For Quick Alerts
  ALLOW NOTIFICATIONS  
  For Daily Alerts

  ಸಾಧುಕೋಕಿಲರನ್ನ ಹುಡುಕಿ ಬಿಟ್ಟರು ನಾಗತಿಹಳ್ಳಿ ಚಂದ್ರಶೇಖರ್

  By Pavithra
  |

  ನಟ, ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕ ಸಾಧುಕೋಕಿಲ ಈ ಬಾರಿಯ ಚುನಾವಣಾ ಸ್ಟಾರ್ ಪ್ರಚಾರಕರಾಗಿದ್ದಾರೆ. ಅದೇ ಕಾರಣದಿಂದ ಸಿನಿಮಾಗಳ ಕೆಲಸಕ್ಕೆ ಕೆಲವು ದಿನಗಳು ಬ್ರೇಕ್ ಹಾಕಿದ್ದಾರೆ. ಅದಕ್ಕೆ ಸಾಕ್ಷಿ ಎನ್ನುವಂತೆ ಇತ್ತೀಚಿಗಷ್ಟೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಾಧುಕೋಕಿಲರನ್ನ ಹುಡುಕಿಕೊಡಿ ಯಾರಾದರೂ ಎಂದು ತಮ್ಮ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಸ್ಟೇಟಸ್ ಹಾಕಿದ್ದರು.

  ಸ್ಟೇಟಸ್ ಹಾಕಿದ ಕೆಲವೇ ಗಂಟೆಗಳಲ್ಲಿ ಸಾಧು ಸಿಕ್ಕಿದ್ದಾರೆ. ಸ್ಟೇಟಸ್ ನೋಡಿದ ಸಾಧು ಕೋಕಿಲ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಫೋನ್ ಮಾಡಿ ನಾಳೆಯೇ ಹಾಡನ್ನು ಹಾಡುವುದಾಗಿ ತಿಳಿಸಿದ್ದಾರೆ. ಅದರಂತೆ ಇಂದು ಸಾಧು ಮೇಷ್ಟ್ರು ಬರೆದಿರುವ ಹಾಡಿಗೆ ಧ್ವನಿ ಆಗಿದ್ದಾರೆ.

  ಯಾರಾದರೂ ಸಾಧುಕೋಕಿಲಾರನ್ನ ಹುಡುಕಿ ಕೊಡಿ !ಯಾರಾದರೂ ಸಾಧುಕೋಕಿಲಾರನ್ನ ಹುಡುಕಿ ಕೊಡಿ !

  ಹಾಡು ಹಾಡಿದ ನಂತರ 'ಇದು ಯಾವ ಸೀಮೆ ನ್ಯಾಯವೋ ದೇವರೇ' ಅಂತ ಕೊನೆಗೂ ಆರ್ದ್ರವಾಗಿ ಹಾಡಿದರು ಪ್ರೀತಿಯ ಸಾಧು ಕೋಕಿಲಾ ಮಹಾರಾಜ್. ನನ್ನ ಮಿತ್ರ 'ರಥಾವರ' ಖ್ಯಾತಿಯ ಚಂದ್ರು ನಿರ್ದೇಶನದ 'ತಾರಕಾಸುರ' ಚಿತ್ರ. ಧರ್ಮ ಅವರ ಸಂಗೀತ. ಪಂಚಭೂತಗಳನ್ನು ಹಂಚಿ ಉಣ್ಣದ ಮನುಷ್ಯನ ಲಾಲಸೆ ಕುರಿತ ಹಾಡು."ಭೈರಾಗಿ ನಿಂಗೆ ಭೂಮ್ತಾಯಿ ಹಾಸಿಗೆ" ಅ೦ತ ಶುರುವಾಗುತ್ತೆ. ಕೇಳುವಿರಂತೆ. ಎಂದು ಫೋಟೋ ಸಮೇತ ಸ್ಟೇಟಸ್ ಹಾಕಿದ್ದಾರೆ ನಾಗತಿಹಳ್ಳಿ ಚಂದ್ರಶೇಖರ್.

  ಅಂದ್ಹಾಗೆ ಸಾಧುಕೋಕಿಲ ಹಾಡುತ್ತಿರುವ ಹಾಡನ್ನು ನಾಗತಿಹಳ್ಳಿ ಚಂದ್ರಶೇಖರ್ ಬರೆದಿದ್ದಾರೆ. ರಥಾವರ ಸಿನಿಮಾ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ಚಿತ್ರದಲ್ಲಿ ಹಾಡನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಚಿತ್ರದಲ್ಲಿ ವೈಭವ್ ಹಾಗೂ ಮಾನ್ವಿತಾ ಜೋಡಿಯಾಗಿ ಅಭಿನಯಿಸಿದ್ದಾರೆ. ಕುಮಾರ್ ಗೌಡ ಕ್ಯಾಮೆರಾ ವರ್ಕ್ ಮಾಡುತ್ತಿದ್ದು ಧರ್ಮ ವಿಶ್ ಸಂಗೀತ ಸಂಯೋಜನೆ ನೀಡಿದ್ದಾರೆ.

  English summary
  kannada acto Sadhu Kokila sings a song of Tarakasura kannada movie .Nagathihalli Chandrashekhar wrote the song Chandrasekhar Bandiappa is directing the cinema.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X