ಕಣ್ಣು ಹೊಡೆದ ಹುಡುಗಿ ಬಗ್ಗೆ ಸಾಧು ಕೋಕಿಲ ಕೊಟ್ಟ ಹೇಳಿಕೆ !

By Naveen

Recommended Video

ಪ್ರಿಯಾ ಬಗ್ಗೆ ಸಾಧು ಕೋಕಿಲ ಕೊಟ್ಟ ಹೇಳಿಕೆ ! | Filmibeat Kannada

ಪ್ರಿಯಾ ವಾರಿಯರ್ ಈಗ ಎಲ್ಲರಿಗೂ ಚಿರ ಪರಿಚಿತವಾದ ಹುಡುಗಿ. ಒಂದೇ ಒಂದು ಹಾಡಿನ ಸಣ್ಣ ತುಣುಕಿನ ಮೂಲಕ ಇಡೀ ಭಾರತದಲ್ಲಿಯೇ ಕೋಲಾಹಲ ಸೃಷ್ಟಿಸಿದ ಈ ಚಂದುಳ್ಳಿ ಚಲುವೆಗೆ ಮಾರು ಹೋಗದವರೆ ಇಲ್ಲ. ಇದ್ದಕ್ಕಿದ್ದ ಹಾಗೆ ಎಲ್ಲಿಂದಲೋ ಬಂದ ಈ ಹುಡುಗಿ ಅದೆಷ್ಟೋ ಹುಡುಗರ ಹೃದಯ ಕದ್ದ ಚೋರಿ. ಅಂದಹಾಗೆ, ಪ್ರಿಯಾ ಬಗ್ಗೆ ಈಗ ಎಲ್ಲರೂ ಮಾತನಾಡಿದ್ದಾರೆ. ಸದ್ಯ ಹಾಸ್ಯ ನಟ ಸಾಧು ಕೋಕಿಲ ಕೂಡ ಆಕೆಯ ವಿಡಿಯೋ ಬಗ್ಗೆ ಒಂದು ಹೇಳಿಕೆ ನೀಡಿದ್ದಾರೆ.

'ಪ್ರೇಮ ಬರಹ' ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಾಧುಕೋಕಿಲ ಪ್ರಿಯಾ ವಾರಿಯಲ್ ವಿಡಿಯೋ ವೈರಲ್ ಬಗ್ಗೆ ಕೂಡ ಮಾತನಾಡಿದ್ದಾರೆ. ಅಲ್ಲದೆ ಈಗಾಗಲೇ ಪ್ರಿಯಾ ವಿಡಿಯೋ ಜೊತೆಗೆ ಎಲ್ಲರ ಟ್ರೋಲ್ ಗಳು ಬಂದಿದೆ. ತಮ್ಮ ಬಗ್ಗೆ ಬಂದಿರುವ ಟ್ರೋಲ್ ಬಗ್ಗೆ ಸಾಧು ಕೋಕಿಲ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ...

ಮದ್ರಾಸ್ ಐ ಬರುವ ಲೆವೆಲ್ ಗೆ ಹೈಪ್ ಕೊಟ್ಟಿದ್ದಾರೆ

ಮದ್ರಾಸ್ ಐ ಬರುವ ಲೆವೆಲ್ ಗೆ ಹೈಪ್ ಕೊಟ್ಟಿದ್ದಾರೆ

''ಅದು ಯಾರು ಹುಡುಗಿ ಕಣ್ಣು ಹೊಡೆದಳು ಅಂತ ಎಲ್ಲರೂ ವೈರಲ್ ಮಾಡಿದ್ದಾರೆ. ಎಲ್ಲರಿಗೂ ಅದನ್ನು ನೋಡಿ ಮದ್ರಾಸ್ ಐ ಬರುವ ಲೆವೆಲ್ ಗೆ ಅದಕ್ಕೆ ಹೈಪ್ ಕೊಟ್ಟಿದ್ದಾರೆ. ಅದೇ ಈ ರೀತಿಯ (ಪ್ರೇಮ ಬರಹ) ಒಂದು ಮಿಲಿಟರಿ ಬಗ್ಗೆ ಇರುವ ಸಿನಿಮಾ, ಯೋಧನ ಬಗ್ಗೆ ಇರುವ ಈ ಸಿನಿಮಾವನ್ನು ಯಾರು ಮೇಲೆ ಎತ್ತುವುದೆ ಇಲ್ಲ.'' ಎಂದು ಸಾಧು ಕೋಕಿಲ ಹೇಳಿದ್ದಾರೆ.

ಕಣ್ಣು ಹೊಡೆಯುವುದನ್ನು ಸೈಡಿಗೆ ಇಡಿ

ಕಣ್ಣು ಹೊಡೆಯುವುದನ್ನು ಸೈಡಿಗೆ ಇಡಿ

''ಪ್ರೇಮ ಬರಹ' ರೀತಿಯ ಸಿನಿಮಾಗೆ ಹೈಪ್ ಸಿಗುವುದೆ ಇಲ್ಲ. ಅದು ಹಾಗೆ ಆಗಬಾರದು. ಕಣ್ಣು ಹೊಡೆಯುವುದನ್ನು ಸೈಡಿಗೆ ಇಡಿ. ಒಳ್ಳೆಯ ಸಿನಿಮಾಗೆ ಪ್ರೋತ್ಸಾಹ ಕೊಡಿ. ಇದ್ದರಿಂದ ಎಲ್ಲರೂ ಈ ಸಿನಿಮಾ ನೋಡಲಿ.'' - ಸಾಧು ಕೋಕಿಲ

ನನಗೂ ಟ್ರೋಲ್ ಮಾಡಿದ್ದಾರೆ

ನನಗೂ ಟ್ರೋಲ್ ಮಾಡಿದ್ದಾರೆ

''ಆ ಕಣ್ಣು ಹೊಡೆಯುವುದನ್ನು ಎಲ್ಲರಿಗೂ ಹಾಕಿ ಟ್ರೋಲ್ ಮಾಡಿದ್ದಾರೆ. ರಾಹುಲ್ ಗಾಂಧಿಯಿಂದ ಹಿಡಿದು ಎಲ್ಲರಿಗೂ ಹಾಕಿದ್ದಾರೆ. ನನಗೂ ಹಾಕಿದ್ದಾರೆ. ನನಗೆ ಮಾಮೂಲಿಯಾಗಿ ಹಾಕೆ ಹಾಕುತ್ತಾರೆ. ನಾವು ಏನು ಮಾಡಿಲ್ಲ ಅಂದರು ಏನೋ ಒಂದು ಹಾಕುತ್ತಾರೆ. ನಿಜ ಹೇಳುವುದಾದರೆ ಈ ರೀತಿಯ ಒಳ್ಳೆಯ ಸಿನಿಮಾಗೆ ಸರಿಯಾದ ಬುಸ್ಟಪ್ ಸಿಕ್ಕಿಲ್ಲ ಅಂತ ನನಗೆ ಅನಿಸಿತು.'' - ಸಾಧು ಕೋಕಿಲ

ಪ್ರಿಯಾ ಹಿಂದಿಕ್ಕಿದ ದರ್ಶನ್

ಪ್ರಿಯಾ ಹಿಂದಿಕ್ಕಿದ ದರ್ಶನ್

ಕಳೆದ ಮೂರ್ನಾಲ್ಕು ದಿನಗಳಿಂದ ಯೂಟ್ಯೂಬ್ ನಲ್ಲಿ ಮೊದಲ ಸ್ಥಾನದಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಈಗ ದರ್ಶನ್ ಮುಂದೆ ಶರಣಾಗಿದ್ದಾರೆ. ದರ್ಶನ್ ಅಭಿನಯದ 51ನೇ ಸಿನಿಮಾ 'ಯಜಮಾನ' ಚಿತ್ರದ ಟೀಸರ್ ಈಗ ಯೂಟ್ಯೂಬ್ ನಲ್ಲಿ ಮೊದಲ ಸ್ಥಾನದಲ್ಲಿದೆ.

ಪ್ರಿಯಾ ಪ್ರಕಾಶ್ ವಾರಿಯರ್ ಬಗ್ಗೆ

ಪ್ರಿಯಾ ಪ್ರಕಾಶ್ ವಾರಿಯರ್ ಬಗ್ಗೆ

ಸಾಮಾಜಿಕ ಜಾಲತಾಣದಲ್ಲಿ ಹಾಟ್ ಟಾಪಿಕ್ ಆಗಿರುವ ಪ್ರಿಯಾ ಪ್ರಕಾಶ್ ವಾರಿಯರ್ 18 ವರ್ಷದ ಈ ಹುಡುಗಿ. ಕೇರಳದ ತ್ರಿಶೂರ್ ನಲ್ಲಿರುವ ವಿಮಲ್ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿದ್ದಾಳೆ. 'ಒರು ಅಡಾರ್ ಲವ್' (Ooru adaar love) ಎಂಬ ಮಲೆಯಾಳಂ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರಿಯಾ ಕಾಲಿಟ್ಟಿದ್ದಾರೆ. ಪ್ರಿಯಾ ಮೊದಲ ಸಿನಿಮಾದ ಮೊದಲ ಹಾಡಿನ ದೃಶ್ಯದಿಂದಲೇ ಈಗ ಸಖತ್ ಫೇಮಸ್ ಆಗಿದೆ.

More from Filmibeat

English summary
Kannada comedy actor Sadu Kokila spoke about Malayalam young actress Priya Prakash Varrier video viral in Prema Baraha kannada movie press meet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X