ರೋರಿಂಗ್ ಸ್ಟಾರ್ ಶ್ರೀಮುರಳಿ ಜೊತೆ ಸಾಯಿಕುಮಾರ್ 'ಭರಾಟೆ'
ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ 'ಭರಾಟೆ' ಚಿತ್ರದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್ ನಟಿಸುತ್ತಾರೆ ಎಂಬ ಸುದ್ದಿಯನ್ನು ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವೆಲ್ಲ ಓದಿದ್ರಿ.
ಇದೀಗ 'ಭರಾಟೆ' ಚಿತ್ರತಂಡಕ್ಕೆ ಸಾಯಿ ಕುಮಾರ್ ರವರನ್ನು ನಟ ಶ್ರೀಮುರಳಿ ಅಧಿಕೃತವಾಗಿ ವೆಲ್ ಕಮ್ ಮಾಡಿದ್ದಾರೆ. "ಭರಾಟೆ' ಚಿತ್ರತಂಡ ನಿಮ್ಮನ್ನು ಆತ್ಮೀಯವಾಗಿ ಸ್ವಾಗತಿಸುತ್ತದೆ. ಅಗ್ನಿ ಅಲಿಯಾಸ್ ಸಾಯಿ ಕುಮಾರ್ ಸರ್ ಜೊತೆ ಕೆಲಸ ಮಾಡುತ್ತಿರುವುದಕ್ಕೆ ಖುಷಿ ನೀಡಿದೆ" ಎಂದು ನಟ ಶ್ರೀಮುರುಳಿ ಇಂದು ಟ್ವೀಟ್ ಮಾಡಿದ್ದಾರೆ.
ಅಂದಹಾಗೆ 'ಭರಾಟೆ' ಚಿತ್ರದಲ್ಲಿ ಬರೀ ಸಾಯಿ ಕುಮಾರ್ ಮಾತ್ರ ಅಲ್ಲ. ಅವರೊಂದಿಗೆ ಅವರ ಸಹೋದರರು ಕೂಡ ತೆರೆ ಹಂಚಿಕೊಳ್ಳುತ್ತಿದ್ದಾರೆ.
ಹೌದು, ಇದೇ ಮೊಟ್ಟಮೊದಲ ಬಾರಿಗೆ ಸಹೋದರರಾದ ಸಾಯಿಕುಮಾರ್, ರವಿಶಂಕರ್ ಮತ್ತು ಅಯ್ಯಪ್ಪ.ಪಿ.ಶರ್ಮ ಸಿನಿಮಾ ಒಂದರಲ್ಲಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಇಂತಹ ಅಪರೂಪ ಸಂಗಮಕ್ಕೆ ಚೇತನ್ ನಿರ್ದೇಶನದ 'ಭರಾಟೆ' ಸಾಕ್ಷಿಯಾಗಿದೆ.

'ಭರಾಟೆ' ಚಿತ್ರದಲ್ಲಿ ಈ ಮೂವರ ಪಾತ್ರವೇನು ಎಂಬುದು ಸದ್ಯಕ್ಕೆ ಸಸ್ಪೆನ್ಸ್ ಆಗಿ ಉಳಿದಿದೆ. ಮೂವರು ವಿಲನ್ ಗಳಾಗಿ ಕಾಣಿಸಿಕೊಳ್ಳುತ್ತಿದ್ದಾರಾ ಎಂಬ ಪ್ರಶ್ನೆಗೆ ಚಿತ್ರತಂಡ ಉತ್ತರ ಕೊಟ್ಟಿಲ್ಲ.
ಇದೇ ಮೊದಲ ಬಾರಿಗೆ: ಶ್ರೀಮುರಳಿ ಜೊತೆಗೆ ಅಣ್ತಮ್ಮಂದಿರ ಭರ್ಜರಿ 'ಭರಾಟೆ'.!
ಶ್ರೀಮುರಳಿ ಇಮೇಜ್ ಗೆ ತಕ್ಕ ಹಾಗೆ ರೆಡಿಯಾಗುತ್ತಿರುವ ಸಿನಿಮಾ 'ಭರಾಟೆ'. ಚಿತ್ರಕ್ಕೆ ಶ್ರೀಲೀಲಾ ನಾಯಕಿಯಾಗಿದ್ದು ಸುಪ್ರೀತ್ ಬಂಡವಾಳ ಹೂಡಿದ್ದಾರೆ. ಸದ್ಯ 'ಭರಾಟೆ'ಯ ಚಿತ್ರೀಕರಣ ಭರದಿಂದ ಸಾಗುತ್ತಿದೆ.


Click it and Unblock the Notifications











