ಡಾ.ವಿಷ್ಣು ಸಾವಿನ ದಿನ ಅಂಬಿ ಆಡಿದ ಮಾತನ್ನ ಮರೆಯದ ಸಾಧುಕೋಕಿಲಾ

By Bharath Kumar

Recommended Video

ವಿಷ್ಣು ಸಾವಿನ ದಿನ ಅಂಬಿ ಹೇಳಿದ್ದೇನು ಗೊತ್ತಾ..!! | Filmibeat Kannada

ಕನ್ನಡ ಚಿತ್ರರಂಗದಲ್ಲಿ ಹಲವು ಆಪ್ತಮಿತ್ರರಿದ್ದಾರೆ. ಆದ್ರೆ, ಸ್ನೇಹ ಅಂದಾಕ್ಷಣ ಮೊದಲು ನೆನಪಾಗುವುದೇ ಸಾಹಸ ಸಿಂಹ ಡಾ ವಿಷ್ಣುವರ್ಧನ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್.

ಇವರಿಬ್ಬರು ಸ್ಯಾಂಡಲ್ ವುಡ್ ನ ಕುಚಿಕೂಗಳು. ಎಲ್ಲಿ ಅಂಬರೀಶ್ ಇರ್ತಾರೋ ಅಲ್ಲಿ ವಿಷ್ಣುವರ್ಧನ್ ಇರ್ತಿದ್ರು. ಎಲ್ಲಿ ವಿಷ್ಣುವರ್ಧನ್ ಇರ್ತಿದ್ರೋ ಎಲ್ಲಿ ಮಂಡ್ಯದ ಗಂಡು ಇರ್ತಿದ್ರು. ಆದ್ರೆ, ವಿಧಿಯ ಆಟಕ್ಕೆ ಶರಣಾದ 'ಹೃದಯವಂತ' ಬಹುಬೇಗ ಪ್ರಾಣಸ್ನೇಹಿತನನ್ನು ಬಿಟ್ಟು ಹೋಗಬೇಕಾಯಿತು.

ಆ ದಿನ ಅಂಬರೀಶ್ ಅವರ ಕಣ್ಣಲ್ಲಿದ್ದ ನೋವನ್ನ ಎಲ್ಲರೂ ನೋಡಿದ್ದಾರೆ. ದಿಗ್ಗಜರು ಬಿಟ್ಟು ಹೋದಾಗ ಅಂಬಿಗೆ ಆದ ಕಷ್ಟವನ್ನ ಎಲ್ಲರೂ ಕಂಡಿದ್ದಾರೆ. ಇಂತಹ ಕ್ಷಣದಲ್ಲಿ ಅಂಬರೀಶ್ ಅವರನ್ನ ಹತ್ತಿರದಿಂದ ಕಂಡಿದ್ದ ಹಾಸ್ಯ ನಟ ಸಾಧುಕೋಕಿಲಾ ಅವರು ಡಾ ವಿಷ್ಣು ಮತ್ತು ಅಂಬರೀಶ್ ಅವರದ್ದು ಎಂತಹ ಸ್ನೇಹ ಎಂದು 'ಕನ್ನಡದ ಕೋಗಿಲೆ' ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ. ಮುಂದೆ ಓದಿ....

ಬರಿ ಇದು ಸಿನಿಮಾ ಹಾಡಲ್ಲ

ಬರಿ ಇದು ಸಿನಿಮಾ ಹಾಡಲ್ಲ

'ಕನ್ನಡ ಕೋಗಿಲೆ'ಯಲ್ಲಿ ದಿಗ್ಗಜರು ಚಿತ್ರದ ಹಾಡನ್ನ ಹಾಡಿದ ಲಿಖಿತ್ ಹಾಡು ಕೇಳಿದ ನಂತರ ಮಾತನಾಡಿದ ಸಾಧು ''ಇದು ದಿಗ್ಗಜರು ಚಿತ್ರದ ಬರಿ ಹಾಡಲ್ಲ, ಡಾ ವಿಷ್ಣುವರ್ಧನ್ ಮತ್ತು ಡಾ ಅಂಬರೀಶ್ ಅವರ ಸ್ನೇಹದ ಮೇಲೆ ನಿಂತಿರುವ ಹಾಡು'' ಎಂದು ಬಣ್ಣಿಸಿದರು.

ಬಾಡಿಗಾರ್ಡ್ ಹೌದು, ಪ್ರಾಣ ಸ್ನೇಹಿತನೂ ಹೌದು

ಬಾಡಿಗಾರ್ಡ್ ಹೌದು, ಪ್ರಾಣ ಸ್ನೇಹಿತನೂ ಹೌದು

''ವಿಷ್ಣುವರ್ಧನ್ ಅವರಿಗೆ ಅಂಬರೀಶ್ ಅವರು ಒಂದು ರೀತಿ ಬಾಡಿಗಾರ್ಡ್ ಹೌದು, ಪ್ರಾಣ ಸ್ನೇಹಿತನೂ ಹೌದು. ವಿಷ್ಣು ಅವರು ಎಲ್ಲೂ ಒಬ್ಬರೇ ಹೋಗ್ತಿರಲಿಲ್ಲ. ಅಂಬರೀಶ್ ಜೊತೆಗಿದ್ರೆ ಕಣ್ಣು ಮುಚ್ಚಿಕೊಂಡು ಹೋಗ್ತಿದ್ರು''.

ವಿಷ್ಣು ಸರ್ ಅಗಲಿದ ದಿನ ಅಂಬಿ ಹೇಗಿದ್ರು

ವಿಷ್ಣು ಸರ್ ಅಗಲಿದ ದಿನ ಅಂಬಿ ಹೇಗಿದ್ರು

''ವಿಷ್ಣುವರ್ಧನ್ ಅವರು ಅಗಲಿದ ದಿನ. ಶೋಕಸಾಗರದಲ್ಲಿದ್ದವರನ್ನ ಸ್ವತಃ ಅಂಬರೀಶ್ ಅವರೇ ಸಮಾಧಾನ ಪಡಿಸಿದರು. ಅಭಿಮಾನ್ ಸ್ಟುಡಿಯೋಗೆ ಬರೋವರ್ಗು ಸುಮ್ಮನಿದ್ರು. ಆದ್ರೆ, ಅಲ್ಲಿ ಬಂದ ಮೇಲೆ ಅವರಲ್ಲಿದ್ದ ನೋವು ಹೊರಗೆ ಬಂತು'' ಎಂದು ಸಾಧುಕೋಕಿಲಾ ಭಾವುಕರಾದರು.

ಅಂಬಿ ಆಡಿದ ಆ ಮಾತು....

ಅಂಬಿ ಆಡಿದ ಆ ಮಾತು....

''ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅವರ ಅಂತ್ಯ ಸಂಸ್ಕಾರ ನಡೆಯುತ್ತಿತ್ತು. ಆ ಸ್ಥಳದಿಂದ ನೂರು ಅಡಿ ಹಿಂದೆ ಅಂಬಿ ಒಂದು ಮಾತು ಹೇಳಿದ್ರು. ''ಏನೋ ನನ್ನ ಬಿಟ್ಟು ಹೋಗ್ತಿದ್ದೀಯಾ ನೀನು, ಹೆಂಗೋ ಬಿಟ್ಟೋಗ್ತೀಯಾ ನೀನು....ನಡಿ ನಾನು ಬರ್ತೀನಿ, ನಿನ್ನ ಬಿಟ್ಟು ಇರಲ್ಲ'' ಅಂತ ಹೇಳಿದ್ರು ಎಂದು ಸಾಧುಕೋಕಿಲಾ ಅವರ ಸ್ನೇಹದ ಬಗ್ಗೆ ನೆನಪು ಬಿಚ್ಚಿಟ್ಟರು.

More from Filmibeat

English summary
Kannada actor, music director sadhu kokila spoke about dr vishnuvardhan and ambareesh friendship.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X