For Quick Alerts
  ALLOW NOTIFICATIONS  
  For Daily Alerts

  ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ 'ಯಜಮಾನ' ಚಿತ್ರಕ್ಕೆ 19 ವರ್ಷದ ಸಂಭ್ರಮ

  |

  ಸ್ಯಾಂಡಲ್ ವುಡ್ ಸಿಂಹ, ದಾದಾ ವಿಷ್ಣುವರ್ಧನ್ ಅಭಿನಯದ 'ಯಜಮಾನ' ಸಿನಿಮಾ ರಿಲೀಸ್ ಆಗಿ 19 ವರ್ಷಗಳು ಕಳೆದಿವೆ. 19 ವರ್ಷಗಳ ಹಿಂದೆ ಅಂದರೆ 2000ನೇ ಇಸವಿ ಡಿಸೆಂಬರ್ 1 ಕ್ಕೆ 'ಯಜಮಾನ' ಸಿನಿಮಾ ತೆರೆಗೆ ಬಂದಿತ್ತು. ಸಾಹಸಸಿಂಹ ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ಮಿಂಚಿದ್ದರು. ಸಿಂಹ ಘರ್ಜನೆಗೆ ಇಡೀ ಸ್ಯಾಂಡಲ್ ವುಡ್ ನಡುಗಿತ್ತು.

  ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ಸಿನಿಮಾಗಳಲ್ಲಿ 'ಯಜಮಾನ' ಸಿನಿಮಾ ಕೂಡ ಒಂದು. ಆರ್ ಶೇಷಾದ್ರಿ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿತ್ತು. ಚಿತ್ರದಲ್ಲಿ ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ಮಿಂಚಿದ್ದರು. ವಿಷ್ಣುವರ್ಧನ್ ಸಹೋದರರಾಗಿ ಶಶಿಕುಮಾರ್ ಮತ್ತು ಅಭಿಜಿತ್ ಕಾಣಿಸಿಕೊಂಡಿದ್ದರು.

  ಕನ್ನಡದ ಆ 'ಸೂಪರ್ ಸ್ಟಾರ್' ನೆರವಿನಿಂದ ಜೈಜಗದೀಶ್ ಮೊದಲ ಮದುವೆ ಆಗಿತ್ತು.!ಕನ್ನಡದ ಆ 'ಸೂಪರ್ ಸ್ಟಾರ್' ನೆರವಿನಿಂದ ಜೈಜಗದೀಶ್ ಮೊದಲ ಮದುವೆ ಆಗಿತ್ತು.!

  ನಾಯಕಿಯಾಗಿ ಪ್ರೇಮಾ ಅಭಿಮಾನಿಗಳ ಮನಗೆದ್ದಿದ್ದರು. ಯಜಮಾನ ಪಕ್ಕ ಕೌಟುಂಬಿಕ ಸಿನಿಮಾ. ಕೂಡು ಕುಟುಂಬದ ಬಗ್ಗೆ ಇದ್ದ ಸಿನಿಮಾ. ಅದರಲ್ಲು ಅಣ್ಣ ತಮ್ಮಂದಿರ ಅನ್ಯೂನ್ಯತೆ ಸಿನಿಮಾದ ಹೈಲೆಟ್ಸ್. ಸಂಪ್ರದಾಯಸ್ಥ ಕುಟುಂಬದವರ ಮನಗೆಲ್ಲುವಲ್ಲಿ ಯಜಮಾನ ಸಕ್ಸಸ್ ಆಗಿತ್ತು. ಅಂದು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದ ಯಜಮಾನ ಸಿನಿಮಾ ತೆರೆಗೆ ಬಂದು 19 ವರ್ಷಗಳೆ ಕಳೆದಿವೆ.

  ಚಿತ್ರದ ಹಾಡುಗಳು ಸಹ ಚಿತ್ರಪ್ರಿಯರ ಹೃದಯ ಗೆದ್ದಿತ್ತು. ರಾಜೇಶ್ ರಾಮನಾಥ್ ಸಂಗೀತ ಸಂಯೋಜನೆ ಚಿತ್ರಕ್ಕಿತ್ತು. ಪ್ರೇಮ ಚಂದ್ರಮ, ನಮ್ಮ ಮನೆಯಲ್ಲಿ, ಶ್ರೀಗಂಧದ ಗೊಂಬೆ ಹೀಗೆ ಪ್ರತಿಯೊಂದು ಹಾಡುಗಳು ಇಂದಿಗೂ ಫೇಮಸ್. ಅಂದಿನ ಕಾಲಕ್ಕೆ ಕೋಟಿ ಕೋಟಿ ಬಾಚಿಕೊಂಡಿತ್ತು ಯಜಮಾನ.

  ಯಜಮಾನ ಟೈಟಲ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಸಿನಿಮಾ ಮಾಡಿ ಗೆದ್ದರು. ದರ್ಶನ್ ಹೇಳುವ ಹಾಗೆ 'ಸ್ಯಾಂಡಲ್ ವುಡ್ ಗೆ ಒಬ್ಬರೆ ಯಜಮಾನ ಅದು ಸಾಹಸಸಿಂಹ ವಿಷ್ಣುವರ್ಧನ್' ಎಂದು ಹೇಳಿದ್ದರು. ಇಂದು ವಿಷ್ಣುವರ್ಧನ್ ನಮ್ಮೊಂದಿಗೆ ಇಲ್ಲ. ಆದರೆ ಅವರ ಅದ್ಭುತ ಸಿನಿಮಾಗಳು ಅಭಿಮಾನಿಗಳನ್ನು ಇಂದಿಗೂ ರಂಜಿಸುತ್ತಿವೆ.

  English summary
  Kannada legend actor Vishnuvardhan starrer Yajamana movie completed 19 years.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X