ಇದೇ ಮೊದಲ ಬಾರಿಗೆ: ಶ್ರೀಮುರಳಿ ಜೊತೆಗೆ ಅಣ್ತಮ್ಮಂದಿರ ಭರ್ಜರಿ 'ಭರಾಟೆ'.!

Recommended Video

ಒಂದೇ ಸಿನಿಮಾದಲ್ಲಿ ತ್ರಿಮೂರ್ತಿಗಳು..! | FILMIBEAT KANNADA

ಸ್ಯಾಂಡಲ್ ವುಡ್ ನ ಸದ್ಯದ ಜನಪ್ರಿಯ ವಿಲನ್ ಯಾರಪ್ಪಾ ಅಂತ ಕೇಳಿದ್ರೆ, ಎಲ್ಲರ ಬಾಯಲ್ಲೂ ಥಟ್ ಅಂತ ಬರುವ ಉತ್ತರ ರವಿಶಂಕರ್. ''ಇದು ಆರ್ಮುಗಂ ಕೋಟೆ ಕಣೋ..'' ಅಂತ ಆರ್ಭಟಿಸಿದ ಮೇಲೆ ರವಿಶಂಕರ್ ಗೆ ಸ್ಯಾಂಡಲ್ ವುಡ್ ನಲ್ಲಿ ಡಿಮ್ಯಾಂಡ್ ಹೆಚ್ಚಾಯಿತು.

ಇನ್ನೂ ನಟ ಸಾಯಿ ಕುಮಾರ್ ಎಂದ ಕೂಡಲೆ ಎಲ್ಲರೂ ನೆನಪಿಸಿಕೊಳ್ಳುವುದು 'ಅಗ್ನಿ' ಚಿತ್ರವನ್ನ. ಖಡಕ್ ಪೊಲೀಸ್ ಆಫೀಸರ್ ಆಗಿ ಹಲವು ಕನ್ನಡ ಸಿನಿಮಾಗಳಲ್ಲಿ ಸಾಯಿ ಕುಮಾರ್ ನಟಿಸಿ ಕನ್ನಡಿಗರ ಮನ ಗೆದ್ದಿದ್ದಾರೆ.

ಇನ್ನೂ ಸಾಯಿ ಕುಮಾರ್ ಮತ್ತು ರವಿಶಂಕರ್ ಸಹೋದರ ಅಯ್ಯಪ್ಪ.ಪಿ.ಶರ್ಮ ಕೂಡ ಸ್ಯಾಂಡಲ್ ವುಡ್ ನಲ್ಲಿ ನಟನಾಗಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ.

ಸ್ವಂತ ಸಹೋದರರಾದರೂ ಈ ಮೂವರು ಒಂದೇ ಸಿನಿಮಾದಲ್ಲಿ ಈವರೆಗೆ ನಟಿಸಿಲ್ಲ. ಅಣ್ತಮ್ಮಂದಿರನ್ನ ತೆರೆಮೇಲೆ ಒಟ್ಟಿಗೆ ತರುವ ಪ್ರಯತ್ನ ಸದ್ಯ ನಡೆಯುತ್ತಿದೆ. ಅದು ಶ್ರೀಮುರಳಿ ಅಭಿನಯದ 'ಭರಾಟೆ' ಚಿತ್ರತಂಡದ ಕಡೆಯಿಂದ. ಮುಂದೆ ಓದಿರಿ...

'ಭರಾಟೆ' ಚಿತ್ರದಲ್ಲಿ ಅಣ್ತಮ್ಮಂದಿರು.!

'ಭರಾಟೆ' ಚಿತ್ರದಲ್ಲಿ ಅಣ್ತಮ್ಮಂದಿರು.!

ಶ್ರೀಮುರಳಿ ಅಭಿನಯದ ಚೇತನ್ ನಿರ್ದೇಶನದ 'ಭರಾಟೆ' ಚಿತ್ರದಲ್ಲಿ ಸಾಯಿ ಕುಮಾರ್, ರವಿಶಂಕರ್ ಮತ್ತು ಅಯ್ಯಪ್ಪ.ಪಿ.ಶರ್ಮ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ಅಣ್ಣಮ್ಮಂದಿರನ್ನ ಒಂದೇ ಸಿನಿಮಾದಲ್ಲಿ ಒಟ್ಟುಗೂಡಿಸುತ್ತಿರುವ ಖ್ಯಾತಿ 'ಭರಾಟೆ' ಚಿತ್ರತಂಡದ ಪಾಲಾಗಿದೆ.

ಮೂವರೂ ವಿಲನ್ ಗಳೇ.?

ಮೂವರೂ ವಿಲನ್ ಗಳೇ.?

'ಭರಾಟೆ' ಚಿತ್ರದಲ್ಲಿ ಈಗಾಗಲೇ ರವಿಶಂಕರ್ ಮತ್ತು ಅಯ್ಯಪ್ಪ.ಪಿ.ಶರ್ಮಾ ನಟಿಸಿದ್ದಾಗಿದೆ. ಸಾಯಿ ಕುಮಾರ್ ಭಾಗದ ಚಿತ್ರೀಕರಣ ಇನ್ನೂ ನಡೆದಿಲ್ಲ. ಅಂದ್ಹಾಗೆ, ಸಿನಿಮಾದಲ್ಲಿ ಈ ಮೂವರ ಪಾತ್ರವೇನು ಎಂಬುದನ್ನ ಚಿತ್ರತಂಡ ಬಿಟ್ಟುಕೊಟ್ಟಿಲ್ಲ.

ಶ್ರೀಮುರಳಿ ಇಮೇಜ್ ಗೆ ತಕ್ಕ ಸಿನಿಮಾ

ಶ್ರೀಮುರಳಿ ಇಮೇಜ್ ಗೆ ತಕ್ಕ ಸಿನಿಮಾ

'ಉಗ್ರಂ', 'ರಥಾವರ', 'ಮಫ್ತಿ' ಬಳಿಕ ಶ್ರೀಮುರಳಿ ನಟಿಸುತ್ತಿರುವ ಸಿನಿಮಾ 'ಭರಾಟೆ'. ಶ್ರೀಮುರಳಿಗೆ ಇರುವ ಇಮೇಜ್ ಗೆ ತಕ್ಕ ಹಾಗೆ 'ಭರಾಟೆ' ಸ್ಕ್ರಿಪ್ಟ್ ರೆಡಿ ಮಾಡಲಾಗಿದೆ. ಕ್ಲಾಸ್ ಕಮ್ ಮಾಸ್ ಎಲಿಮೆಂಟ್ಸ್ ಚಿತ್ರದಲ್ಲಿ ಇರಲಿದೆ.

'ಭರಾಟೆ' ಕುರಿತು....

'ಭರಾಟೆ' ಕುರಿತು....

ಶ್ರೀಮುರಳಿ ಮತ್ತು ಶ್ರೀಲೀಲಾ ಮುಖ್ಯಭೂಮಿಕೆಯಲ್ಲಿರುವ 'ಭರಾಟೆ' ಚಿತ್ರಕ್ಕೆ ಬಂಡವಾಳ ಹಾಕುತ್ತಿರುವವರು ಸುಪ್ರೀತ್. 'ಬಹದ್ದೂರ್', 'ಭರ್ಜರಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಚೇತನ್ 'ಭರಾಟೆ' ಚಿತ್ರದ ಡೈರೆಕ್ಟರ್.

More from Filmibeat

English summary
Sai Kumar, Ravi Shankar and Ayyappa P Sharma to share screen space for first time in Srimurali starrer Kannada Film 'Bharaate'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X