'ಯುವರತ್ನ' ತಂಡ ಸೇರಿಕೊಂಡ ಸಾಯಿ ಕುಮಾರ್, ರಂಗಾಯಣ ರಘು

Recommended Video

Yuvaratna Movie: ಪುನೀತ್ ರಾಜ್‍ಕುಮಾರ್ ಅಡ್ಡಾದಲ್ಲಿ ಸಾಯಿ ಕುಮಾರ್! | FILMIBEAT KANNADA

ಪುನೀತ್ ರಾಜ್ ಕುಮಾರ್ ನಟನೆಯ 'ಯುವರತ್ನ' ಸಿನಿಮಾದ ಚಿತ್ರತಂಡಕ್ಕೆ ಒಬ್ಬರ ನಂತರ ಮತ್ತೊಬ್ಬರು ಕಲಾವಿದರು ಸೇರಿಕೊಳ್ಳುತ್ತಿದ್ದಾರೆ. ಈಗ ನಟ ಸಾಯಿ ಕುಮಾರ್ ಹಾಗೂ ರಂಗಾಯಣ ರಘು ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇತ್ತೀಚಿಗಷ್ಟೆ ಸಿನಿಮಾದಲ್ಲಿ ನಟ ದಿಗಂತ್ ಹಾಗೂ ನಟಿ ಸೋನು ಗೌಡ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಬಂತು. ಅದರ ಬಳಿಕ ಸಾಯಿ ಕುಮಾರ್ ಹಾಗೂ ರಂಗಾಯಣ ರಘು ಸಿನಿಮಾದಲ್ಲಿ ಇದ್ದಾರೆ ಎಂದು ಹೊಂಬಾಳೆ ಫಿಲ್ಮ್ಸ್ ತಿಳಿಸಿದೆ.

 sai kumar and ranghayana raghu enters to yuvaratna kannada movie team

ಇಂದು ನಟ ಸಾಯಿ ಕುಮಾರ್ ಅವರ ಹುಟ್ಟುಹಬ್ಬದ ವಿಶೇಷವಾಗಿ 'ಯುವರತ್ನ' ಚಿತ್ರತಂಡ ಈ ವಿಷಯವನ್ನು ಹಂಚಿಕೊಂಡಿದೆ. ವಿಶೇಷ ಅಂದರೆ, ಇದೇ ಮೊದಲ ಬಾರಿಗೆ ಪುನೀತ್ ಜೊತೆಗೆ ಸಾಯಿ ಕುಮಾರ್ ತೆರೆ ಹಂಚಿಕೊಳ್ಳುತ್ತಿದ್ದಾರೆ.

ನಟ ರಂಗಾಯಣ ರಘು ಹಾಗೂ ಪುನೀತ್ ರಾಜ್ ಕುಮಾರ್ ಈ ಹಿಂದೆ 'ರಾಮ್', 'ಪವರ್ ಸ್ಟಾರ್', 'ರಾಜಕುಮಾರ' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು.

 sai kumar and ranghayana raghu enters to yuvaratna kannada movie team

ನಾಯಕಿಯಾಗಿ ಸಯ್ಯೇಶಾ ಚಿತ್ರದ ಲೀಡ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ, ಧನಂಜಯ್, ವಸಿಷ್ಟ, ರಾಧಿಕಾ ಶರತ್ ಕುಮಾರ್, ಪ್ರಕಾಶ್ ರಾಜ್, ದಿಗಂತ್, 'ಟಗರು' ಖ್ಯಾತಿಯ ನಟಿ ತ್ರಿವೇಣಿ, ಅರು ಗೌಡ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಸಂತೋಷ್ ಆನಂದ್ ರಾಮ್ ನಿರ್ದೇಶನದ ಮೂರನೇ ಸಿನಿಮಾ ಇದಾಗಿದೆ. ತಮನ್ ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ.

More from Filmibeat

English summary
Actor Sai Kumar and Ranghayana Raghu enters to Puneeth Rajkumar in 'Yuvaratna' kannada movie team. The movie is directing by Santhosh Ananddram and producing by Hombale films.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X