For Quick Alerts
  ALLOW NOTIFICATIONS  
  For Daily Alerts

  ಸೆಲೆಬ್ರಿಟಿಯಾಗಿ ನಾನೇ ಆಕ್ಸಿಜನ್ ಪಡೆಯೋಕೆ ಒದ್ದಾಡಿದ್ದೇನೆ; ಕೊರೊನಾ ಬಗ್ಗೆ ಸಾಧು ಕೋಕಿಲ ಎಚ್ಚರಿಕೆ

  |

  ರಿಯಲ್ ಸ್ಟಾರ್ ಉಪೇಂದ್ರ ನಟನೆಯ 'ಲಗಾಮ್' ಸಿನಿಮಾದ ಮುಹೂರ್ತ ಇಂದು (ಏಪ್ರಿಲ್ 19) ನೆರವೇರಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ವಿಶೇಷ ಎಂದರೆ ಖ್ಯಾತ ಕಾಮಿಡಿ ನಟ ಮತ್ತು ಸಂಗೀತ ನಿರ್ದೇಶಕ ಸಾಧು ಕೋಕಿಲ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

  ಇಂದು ಮುಹೂರ್ತ ಸಮಾರಂಭಕ್ಕೆ ಹಾಜರಾಗಿದ್ದ ನಟ ಸಾಧು ಕೋಕಿಲ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಬಗ್ಗೆ ಮಾತನಾಡಿದ್ದಾರೆ. ಎಲ್ಲರೂ ಎಚ್ಚರಿಕೆ ಇಂದ ಇರಿ, ಟಿವಿಯಲ್ಲಿ ತೋರಿಸುತ್ತಿರುವುದೆಲ್ಲ ಸುಳ್ಳಲ್ಲ, ಸೆಲೆಬ್ರಿಟಿಗಳಾಗಿ ನಾವೆ ಪರದಾಡುತ್ತಿದ್ದೀವಿ ಎಂದು ಹೇಳಿದ್ದಾರೆ.

  ಧಾರಾವಾಹಿ ಲೋಕಕ್ಕೆ ಎಂಟ್ರಿ ಕೊಟ್ಟ ಕಾಮಿಡಿ ಕಿಂಗ್ ಸಾಧು ಕೋಕಿಲಧಾರಾವಾಹಿ ಲೋಕಕ್ಕೆ ಎಂಟ್ರಿ ಕೊಟ್ಟ ಕಾಮಿಡಿ ಕಿಂಗ್ ಸಾಧು ಕೋಕಿಲ

  ಅಣ್ಣನ ಮಗನಿಗೆ ಕೊರೊನಾ ಪಾಸಿಟಿವ್ ಬಂದ ಸಮಯದಲ್ಲಿ ಅನುಭವಿಸಿದ ಕಷ್ಟದ ಬಗ್ಗೆ ಮಾತನಾಡಿ, 'ನನ್ನ ಅಣ್ಣನ ಮಗನಿಗೆ ಕೊರೊನಾ ಪಾಸಿಟಿವ್ ಆಗಿ ಈಗ ನೆಗೆಟಿವ್ ಆಗಿದೆ. 15 ದಿನಗಳು ಆಗಿದೆ ಆದರೂ ಅವನಿಗೆ ಉಸಿರಾಟದ ಸಮಸ್ಯೆ ಕಾಡುತ್ತಿದೆ. ನಾನು ಸೆಲೆಬ್ರಿಟಿಯಾಗಿ ಒಂದು ಸಿಂಗಲ್ ಆಕ್ಸಿಜನ್ ತೆಗೆದುಕೊಳ್ಳಲು ಅವತ್ತು ಇಡೀ ದಿನ ಒದ್ದಾಡಿದ್ದೀನಿ. ನಮಗೆ ಇಂತ ಸಮಸ್ಯೆ ಆಗುತ್ತೆ ಅಂದ್ಮೇಲೆ ಇನ್ನು ಸಾಮಾನ್ಯರಿಗೆ ಬಂದ್ರೆ ಏನು ಗತಿ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

  ಇನ್ನು ಇದೇ ಸಮಯದಲ್ಲಿ ಮಾತನಾಡಿ, ಜನರೇ ಎಚ್ಚರಿಕೆಯಿಂದ ಇರಬೇಕು. ಈ ಹಬ್ಬ, ಹರಿದಿನ ಎಲ್ಲವನ್ನು ಸ್ಥಗಿತಗೊಳಿಸಿ, ಜನ ಅವರ ಪಾಡಿಗೆ ಇದ್ದರೆ ಸುಮ್ಮನೆ ಇದ್ದರೆ ಕಡಿಮೆ ಆಗುತ್ತೆ ಎಂದಿದ್ದಾರೆ. ಟಿವಿಯಲ್ಲಿ ತೋರಿಸುವುದು ಸುಳ್ಳು ಎಂದು ಅಂದುಕೊಳ್ಳಬೇಡಿ, ಕೊರೊನಾ ಖಂಡಿತ ಇದೆ. ಹುಷಾರಿ ಇರಿ ಎಂದಿದ್ದಾರೆ.

  ಇನ್ನು ನಟ ಸಾಧು ಕೋಕಿಲ ಕೊನೆಯದಾಗಿ ಮಾಸ್ತಿ ಗುಡಿ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದರು. ಬಳಿಕ ರಿಯಲ್ ನಟನೆಯ ಉಪ್ಪಿ ರುಪಿ ಸಿನಿಮಾಗೆ ಸಂಗೀತ ಮಾಡಬೇಕಿತ್ತು, ಆದರೆ ಈ ಸಿನಿಮಾ ಸೆಟ್ಟೇರಿಲ್ಲ. ಇದೀಗ ಲಗಾಮ್ ಮೂಲಕ ಮತ್ತೆ ಮೋಡಿ ಮಾಡಲು ಸಜ್ಜಾಗಿದ್ದಾರೆ.

  Recommended Video

  ಪವರ್ ಸ್ಟಾರ್ ಗೆ ಕರೆ ಮಾಡಿದ ಎಂಎಸ್ ಧೋನಿ ಹೇಳಿದ್ದೇನು? | Filmibeat Kannada

  ಇನ್ನು ನಟನೆ ವಿಚಾರಕ್ಕೆ ಬರುವುದಾದರೆ ಕೊನೆಯದಾಗಿ ಶಿವರಾಜ್ ಕುಮಾರ್ ನಟನೆಯ ದ್ರೋಣ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಪುನೀತ್ ರಾಜ್ ಕುಮಾರ್ ನಿರ್ಮಾಣದಲ್ಲಿ ಬಂದ ಮಾಯಾಬಜಾರ್ ಸಿನಿಮಾದಲ್ಲೂ ನಟಿಸಿದ್ದಾರೆ. ಬಳಿಕ ಮತ್ಯಾವ ಸಿನಿಮಾಗೂ ಸದ್ಯ ಸಹಿ ಮಾಡಿಲ್ಲ. ಸಿನಿಮಾ ಜೊತೆ ಧಾರಾವಾಹಿ ನಿರ್ಮಾಣದಲ್ಲೂ ಸಾಧು ಕೋಕಿಲ ಬ್ಯುಸಿಯಾಗಿದ್ದಾರೆ.

  English summary
  Sadhu Kokila speaks about coronavirus in Upendra starrer Lagaam movie muhurat.
  Monday, April 19, 2021, 16:41
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X