalwood Film Workers.
    Tuesday, May 11, 2021, 16:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X