For Quick Alerts
  ALLOW NOTIFICATIONS  
  For Daily Alerts

  ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನಟ ಸಾಧು ಕೋಕಿಲಾಗೆ ಬಿಗ್ ರಿಲೀಫ್

  |
  ಲೈಂಗಿಕ ಕಿರಿಕುಳ ಕೇಸ್ ನಲ್ಲಿ ಹೈ ಕೋರ್ಟ್ ಸಾಧುಕೋಕಿಲ ಗೆ ಹೇಳಿದ್ದೇನು ಗೊತ್ತಾ..?

  ಮಂಡ್ಯದ ಮಸಾಜ್ ಪಾರ್ಲರ್ ನಲ್ಲಿ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ನಟ ಸಾಧು ಕೋಕಿಲಾ ಅವರ ಪ್ರಕರಣದಲ್ಲಿ ವಿಚಾರಣೆ ನಡೆಸಿದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

  2017ರ ಡಿಸೆಂಬರ್ ತಿಂಗಳಲ್ಲಿ ಮೈಸೂರಿನ ಸರಸ್ವತಿಪುರ ಪೊಲೀಸ್ ಠಾಣೆಯಲ್ಲಿ ಸಾಧುಕೋಕಿಲಾ ಮತ್ತು ಮಂಡ್ಯ ರಮೇಶ್ ವಿರುದ್ಧ ದೂರು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮ್ಯಾಜಿಸ್ಟ್ರೇಟ್ ಹೈಕೋರ್ಟ್ ಸಾಧುಕೋಕಿಲ ಅವರಿಗೆ ಸಮನ್ಸ್ ನೀಡಿತ್ತು.

  ಸಮನ್ಸ್ ರದ್ದು ಕೋರಿ ಸಾಧುಕೋಕಿಲ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಕೆಲವು ದಿನಗಳ ಹಿಂದೆ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿತ್ತು.

  ಸಾಧು ಕೋಕಿಲ ಅತ್ಯಾಚಾರ ಆರೋಪ ಪ್ರಕರಣ: ರಾಜ್ಯ ಸರ್ಕಾರಕ್ಕೆ ನೋಟಿಸ್

  ಇದೀಗ, ನ್ಯಾ. ಜಿ ನರೇಂದರ್ ಅವರಿದ್ದ ನ್ಯಾಯಪೀಠವು, ಅರ್ಜಿದಾರರ ವಿರುದ್ಧ ಆರೋಪ ಸಾಬೀತುಪಡಿಸುವಂಥ ಅಂಶಗಳಿಲ್ಲ ಎಂದು ಅಭಿಪ್ರಾಯಪಟ್ಟಿದ್ದು, ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

  ಪ್ರಕರಣದ ಹಿನ್ನೆಲೆ

  2017ರ ಡಿಸೆಂಬರ್ ತಿಂಗಳಲ್ಲಿ ಮೈಸೂರಿನ ಸರಸ್ವತಿಪುರ ಪೊಲೀಸ್ ಠಾಣೆಯಲ್ಲಿ ಯುವತಿಯೊಬ್ಬಳು ಮಂಡ್ಯ ರಮೇಶ್ ಮತ್ತು ಸಾಧುಕೋಕಿಲ ವಿರುದ್ಧ ದೂರು ನೀಡಿದ್ದರು. ಮಸಾಜ್ ಪಾರ್ಲರ್ ಗೆ ಬಂದಿದ್ದ ವೇಳೆ ಬಲವಂತವಾಗಿ ಅತ್ಯಾಚಾರ ಮಾಡಲಾಗಿದೆ ಎಂದು ಆರೋಪಿಸಿದ್ದರು. ಈ ಸಂಬಂಧ ಪೊಲೀಸರು ತನಿಖೆ ನಡೆಸಿ, ದೋಷಾರೋಪಣ ಪಟ್ಟಿಯಲ್ಲಿ ಸಾಧುಕೋಕಿಲ ಹೆಸರು ಸೇರಿಸಿದ್ದರು.

  English summary
  Sadhu Kokila Massage Parlour Case: High Court stayed a summons order issued by mysore magistrate court against sadhukokila.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X