twitter
    For Quick Alerts
    ALLOW NOTIFICATIONS  
    For Daily Alerts

    ಸಾಧುಕೋಕಿಲ ವಿರುದ್ಧ ಅತ್ಯಾಚಾರ ಆರೋಪ: ಸರ್ಕಾರಕ್ಕೆ ನೋಟಿಸ್ ನೀಡಿದ ಹೈಕೋರ್ಟ್

    |

    2017ರ ಡಿಸೆಂಬರ್ ತಿಂಗಳಲ್ಲಿ ಹಾಸ್ಯನಟ ಸಾಧುಕೋಕಿಲ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿತ್ತು. ಮಂಡ್ಯದ ಮಸಾಜ್ ಪಾರ್ಲರ್ ನಲ್ಲಿ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಮೈಸೂರಿನ ಸರಸ್ವತಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮ್ಯಾಜಿಸ್ಟ್ರೇಟ್ ಹೈಕೋರ್ಟ್ ಸಾಧುಕೋಕಿಲ ಅವರಿಗೆ ಸಮನ್ಸ್ ನೀಡಿತ್ತು. ಸಮನ್ಸ್ ರದ್ದು ಕೋರಿ ಸಾಧುಕೋಕಿಲ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.

    ಮಂಡ್ಯ ರಮೇಶ್, ಸಾಧುಕೋಕಿಲ ಮೇಲೆ ಲೈಂಗಿಕ ಶೋಷಣೆ ಆರೋಪ!

    ಒಂದು ವಾರದೊಳಗೆ ಸಾಧು ಕೋಕಿಲ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ನೀಡಿ, ಸಾಕ್ಷ್ಯ ಸಂಗ್ರಹಿಸಿದ್ದಲ್ಲಿ ಕೋರ್ಟ್ ಮುಂದೆ ಹಾಜರ್ ಪಡಿಸಿ ಎಂದು ಸೂಚಿಸಿದೆ.

    Sadhu Kokila Massage Parlour Case: High Court Gives Notice To Government

    ಇದಕ್ಕೂ ಮುಂಚೆ ಸಾಧುಕೋಕಿಲ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಚಂದ್ರಮೌಳಿ ''ಸಾಧುಕೋಕಿಲ ಪಾರ್ಲರ್ ಗೆ ಬಂದಿರಲಿಲ್ಲ ಎಂದು ಅವರ ವಿರುದ್ಧದ ಎಲ್ಲ ಸಾಕ್ಷ್ಯಿಗಳು ಹೇಳಿಕೆ ನೀಡಿದ್ದಾರೆ. ಈ ಪ್ರಕರಣ ಮುಂದುವರೆದರೆ ಹಾಸ್ಯ ನಟನ ತೇಜೋವಧೆ ಆಗುತ್ತೆ. ಪೊಲೀಸರು ಕಾನೂನಿನ ಅಡಿಯಲ್ಲಿ ತನಿಖೆ ನಡೆಸಿಲ್ಲ. ನಾನು ಅಲ್ಲಿಗೆ ಹೋಗಿಲ್ಲ ಅಂದ ಮೇಲೂ ಚಾರ್ಜ್ ಶೀಟ್ ಉಲ್ಲೇಖಿಸಿದ್ದಾರೆ. ಈ ಚಾರ್ಜ್ ಶೀಟ್ ರದ್ದುಗೊಳಿಸಬೇಕು'' ಎಂದು ಮನವಿ ಮಾಡಿದ್ದರು.

    ಮಸಾಜ್ ಸೆಂಟರ್ ಪ್ರಕರಣ: ನಟ ಸಾಧು ಕೋಕಿಲಗೆ ನಿರೀಕ್ಷಣಾ ಜಾಮೀನು

    ಪ್ರಕರಣದ ಹಿನ್ನೆಲೆ

    2017ರ ಡಿಸೆಂಬರ್ ತಿಂಗಳಲ್ಲಿ ಮೈಸೂರಿನ ಸರಸ್ವತಿಪುರ ಪೊಲೀಸ್ ಠಾಣೆಯಲ್ಲಿ ಯುವತಿಯೊಬ್ಬಳು ಮಂಡ್ಯ ರಮೇಶ್ ಮತ್ತು ಸಾಧುಕೋಕಿಲ ವಿರುದ್ಧ ದೂರು ನೀಡಿದ್ದರು. ಮಸಾಜ್ ಪಾರ್ಲರ್ ಗೆ ಬಂದಿದ್ದ ವೇಳೆ ಬಲವಂತವಾಗಿ ಅತ್ಯಾಚಾರ ಮಾಡಲಾಗಿದೆ ಎಂದು ಆರೋಪಿಸಿದ್ದರು. ಈ ಸಂಬಂಧ ಪೊಲೀಸರು ತನಿಖೆ ನಡೆಸಿ, ದೋಷಾರೋಪಣ ಪಟ್ಟಿಯಲ್ಲಿ ಸಾಧುಕೋಕಿಲ ಹೆಸರು ಸೇರಿಸಿದ್ದರು.

    English summary
    High court gives notice to government in sadhu kokila massage parlour case.
    Wednesday, October 23, 2019, 17:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X