'ಅವತಾರ್ ಪುರುಷ'ನ ಜೊತೆ ಹೊಸ ಅವತಾರವೆತ್ತಿದ ಡೈಲಾಗ್ ಕಿಂಗ್
ಸಿಂಪಲ್ ಸುನಿ ಮತ್ತು ಶರಣ್ ಕಾಂಬಿನೇಷನ್ ನಲ್ಲಿ ಬರುತ್ತಿರುವ ಅವತಾರ್ ಪುರುಷ ಸಿನಿಮಾದಲ್ಲಿ ಡೈಲಾಗ್ ಕಿಂಗ್ ಸಾಯಿ ಕುಮಾರ್ ನಟಿಸುತ್ತಿದ್ದಾರೆ. ಇದೀಗ, ಸಾಯಿ ಕುಮಾರ್ ಅವರ ಪಾತ್ರ ಮತ್ತು ಲುಕ್ ಬಹಿರಂಗವಾಗಿದೆ.
ಶರಣ್ ಬಾಲ್ಯದ ದಿನದಲ್ಲಿ ಬರುವ ಪ್ರಮುಖ ಪಾತ್ರ ಇದಾಗಿದ್ದು, ರಾಮಾ ಜೋಯಿಸರ ಎಂಬ ಆರ್ಯುವೇದಿಕ್ ಪಂಡಿತ್ ಆಗಿ ಸಾಯಿ ಕುಮಾರ್ ನಟಿಸುತ್ತಿದ್ದಾರೆ. ಎರಡು ವಿಭಿನ್ನ ಶೇಡ್ ಗಳನ್ನ ಹೊಂದಿದ್ದು, ರಂಗಿತರಂಗ ನಂತರ ಸಾಯಿ ಕುಮಾರ್ ನಟಿಸುತ್ತಿರುವ ಆಸಕ್ತಿದಾಯಿಕ ಪಾತ್ರ ಇದಾಗಿದೆ.
ಅಂದ್ಹಾಗೆ, ಜುಲೈ 27 ಸಾಯಿ ಕುಮಾರ್ ಹುಟ್ಟುಹಬ್ಬ. ಹೀಗಾಗಿ ಈ ವಿಶೇಷ ದಿನದಂದು ಸಾಯಿ ಕುಮಾರ್ ಅವರ ಹೊಸ ಅವತಾರವನ್ನ ಚಿತ್ರತಂಡ ಪ್ರಸ್ತುತ ಪಡಿಸಿದೆ.

ವಿಶೇಷ ಅಂದ್ರೆ ಬಹಳ ವರ್ಷಗಳ ನಂತರ ಹಿರಿಯ ನಟಿ ಸುಧಾರಾಣಿ ಅವರ ಜೊತೆ ಸಾಯಿ ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ. ಸಾಯಿ ಕುಮಾರ್ ಅವರ ಮೊದಲನೇ ಚಿತ್ರದ ನಾಯಕಿ ಸುಧಾರಾಣಿ ಈಗ ಅವತಾರ್ ಪುರುಷ ಚಿತ್ರದಲ್ಲಿ ಸಹೋದರಿ ಪಾತ್ರ ಮಾಡುತ್ತಿದ್ದಾರೆ. ಮತ್ತೊಬ್ಬ ಹಿರಿಯ ನಟಿ ಭವ್ಯ ಅವರು ಸಾಯಿಕುಮಾರ್ ಗೆ ಜೋಡಿಯಾಗಿ ನಟಿಸುತ್ತಿದ್ದಾರೆ.
ಸಿಂಪಲ್ ಸುನಿ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಪುಷ್ಕರ್ ಮಲ್ಲಿಕಾರ್ಜುನ್ ಬಂಡವಾಳ ಹಾಕಿದ್ದಾರೆ. ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸುತ್ತಿದ್ದಾರೆ.


Click it and Unblock the Notifications











