twitter
    For Quick Alerts
    ALLOW NOTIFICATIONS  
    For Daily Alerts

    ಸಂಕಷ್ಟದಲ್ಲಿರುವ ಬಡಜನರಿಗೆ ಆಹಾರ ಸಾಮಗ್ರಿ ಹಂಚಿದ ಸಾಧು ಕೋಕಿಲ

    |

    ಲಾಕ್‌ಡೌನ್‌ನಿಂದ ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾದವರು ನಿರ್ಗತಿಕರು, ದಿನಗೂಲಿ ನೌಕರರು ಮತ್ತು ಗುಳೆ ಹೋದವರು. ಬಡತನದಲ್ಲಿರುವ ಕುಟುಂಬಗಳು ಆಹಾರ, ದವಸ ಧಾನ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ಅವರಿಗೆ ಸರ್ಕಾರ ಸಹಾಯ ಮಾಡುವುದಾಗಿ ಘೋಷಿಸಿದ್ದರೂ ಅದು ತಲುಪುತ್ತಿಲ್ಲ. ಈ ನಡುವೆ ಸಿನಿಮಾ-ಕಿರುತೆರೆ ಕಲಾವಿದರು, ತಂತ್ರಜ್ಞರು ಮುಂತಾದವರು ತಮ್ಮಿಂದಾದ ರೀತಿಯಲ್ಲಿ ತಮ್ಮ ಸುತ್ತಲಿನ ಬಡವರಿಗೆ ಸಹಾಯ ಮಾಡುತ್ತಿದ್ದಾರೆ.

    Recommended Video

    ಕೋತಿ ತಾನು ಕೆಡೋದಲ್ದೆ ವನವನ್ನೆಲ್ಲ ಕೆಡುಸ್ತಂತೆ ಹಾಗೆ ಮಾಡಬೇಡಿ | Sadhu kokila | Stay home Stay safe | Virus

    ನಟ, ಸಂಗೀತ ನಿರ್ದೇಶಕ ಸಾಧುಕೋಕಿಲ ಸಂಕಷ್ಟದಲ್ಲಿರುವ ಬಡಜನರ ಕಣ್ಣೀರಿಗೆ ಮರುಗಿದ್ದಾರೆ. ಅವರ ಹಸಿವು ನೀಗಿಸಲು ಪ್ರಯತ್ನಿಸುತ್ತಿದ್ದಾರೆ. ತಮ್ಮ ಮನೆ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಜನರ ಪರಿಸ್ಥಿತಿಯನ್ನು ಅವಲೋಕಿಸಿರುವ ಸಾಧು ಕೋಕಿಲ ಅವರಿಗೆ ಆಹಾರ ಸಾಮಗ್ರಿಗಳನ್ನು ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಮುಂದೆ ಓದಿ...

    ಬಡಜನರಿಗೆ ವಿತರಣೆ

    ಬಡಜನರಿಗೆ ವಿತರಣೆ

    ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿ ವಾಸಿಸುತ್ತಿರುವ ಸಾಧು ಕೋಕಿಲ, ತಮ್ಮ ಮನೆ ಸಮೀಪದ ಕೊಳೆಗೇರಿಗೆ ತೆರಳಿ ಅಲ್ಲಿನ ನಿವಾಸಿಗಳನ್ನು ಮಾತನಾಡಿಸಿ ಅವರ ಅಗತ್ಯಗಳನ್ನು ತಿಳಿದುಕೊಂಡಿದ್ದಾರೆ. ನಂತರ ಅಂಗಡಿಗಳಿಂದ ಆಹಾರ ಪದಾರ್ಥಗಳನ್ನು ಖರೀದಿಸಿ ಬಡ ಜನರಿಗೆ ವಿತರಿಸಿದ್ದಾರೆ.

    ದೀಪದ ಬೆಳಕಲ್ಲಿ ಹೊಳೆದ ತಾರೆಯರು: ಕೊರೊನಾ ಮಾರಿಗೆ ಬೆಳಕಿನ ಸೆಡ್ಡುದೀಪದ ಬೆಳಕಲ್ಲಿ ಹೊಳೆದ ತಾರೆಯರು: ಕೊರೊನಾ ಮಾರಿಗೆ ಬೆಳಕಿನ ಸೆಡ್ಡು

    ಅಗತ್ಯವಿದ್ದವರಿಗೆ ಸಿಗಬೇಕು

    ಅಗತ್ಯವಿದ್ದವರಿಗೆ ಸಿಗಬೇಕು

    ನಾವು ಸಾಕಷ್ಟು ಆಹಾರ ಸಾಮಗ್ರಿಗಳನ್ನು ತಂದಿದ್ದೇವೆ. ಆದರೆ ಯಾರಿಗೆ ವಿತರಿಸಬೇಕೆಂದು ತಿಳಿಯುತ್ತಿಲ್ಲ. ನಿಜವಾಗಿಯೂ ತೀರಾ ಅಗತ್ಯವಿದ್ದವರಿಗೇ ಅದು ದೊರೆತರೆ ನಮಗೆ ಸಮಾಧಾನವಾಗುತ್ತದೆ. ಅವರಿಗೂ ಅದರಿಂದ ತೃಪ್ತಿ ಸಿಗುತ್ತದೆ ಎಂದ ಸಾಧು ಕೋಕಿಲ ಹೇಳಿದರು.

    ಸರ್ಕಾರವೇ ಪಟ್ಟಿ ನೀಡಲಿ

    ಸರ್ಕಾರವೇ ಪಟ್ಟಿ ನೀಡಲಿ

    ಯಾರಿಗೆ ಆಹಾರದ ಅಗತ್ಯವಿದೆ ಎಂಬುದು ನಮಗೆ ತಿಳಿಯುವುದಿಲ್ಲ. ಹೀಗಾಗಿ ಸರ್ಕಾರವೇ ಅಂತಹ ಅಗತ್ಯವಿರುವ ಜನರ ಪಟ್ಟಿಯನ್ನು ಸಿದ್ಧಪಡಿಸಬೇಕು. ಮನೆಗಳನ್ನು ಲಿಸ್ಟ್‌ ಮಾಡಿ ಅದನ್ನು ತಿಳಿಸಬೇಕು. ಸಹಾಯ ಮಾಡಲು ಸಿದ್ಧರಿರುವವರನ್ನು ಅಲ್ಲಿಗೆ ಕಳುಹಿಸಬೇಕು ಎಂದು ಅಭಿಪ್ರಾಯಪಟ್ಟರು.

    ಬಡವರಿಗೆ ಊಟ, ಪ್ರಾಣಿ-ಪಕ್ಷಿಗಳಿಗೆ ನೀರುಣಿಸುತ್ತಿರುವ 'ಜೊತೆ ಜೊತೆಯಲಿ' ಅನುಬಡವರಿಗೆ ಊಟ, ಪ್ರಾಣಿ-ಪಕ್ಷಿಗಳಿಗೆ ನೀರುಣಿಸುತ್ತಿರುವ 'ಜೊತೆ ಜೊತೆಯಲಿ' ಅನು

    ಕಾರ್ಪೊರೇಟರ್‌ಗಳು ಮಾಡಬೇಕು

    ಕಾರ್ಪೊರೇಟರ್‌ಗಳು ಮಾಡಬೇಕು

    ಸಚಿವರು, ಶಾಸಕರು ಅವರವರ ಕೆಲಸಗಳಲ್ಲಿ ಬಿಜಿಯಾಗಿರುತ್ತಾರೆ. ಆದರೆ ಅವರ ಪ್ರದೇಶಗಳ ಬಗ್ಗೆ ಕಾರ್ಪೊರೇಟರ್‌ಗಳಿಗೆ ಗೊತ್ತಿರುತ್ತದೆ. ಅವರ ಕಾರ್ಯಕರ್ತರ ಸಹಾಯದಿಂದ ಬಡಜನರ ಮನೆಗಳನ್ನು ಗುರುತಿಸಿ ಅವರಿಗೆ ಆಹಾರದ ಅಗತ್ಯವಿದೆ ಎಂದು ಮಾಹಿತಿ ನೀಡಿದರೆ ಅಂತಹವರಿಗೆ ನಾವು ನೀಡಬಹುದು. ತುಂಬಾ ಜನರು ಹೀಗೆ ಜನರಿಗೆ ವಿತರಿಸಲು ಆಹಾರ ಪದಾರ್ಥಗಳನ್ನು ತಂದಿದ್ದಾರೆ. ಆದರೆ ಯಾರಿಗೆ ಹಂಚಬೇಕೆನ್ನುವುದೇ ಗೊತ್ತಾಗುತ್ತಿಲ್ಲ ಎಂದರು.

    ಸ್ಲಂಗಳಲ್ಲಿ ರಾಸಾಯನಿಕ ಹೊಡೆಯುತ್ತಿದ್ದಾರೆ

    ಸ್ಲಂಗಳಲ್ಲಿ ರಾಸಾಯನಿಕ ಹೊಡೆಯುತ್ತಿದ್ದಾರೆ

    ಅಗತ್ಯ ವಸ್ತುಗಳನ್ನು ಕೊಳ್ಳಲು ಜನರು ಮನೆಯಿಂದ ಹೊರಬರುತ್ತಲೇ ಇದ್ದಾರೆ. ವ್ಯವಸ್ಥೆಯನ್ನು ಸರಿಪಡಿಸಿದರೆ ಜನರು ಹೊರಗೆ ಬರುವುದಿಲ್ಲ. ಕಾರ್ಪೊರೇಟರ್‌ಗಳು ಕೆಲಸ ಮಾಡುತ್ತಿಲ್ಲ. ಎಲ್ಲೆಂದರಲ್ಲಿ ರಾಸಾಯನಿಕಗಳನ್ನು ಸಿಂಪಡಿಸುತ್ತಿದ್ದಾರೆ. ವಿದೇಶದಿಂದ ಬಂದವರೇ ಕೊರೊನಾ ತರುತ್ತಿದ್ದಾರೆ. ಅವರು ಇರುವ ಪ್ರದೇಶಗಳಲ್ಲಿ ಬಿಟ್ಟು ಸ್ಲಂಗಳಲ್ಲಿ ರಾಸಾಯನಿಕಗಳನ್ನು ಸಿಂಪಡಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    English summary
    Actor Sadhu Kokila has comes forward to help poor people who are in trouble to get food during this lockdown time.
    Monday, April 6, 2020, 10:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X