twitter
    For Quick Alerts
    ALLOW NOTIFICATIONS  
    For Daily Alerts

    ಮೇಕೆದಾಟು ಪಾದಯಾತ್ರೆಯಲ್ಲಿ ಸಾಧುಕೋಕಿಲಾ ಭಾಗಿ: ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದಿಲ್ಲ ಎಂದ ಹಾಸ್ಯ ನಟ

    |

    ಮೇಕೆದಾಟು ಯೋಜನೆ ಜಾರಿಗೆ ತರೆಲೇಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದಿಂದ ಪಾದಯಾತ್ರೆಗೆ ಚಾಲನೆ ನೀಡಲಾಗಿದೆ. ವೀಕೆಂಡ್ ಕರ್ಪ್ಯೂ ಆದೇಶ ಜಾರಿಯಲ್ಲಿ ಇದ್ದರೂ, ಅದನ್ನು ಧಿಕ್ಕರಿಸಿ ಪಾದಾಯಾತ್ರೆಗೆ ಜಾಲನೆ ನೀಡಲಾಗಿದೆ. ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಮೇಕೆದಾಟು ಸಂಗಮದಿಂದ ಪಾದಯಾತ್ರೆ ಆರಂಭಗೊಂಡಿದೆ. ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿಕೆ ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವೀರಪ್ಪ ಮೋಯ್ಲಿ, ಎಂಬಿ ಪಾಟೀಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದಾರೆ.

    ಈ ಮೇಕೆದಾಟು ಪಾದಯಾತ್ರೆಯಲ್ಲಿ ಕನ್ನಡ ಚಲನ ಚಿತ್ರರಂಗ ಕೂಡ ಭಾಗವಹಿಸುವುದಾಗಿ ಹೇಳಿತ್ತು. ಆದರೆ, ಯಾವುದೇ ರಾಜಕೀಯ ಪಕ್ಷಕ್ಕೂ ನಮ್ಮ ಬೆಂಬಲವಿಲ್ಲ. ಕಾವೇರಿ ನೀರಿಗಾಗಿ, ನಮ್ಮ ಹಕ್ಕಿಗಾಗಿ ಈ ಪಾದಯಾತ್ರೆ ಮಾಡುತ್ತೇವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೇಳಿತ್ತು. ಅದರಂತೆ, ಮೇಕೆದಾಟು ಪಾದಯಾತ್ರೆಯಲ್ಲಿ ಹಾಸ್ಯ ನಟ ಸಾಧುಕೋಕಿಲಾ ಭಾಗವಹಿಸಿದ್ದಾರೆ. ಈ ವೇಳೆ ಪಾದಾಯಾತ್ರೆ ಭಾಗಿವಹಿಸುತ್ತಿರುವುದು ಯಾಕೆ? ಶಿವಣ್ಣನ ನಾಯಕತ್ವ ಹಾಗೂ ಕಾಂಗ್ರೆಸ್ ಪಕ್ಷದ ಸದಸ್ಯತ್ವದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

    ಮುಂದಿನ ಪೀಳಿಗೆಗೆ ಕುಡಿಯಲು ನೀರು ಬೇಕು

    ಮುಂದಿನ ಪೀಳಿಗೆಗೆ ಕುಡಿಯಲು ನೀರು ಬೇಕು

    ವೀಕೆಂಡ್ ಕರ್ಪ್ಯೂ ಜಾರಿಯಲ್ಲಿದ್ದರೂ, ಮೇಕುದಾಟಿನಿಂದ ಪಾದಯಾತ್ರೆ ಆರಂಭ ಆಗಿದೆ. ಈ ವೇಳೆ ಕನ್ನಡ ಚಿತ್ರರಂಗದ ಕಾಮಿಡಿ ಕಿಂಗ್ ಸಾಧು ಕೋಕಿಲಾ ಕೂಡ ಈ ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಪಾದಯಾತ್ರೆಯಲ್ಲ, ಕಾವೇರಿ ನೀರು ನಮ್ಮ ಹಕ್ಕು. ನೀರಿ ಎಲ್ಲರಿಗೂ ಬೇಕು. ಅದಕ್ಕಾಗಿ ಬಂದಿದ್ದೇನೆ. ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮ ಅಂತ ಬಂದಾಗ, ಡಿಕೆ ಶಿವಕುಮಾರ್ ಮೊದಲಿನಿಂದಲೂ ಕರೆಯುತ್ತಾರೆ ಎಂದು ಸಾಧುಕೋಕಿಲಾ ತಿಳಿಸಿದ್ದಾರೆ. " ಕಾವೇರಿ ನೀರು ನಮ್ಮ ಹಕ್ಕು. ನೀರು ಎಲ್ಲರಿಗೂ ಬೇಕು. ಪಕ್ಷಕ್ಕಲ್ಲ ಎಲ್ಲರಿಗೂ ಬೇಕು. ಡಿಕೆ ಶಿವಕುಮಾರ್ ಸರ್ ಇಂತಹ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಬಂದಾಗ ನನಗೇ ಹೇಳುತ್ತಾರೆ. ಮೊದಲಿನಿಂದಲೂ ಅವರೊಂದಿಗೆ ಮ್ಯೂಸಿಕ್ ವರ್ಕ್‌ನಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇದ್ದೇ ಇದ್ದೇನೆ. ಕಾವೇರಿ ವಿಷಯಕ್ಕೆ ಬಂದಾಗ ಇನ್ನೂ ಹುಮ್ಮಸ್ಸು ಅದಕ್ಕೆ ಪಾಲ್ಗೊಂಡಿದ್ದೇನೆ." ಎಂದಿದ್ದಾರೆ ಸಾಧು ಕೋಕಿಲಾ.

    ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದಿಲ್ಲ

    ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದಿಲ್ಲ

    ಕನ್ನಡ ಚಿತ್ರರಂಗದ ಹಾಸ್ಯ ನಟ ಹಾಗೂ ಸಂಗೀತ ನಿರ್ದೇಶಕ ಸಾಧುಕೋಕಿಲಾ, ಕಾಂಗ್ರೆಸ್ ಪಕ್ಷದ ಜೊತೆ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನೂ ಪಡೆದುಕೊಂಡಿದ್ದಾರೆ ಎನ್ನಲಾಗಿತ್ತು. ಈ ವಿಚಾರಕ್ಕೂ ಸ್ಪಷ್ಟನೆ ನೀಡಿದ್ದಾರೆ. "ನಿಜ ಹೇಳ್ತೀನಿ, ನಾನು ಇನ್ನೂ ಸದಸ್ಯತ್ವವನ್ನು ಪಡೆದಿಲ್ಲ. ನಾವು ಕಲಾವಿದರು. ಕಲಾವಿದರು ಎಲ್ಲಾ ಕಡೆಗೂ ಸಲ್ಲುತ್ತಾರೆ. ಅದರಲ್ಲೂ ಡಿಕೆ ಸರ್ ಹಾಗೂ ಡಿಕೆ ಸುರೇಶ್ ಅವರು ಸ್ನೇಹಿತರಾಗಿರುವುದರಿಂದ ನಾನು ಇಲ್ಲಿ ಮುಖ್ಯವಾಗಿ ಇದ್ದೀನಿ. " ಅಂತ ಅಭಿಪ್ರಾಯ ಹಂಚಿಕೊಂಡಿದ್ದಾರೆ ಸಾಧುಕೋಕಿಲಾ.

    ಶಿವಣ್ಣ ಬಂದರೂ ಇದು ಪಕ್ಷದ ಹೋರಾಟವಲ್ಲ

    ಶಿವಣ್ಣ ಬಂದರೂ ಇದು ಪಕ್ಷದ ಹೋರಾಟವಲ್ಲ

    ಇದೇ ವೇಳೆ ಶಿವಣ್ಣ ಪಾದಯಾತ್ರೆಗೆ ಬರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದೆ. ಈ ಬಗ್ಗೆನೂ ಸಾಧು ಕೋಕಿಲಾ ಪ್ರತಿಕ್ರಿಯಿಸಿದ್ದಾರೆ. "ಪಕ್ಷದ ಕೆಲಸ ಅಂದಾಗ, ಅದು ಅವರ ವೈಯುಕ್ತಿಕ ವಿಚಾರ. ಆಗ ಪಕ್ಷ ಬಂದು ಬಿಡುತ್ತೆ. ಇದು ಕಾಂಗ್ರೆಸ್ ಪಕ್ಷದ ಕೆಲಸ ಅಲ್ಲ. ಇದು ನಮ್ಮ ಕೆಲಸ. ಮುಂದಿನ ಪೀಳಿಗೆಗೆ ಕುಡಿಯಲು ನೀರು ಬೇಕು. ಈ ದೇಹವೇ ನೀರು. ನೀರಿಲ್ಲದೆ ನಾವು ಬದುಕಲು ಸಾಧ್ಯನಾ? ಇದಕ್ಕೆ ಪ್ರೋತ್ಸಾಹ ಕೊಡಬೇಕು ಅನ್ನುವುದು ನನ್ನ ಉದ್ದೇಶ. ಶಿವಣ್ಣ ಬರಲಿ, ಯಾರೇ ಬರಲಿ ಇದು ಪಕ್ಷದ್ದು ಅಲ್ಲವೇ ಅಲ್ಲ. ನಮ್ಮ ಹಕ್ಕು ನಮಗೆ ನೀರು ಬೇಕು ಅನ್ನುವುದಕ್ಕೆ ಹೋರಾಟವಿದು." ಎಂದು ಸಾಧು ಅಭಿಪ್ರಾಯ ಪಟ್ಟಿದ್ದಾರೆ.

    ಶಿವಣ್ಣ ಅವರೇ ನಮ್ಮ ನಾಯಕರು

    ಶಿವಣ್ಣ ಅವರೇ ನಮ್ಮ ನಾಯಕರು

    "ರಾಜ್‌ಕುಮಾರ್ ಸರ್ ಇದ್ದಾಗಲೂ ಅಷ್ಟೇ. ವಿಷ್ಣುವರ್ಧನ್ ಸರ್ ಇದ್ದಾಗಲೂ ಅಷ್ಟೇ. ಅಂಬರೀಷ್ ಅಣ್ಣ ಇದ್ದಾಗಲೂ ನಾವು ಶಿವಣ್ಣನನ್ನು ಮುಂಚೂಣಿಯಲ್ಲಿ ಇಟ್ಟುಕೊಂಡಿದ್ದೆವು. ಶಿವಣ್ಣ ಅವರೇ ನಮ್ಮ ನಾಯಕರು, ರವಿಚಂದ್ರನ್, ಸುದೀಪ್, ಉಪೇಂದ್ರ, ದರ್ಶನ್, ಯಶ್ ಎಲ್ಲರೂ ಇದ್ದುಕೊಂಡೇ ಈ ವೇದಿಕೆ ರೆಡಿಮಾಡಿದ್ದರು. ಅಂದಿನಿಂದ ಶಿವಣ್ಣನನ್ನು ಮುಂದೆ ನಿಲ್ಲಿಸಿದ್ದೇವು. ಅವರು ಯಾವತ್ತೂ ಹಿಂದೆ ಹೋಗಿಲ್ಲ. ಇಂದು ಕೂಡ ಹಿಂದೆ ಹೋಗಲ್ಲ." ಎಂದು ಸಾಧುಕೋಕಿಲಾ ಅಭಿಪ್ರಾಯ ಪಟ್ಟಿದ್ದಾರೆ.

    English summary
    Sadhu Kokila said he didnot took congress membership but supporting Mekedatu Padayatra for water. He also said, we are artists we didnot support any political party.
    Monday, January 10, 2022, 10:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X