ಕಾಣ್ದೆ ಇರೋ ಆ ನಾಲ್ಕನೇ ಸಿಂಹ ಯಾರು? ಸಾಯಿಕುಮಾರ್ ಹೇಳ್ತಿರೋದೇನು?

''ಕಣ್ಣಿಗೆ ಕಾಣಿಸೊ ಮೂರು ಸಿಂಹಗಳು ನೀತಿಗೆ, ನ್ಯಾಯಕ್ಕೆ, ಧರ್ಮಕ್ಕೆ ಪ್ರತಿರೂಪವಾಗಿದ್ರೆ, ಕಾಣ್ದೆ ಇರೋ ನಾಲ್ಕನೇ ಸಿಂಹವೇ ಕಣೋ ಪೋಲೀಸ್'' ಸಾಯಿ ಕುಮಾರ್ ಅವರ ಈ ಡೈಲಾಗ್ ಕೇಳದೇ ಇರುವ ಕನ್ನಡಿಗರು ಕಡಿಮೆಯೇ.

ಪೊಲೀಸ್ ಸ್ಟೋರಿ ಸಿನಿಮಾ ಬಿಡುಗಡೆ ಆಗಿ 24 ವರ್ಷವಾಗಿದೆ. ಆದರೆ ಈಗಲೂ ಸಾಯಿ ಕುಮಾರ್ ಅವರು ಎಲ್ಲಿಗೇ ಹೋದರು ಇದೇ ಡೈಲಾಗ್ ಹೇಳುವ ಬೇಡಿಕೆಗಳು ಬರುತ್ತವೆ.

ಈಗ ಮತ್ತೆ ಸಾಯಿ ಕುಮಾರ್ ಅವರು ಇದೇ ಡೈಲಾಗ್‌ ಅನ್ನು ಹೇಳಿದ್ದಾರೆ. ಆದರೆ ಆ ನಾಲ್ಕು ಸಿಂಹಗಳ ಪ್ರತಿರೂಪಗಳನ್ನು ಸಂದರ್ಭಕ್ಕೆ ತಕ್ಕಂತೆ ಬದಲಾವಣೆ ಮಾಡಿದ್ದಾರೆ.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಹಾಕಿರುವ ಸಾಯಿ ಕುಮಾರ್, ಪೊಲೀಸ್ ಸ್ಟೋರಿ ಸಿನಿಮಾದ ಡೈಲಾಗ್ ಅನ್ನು ಈಗಿನ ಪರಿಸ್ಥಿತಿಗೆ ತಕ್ಕಂತೆ ಬದಲಿಸಿ ಹೇಳಿದ್ದಾರೆ. ಅದು ಹೀಗಿದೆ...

ನಾಲ್ಕು ಸಿಂಹಗಳು ಯಾರು?

'ಕಾಣ್ತಾ ಇರೋ ಮೂರು ಸಿಂಹಗಳು ವೈದ್ಯರು, ಪೊಲೀಸರು, ಪೌರ ಕಾರ್ಮಿಕರು ಆದರೆ ಕಾಣ್ದೆ ಇರೋ ಆ ನಾಲ್ಕನೇ ಸಿಂಹಗಳೇ ನೀವುಗಳು (ಸಾರ್ವಜನಿಕರು)' ಎಂದಿದ್ದಾರೆ ಸಾಯಿ ಕುಮಾರ್.

ಡೈಲಾಗ್ ಬದಲಿಸಿದ ಸಾಯಿಕುಮಾರ್

ಡೈಲಾಗ್ ಬದಲಿಸಿದ ಸಾಯಿಕುಮಾರ್

ಕೊರೊನಾ ಸಂದರ್ಭಕ್ಕೆ ತಕ್ಕಂತೆ ಸಾಯಿ ಕುಮಾರ್ ಡೈಲಾಗ್ ಅನ್ನು ಬದಲಿಸಿದ್ದು, ವೈದ್ಯರು, ಪೊಲೀಸರು, ಪೌರ ಕಾರ್ಮಿಕರು ನೇರವಾಗಿ ಕಣ್ಣಿಗೆ ಕಾಣುವಂತೆ ಕೊರೊನಾ ವಿರುದ್ಧ ಹೋರಾಡುತ್ತಿದ್ದರೆ, ಮನೆಯಲ್ಲೇ ಉಳಿದು, ಸರ್ಕಾರದ ನಿಯಮಗಳನ್ನು ಪಾಲಿಸುವ ಮೂಲಕ ಪರೋಕ್ಷವಾಗಿ ಕಣ್ಣಿಗೆ ಕಾಣದಂತೆ ಸಾರ್ವಜನಿಕರು ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ ಎಂದು ಹೇಳಿದ್ದಾರೆ ಸಾಯಿಕುಮಾರ್.

''ದೇಶಕ್ಕೆ ನಾವು ಏನು ಕೊಡುಗೆ ಕೊಟ್ಟಿದ್ದೇವೆನ್ನುವುದು ಅವಶ್ಯಕ''

''ದೇಶಕ್ಕೆ ನಾವು ಏನು ಕೊಡುಗೆ ಕೊಟ್ಟಿದ್ದೇವೆನ್ನುವುದು ಅವಶ್ಯಕ''

ದೇಶ ನಮಗೇನು ಮಾಡಿತು ಎನ್ನುವುದಕ್ಕಿಂತಲೂ, ದೇಶಕ್ಕೆ ನಾವೇನು ಮಾಡಿದೆವು ಎನ್ನುವುದು ಮುಖ್ಯ. ಹಾಗಾಗಿ ಈಗಿನ ಸಂದರ್ಭದಲ್ಲಿ ನಾವು ದೇಶಕ್ಕಾಗಿ ಮಾಡಬೇಕಾಗಿರುವ ಸೇವೆಯೆಂದರೆ ಮನೆಯಲ್ಲಿದ್ದು ಕೊರೊನಾ ಹರಡದಂತೆ ತಡೆಯುವುದೇ ದೇಶಕ್ಕೆ ನಾವು ಸಲ್ಲಿಸುವ ಸೇವೆ ಎಂದು ಸಾಯಿ ಕುಮಾರ್ ಹೇಳಿದ್ದಾರೆ.

ಎಲ್ಲರೂ ಒಟ್ಟಾಗಿ ಹೋರಾಡೋಣ: ಸಾಯಿಕುಮಾರ್

ಎಲ್ಲರೂ ಒಟ್ಟಾಗಿ ಹೋರಾಡೋಣ: ಸಾಯಿಕುಮಾರ್

ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ನಾವೆಲ್ಲರೂ ಒಟ್ಟಾಗಿ ಕೊರೊನಾ ವಿರುದ್ಧ ಒಟ್ಟಾಗಿ ಹೋರಾಡೋಣ. ದೇಶದಿಂದ, ಪ್ರಪಂಚದಿಂದ ಓಡಿಸಿ ಮುಕ್ತರಾಗೋಣ ಎಂದು ಸಾಯಿಕುಮಾರ್ ಕರೆ ನೀಡಿದ್ದಾರೆ.

More from Filmibeat

English summary
Actor Sai Kumar praised Doctors, Police, civil workers and people. Compared them to four lions of Ashoka Chakra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X