twitter
    For Quick Alerts
    ALLOW NOTIFICATIONS  
    For Daily Alerts

    Sadhu Kokila: ಡಬ್ ಮಾಡಲಾಗದೆ 10 ಬಾರಿ ಹೊರಬಂದಿದ್ದ ಸಾಧುಕೋಕಿಲ: ಡಬ್ಬಿಂಗ್ ಮುಗಿಸಿದ್ದೇಗೆ?

    |

    ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನ ಇನ್ನೂ ಕನಸು ಎನ್ನುವಂತೆಯೇ ಇದೆ. ಫಿಟ್ ಅಂಡ್ ಫೈನ್ ಆಗಿದ್ದ ಪವರ್ ಸ್ಟಾರ್ ದಿಢೀರನೇ ಕಣ್ಮರೆಯಾಗುವುದು ಅಂದ್ರೇನು? ಈ ಕಹಿ ಘಟನೆಯನ್ನು ಅಭಿಮಾನಿಗಳು ಇಂದಿಗೂ ಅರಗಿಸಿಕೊಂಡಿಲ್ಲ. ಅದಕ್ಕೆ ಸಿನಿಮಾ ನೋಡಿವಾಗ, ಪವರ್‌ಸ್ಟಾರ್ ಅಭಿಮಾನಿಗಳ ಕಣ್ಣುಗಳು ಒದ್ದೆಯಾಗಿದ್ದವು. ಸಿನಿಮಾ ನೋಡಿದ ಬಳಿಕವೂ ಅಪ್ಪು ಫ್ಯಾನ್ಸ್ ಅಳುವುದನ್ನು ನಿಲ್ಲಿಸಿಲ್ಲ. ಅಭಿಮಾನಿಗಳಿಗೆ ಹೀಗಾಗಿರಬೇಕಾದರೆ, ಅಪ್ಪು ಜೊತೆ ಸಾಕಷ್ಟ ಸಿನಿಮಾಗಳಲ್ಲಿ ನಟಿಸಿದ್ದ ಕಲಾವಿದರಿಗೆ ಹೇಗಾಗಬೇಡ.

    ಸಾಧು ಕೋಕಿಲಾ 'ಜೇಮ್ಸ್' ಸಿನಿಮಾದಲ್ಲಿ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಂತ ಇದೊಂದೇ ಸಿನಿಮಾ ಅಲ್ಲ. ಪುನೀತ್ ನಟಿಸಿದ ಕೆಲವು ಸಿನಿಮಾಗಳಲ್ಲಿ ಸಾಧುಕೋಕಿಲಾ ಕಾಮಿಡಿ ಸನ್ನಿವೇಶಗಳಲ್ಲಿ ಕಂಡಿದ್ದಾರೆ. ಆಗ ತಮ್ಮ ಪಾತ್ರಗಳಿಗೆ ಲೀಲಾಜಾಲಾವಾಗಿ ಡಬ್ಬಿಂಗ್ ಮಾಡಿದ್ದ ಸಾಧು, 'ಜೇಮ್ಸ್' ಸಿನಿಮಾಗೆ ಡಬ್ ಮಾಡುವಾಗ ಪರದಾಡಿದ್ದರು.

    2 ಹೆಲಿಕಾಪ್ಟರ್, ಪಟಾಕಿ, 10 ಜೆಸಿಬಿ, ಪೋಸ್ಟರ್, ಫ್ಲೆಕ್ಸ್‌ಗಳಿಗೆ ಅಪ್ಪು ಫ್ಯಾನ್ಸ್ ಖರ್ಚು ಮಾಡಿದ್ದೆಷ್ಟು?2 ಹೆಲಿಕಾಪ್ಟರ್, ಪಟಾಕಿ, 10 ಜೆಸಿಬಿ, ಪೋಸ್ಟರ್, ಫ್ಲೆಕ್ಸ್‌ಗಳಿಗೆ ಅಪ್ಪು ಫ್ಯಾನ್ಸ್ ಖರ್ಚು ಮಾಡಿದ್ದೆಷ್ಟು?

    ಸಾಧು ಕೋಕಿಲಾ ಪವರ್‌ಸ್ಟಾರ್ ಜೊತೆ ತುಂಬಾನೇ ಆತ್ಮೀಯರಾಗಿದ್ದರು. ಅಪ್ಪು ಕಳೆದುಕೊಂಡ ಸಾಧು ಕೂಡ ದು:ಖದಲ್ಲಿದ್ದಾರೆ. ಆದರೆ, 'ಜೇಮ್ಸ್' ಸಿನಿಮಾಗೆ ಡಬ್ಬಿಂಗ್ ಮಾಡುವಾಗ ಸಾಧುಕೋಕಿಲಾ ಕೈ ಕಾಲುಗಳು ನಡುಗಿದ್ದವಂತೆ. ಡಬ್ಬಿಂಗ್ ವೇಳೆ ಪುನೀತ್ ಜೊತೆಗೆ ನಟಿಸಿದ ದೃಶ್ಯಗಳಿಗೆ ಸಾಧುಗೆ ಆದ ವಿಚಿತ್ರ ಅನುಭವಗಳನ್ನು ಹಂಚಿಕೊಂಡಿದ್ದಾರೆ.

    ''ಡಬ್ ಮಾಡುವಾಗ ಕೈ ಕಾಲು ನಡುಗುತ್ತಿತ್ತು''

    ''ಡಬ್ ಮಾಡುವಾಗ ಕೈ ಕಾಲು ನಡುಗುತ್ತಿತ್ತು''

    'ಜೇಮ್ಸ್' ಸಿನಿಮಾದಲ್ಲಿ ಸಾಧು ಕೋಕಿಲಾ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅಸಿಸ್ಟೆಂಟ್ ಪಾತ್ರದಲ್ಲಿ ಸಾಧು ಕೋಕಿಲಾ ನಟಿಸಿದ್ದಾರೆ. ಈ ಹೀಗಾಗಿ ಡಬ್ಬಿಂಗ್ ಮಾಡುವಾಗ ಸಾಧುಗೆ ತುಂಬಾನೇ ಕಷ್ಟ ಆಗಿತ್ತಂತೆ. " ಜೇಮ್ಸ್ ಸಿನಿಮಾ ಡಬ್ಬಿಂಗ್ ಮಾಡುವಾಗ ಥಿಯೇಟರ್‌ಗೆ 10 ಬಾರಿ ಹೋಗಿದ್ದೇನೆ. ಡಬ್ ಮಾಡುವುದಕ್ಕೆ ಆಗಿಲ್ಲ. ಕೂತುಕೊಂಡಾಗಲೆಲ್ಲಾ ಕೈ ಕಾಲುಗಳೆಲ್ಲಾ ನಡುಕ ಬಂದುಬಿಟ್ಟಿತ್ತು. ಅವರು ನೋಡಿದಾಗಲೆಲ್ಲಾ ವಾಯ್ಸ್ ಬಿದ್ದು ಹೋಗುತ್ತೆ. ಒಂದು ದಿನ ನಾನು ಡಿಸೈಡ್ ಮಾಡಿದೆ. ಯಾಕೆ, ನಮ್ಮ ಜೊತೆನೇ ಇದ್ದಾರೆ. ಏನ್ ಸಾರ್ ಇವಾಗ? ಅಂತ ಹೋಗಿ ಮಾತಾಡಿಸಿದೆ. ಕೂತುಕೊಂಡೆ. ಡಬ್ಬಿಂಗ್ ಮುಗಿಸಿದೆ." ಎನ್ನುತ್ತಾರೆ ಸಾಧು ಕೋಕಿಲಾ.

    ವಿಶ್ವದಾದ್ಯಂತ 4 ಸಾವಿರ ಸ್ಕ್ರೀನ್‌ಗಳಲ್ಲಿ 'ಜೇಮ್ಸ್' ಜಾತ್ರೆ: ಚಿತ್ರಮಂದಿರದ ಮುಂದೆ ಹೇಗಿದೆ ಸಂಭ್ರಮ?ವಿಶ್ವದಾದ್ಯಂತ 4 ಸಾವಿರ ಸ್ಕ್ರೀನ್‌ಗಳಲ್ಲಿ 'ಜೇಮ್ಸ್' ಜಾತ್ರೆ: ಚಿತ್ರಮಂದಿರದ ಮುಂದೆ ಹೇಗಿದೆ ಸಂಭ್ರಮ?

    ಅಪ್ಪು ಬಾಲ್ಯದ ಫೋಟೊ ಕಣ್ಮುಂದೆ ಬರುತ್ತೆ.

    ಅಪ್ಪು ಬಾಲ್ಯದ ಫೋಟೊ ಕಣ್ಮುಂದೆ ಬರುತ್ತೆ.

    ಪುನೀತ್ ರಾಜ್‌ಕುಮಾರ್ ಬಹುತೇಕ ಸಿನಿಮಾಗಳಲ್ಲಿ ಹಾಸ್ಯ ಪಾತ್ರದಲ್ಲಿ ಮಿಂಚಿದ್ದ ಸಾಧುಗೆ ಆತ್ಮೀಯರಾಗಿದ್ದರು. ಹಳೆಯ ಒಡನಾಟ. ಆದರೆ, ಅಪ್ಪು ಅಗಲಿಕೆಯಿಂದ ಸಾಧು ಕೋಕಿಲಾ ಮನಸ್ಸಿಗೂ ತುಂಬಾನೇ ನೋವಾಗಿದೆ. ಈ ನೋವಿನಿಂದ ಹೊರಬರಲು ಹೊಸ ಉಪಾಯವನ್ನು ಕಂಡುಕೊಂಡಿದ್ದಾರೆ. "ಅಪ್ಪು ಸರ್ ನೆನಪಿಸಿಕೊಂಡಾಗಲೆಲ್ಲಾ ಅವರ ಚಿಕ್ಕ ವಯಸ್ಸಿನ ಫೋಟೊ ನೋಡಿಕೊಂಡರೆ ಸಾಕು, ಅಪ್ಪು ಇನ್ನೂ ಚಿಕ್ಕ ವಯಸ್ಸಿನವರಾಗೇ ಇದ್ದಾರೆ ಅಂತ ಅನಿಸುತ್ತೆ. ಭಕ್ತಪ್ರಹ್ಲಾದ, ಬೆಟ್ಟದ ಹೂವು ಸಿನಿಮಾ ನೋಡಿದಾಗಲೆಲ್ಲಾ ಅವರೇ ನೆನಪಾಗುತ್ತಾರೆ." ಅನ್ನೋದು ಸಾಧು ಅಭಿಪ್ರಾಯ.

    ಅಪ್ಪು ಬರ್ತ್‌ಡೆಯನ್ನು ಅಭಿಮಾನಿ ದಿನ ಆಗ್ಬೇಕು

    ಅಪ್ಪು ಬರ್ತ್‌ಡೆಯನ್ನು ಅಭಿಮಾನಿ ದಿನ ಆಗ್ಬೇಕು

    ರಾಜ್ಯದ ಮೂಲೆ ಮೂಲೆಯಲ್ಲೂ ಅಪ್ಪು ಅಭಿಮಾನಿಗಳು ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸುತ್ತಿದ್ದಾರೆ. ಇದರೊಂದಿಗೆ 'ಜೇಮ್ಸ್' ಸಿನಿಮಾ ಬಿಡುಗಡೆಯಾಗಿದ್ದು, ಅಭಿಮಾನಿಗಳಿಗೆ ಡಬಲ್ ಧಮಾಕಾ. ಈ ಕಾರಣಕ್ಕೆ ಅಪ್ಪು ಹುಟ್ಟುಹಬ್ಬವನ್ನು ಶಾಶ್ವತವಾಗಿಡಲು ಅಭಿಮಾನಿ ದಿನಾಚರಣೆ ಆಚರಿಸಬೇಕು ಅಂತಾರೆ. "ಇವತ್ತು ಆಗ್ತಿರೋ ಈ ಸಂಭ್ರಮ ನೋಡುತ್ತಿದ್ದರೆ, ಇವತ್ತು ಎಲ್ಲರೂ ಅಭಿಮಾನಿಗಳ ದಿನಾಚರಣೆ ಅಂತ ನಿಜವಾಗಲೂ ಘೋಷಣೆ ಮಾಡಬೇಕು. ಅಷ್ಟು ಸಂಭ್ರಮ ಮಾಡುತ್ತಿದ್ದಾರೆ." ಎನ್ನುವುದು ಸಾಧು ಅಭಿಪ್ರಾಯ.

    'ಜೇಮ್ಸ್' ರಿಲೀಸ್ ಆಗಲಿರುವ ಥಿಯೇಟರ್‌ಗಳ ಪಟ್ಟಿ ಬಿಡುಗಡೆ: ಪ್ರಮುಖ ಚಿತ್ರಮಂದಿರಗಳ್ಯಾವುವು?'ಜೇಮ್ಸ್' ರಿಲೀಸ್ ಆಗಲಿರುವ ಥಿಯೇಟರ್‌ಗಳ ಪಟ್ಟಿ ಬಿಡುಗಡೆ: ಪ್ರಮುಖ ಚಿತ್ರಮಂದಿರಗಳ್ಯಾವುವು?

    ಎಲ್ಲೆಲ್ಲೂ 'ಜೇಮ್ಸ್' ಜಾತ್ರೆ

    ಎಲ್ಲೆಲ್ಲೂ 'ಜೇಮ್ಸ್' ಜಾತ್ರೆ

    ಅಪ್ಪು ಆಸೆಯಂತೆಯೇ 'ಜೇಮ್ಸ್' ಸಿನಿಮಾವನ್ನು ಅವರ ಹುಟ್ಟುಹಬ್ಬದಂದೇ ಬಿಡುಗಡೆ ಮಾಡಲಾಗಿದೆ. ಬೆಳಗ್ಗೆಯಿಂದಲೇ ಈ ಸಿನಿಮಾವನ್ನು ಅಭಿಮಾನಿಗಳು ನೋಡಿ ಸಂಭ್ರಮಿಸಿದ್ದಾರೆ. ಕೆಲವು ಅಭಿಮಾನಿಗಳು ಭಾವುಕರಾಗಿದ್ದಾರೆ. ಇನ್ನೂ ನಾಲ್ಕು ದಿನ ಅಪ್ಪು ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಣೆ ಮಾಡುವುದಕ್ಕೆ ಫ್ಯಾನ್ಸ್ ಸಜ್ಜಾಗಿದ್ದಾರೆ.

    English summary
    Sadhu Kokila find difficult to dub for Puneeth Rajkumar Movie James movie, Know more.
    Thursday, March 17, 2022, 16:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X