ಮೂವತ್ತು ವರ್ಷಗಳ ಬಳಿಕ ವಿಷ್ಣು 'ಖೈದಿ' ರಿಲೀಸ್
ಬರೋಬ್ಬರಿ ಮೂವತ್ತು ವರ್ಷಗಳ ಬಳಿಕ ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ 'ಖೈದಿ' ಚಿತ್ರ ರೀ ರಿಲೀಸ್ ಆಗುತ್ತಿದೆ. ಇದೇ ಶುಕ್ರವಾರ (ಏ.11) ಬೆಂಗಳೂರಿನ ತ್ರಿವೇಣಿ ಸೇರಿದಂತೆ ರಾಜ್ಯದಾದ್ಯಂತ ಅಮೋಘ ಪ್ರಾರಂಭವಾಗುತ್ತಿದೆ. ಈ ಮೂಲಕ ಹಳೆ ಚಿತ್ರಗಳನ್ನು ಚಿತ್ರಮಂದಿರದಲ್ಲಿ ನೋಡುವ ಸೌಭಾಗ್ಯ ವಿಷ್ಣು ಅಭಿಮಾನಿಗಳಿಗೆ ದಕ್ಕುತ್ತಿದೆ.
ವಿಶ್ವಚಿತ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಈ ಚಿತ್ರ 29-05-1984 ರಂದು ಬಿಡುಗಡೆಯಾಗಿತ್ತು. ಇದೀಗ ಸಿನಿಮಾಸ್ಕೋಪ್ ನಲ್ಲಿ ಕ್ಯೂಬ್ ಡಿಜಿಟಲ್ ಸೌಂಡ್ ಎಫೆಕ್ಟ್ ನಲ್ಲಿ ಬಿಡುಗಡೆಯಾಗುತ್ತಿದೆ. ಚಿ ಉದಯ್ ಶಂಕರ್ ಸಾಹಿತ್ಯದ "ತಾಳೆ ಹೂವ ಪೊದೆಯಿಂದ..." ಹಾಡು ಈ ಚಿತ್ರದ ಜನಪ್ರಿಯ ಗೀತೆಗಳಲ್ಲಿ ಒಂದು. [ಖೈದಿ ಫುಲ್ ಫಿಲಂ ಇಲ್ಲೂ ನೋಡಬಹುದು]

ತೆಲುಗಿನ 'ಖೈದಿ' ಚಿತ್ರದ ರೀಮೇಕ್ ಇದು. ಮೂಲ ಚಿತ್ರದಲ್ಲಿ ಚಿರಂಜೀವಿ ಹಾಗೂ ಮಾಧವಿ ಮುಖ್ಯ ಪಾತ್ರಧಾರಿಗಳು. ಈ ಚಿತ್ರದ "ತಾಳೆ ಹೂವ ಪೊದೆಯಿಂದ..." (ಚಿ.ಉದಯಶಂಕರ್ ಸಾಹಿತ್ಯ) ಹಾಡು ಆಗಿನ ಕಾಲಕ್ಕೆ ಬುಸ್ ಬುಸ್ ಎಂದು ಸಾಕಷ್ಟು ಸದ್ದು ಮಾಡಿತ್ತು.
ಚಕ್ರವರ್ತಿ ಸಂಗೀತ, ವಿ ಲಕ್ಷ್ಮಣ್ ಅವರ ಛಾಯಾಗ್ರಹಣ, ಡಿ ವೆಂಕಟರತ್ನಂ ಅವರ ಸಂಕಲನ, ಚಿನ್ನಿ ಪ್ರಕಾಶ್ ಮತ್ತು ತಾರಾ ಅವರ ನೃತ್ಯ ಸಂಯೋಜನೆ, ನಾಗರಾಜ್ ಅವರ ಕಲೆ ಇರುವ ಚಿತ್ರವನ್ನು ಡಿವಿ ಸುಧೀಂದ್ರ ಅವರು ಪ್ರಚಾರ ಮಾಡಿದ್ದರು. ಈಗ ಮತ್ತೊಂದು ಬೆಳ್ಳಿತೆರೆಯ ಮೇಲೆ ವೀಕ್ಷಿಸುವ ಅವಕಾಶ. (ಒನ್ಇಂಡಿಯಾ ಕನ್ನಡ)


Click it and Unblock the Notifications











