ಸೆಪ್ಟಂಬರ್ 10ಕ್ಕೆ ರಿವೀಲ್ ಆಗ್ತಿದೆ ಸಾಯಿ ಪಲ್ಲವಿ-ನಾಗ ಚೈತನ್ಯ 'ಲವ್ ಸ್ಟೋರಿ'

ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಸಾಯಿ ಪಲ್ಲವಿ ಮತ್ತು ತೆಲುಗು ನಟ ನಾಗಚೈತನ್ಯ ನಟನೆಯ ಬಹುನಿರೀಕ್ಷೆಯ 'ಲವ್ ಸ್ಟೋರಿ' ಸಿನಿಮಾ ಯಾವಾಗ ತೆರೆಮೇಲೆ ಬರಲಿದೆ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು. ಇದೀಗ ಈ ಕುತೂಹಲಕ್ಕೆ ತೆರೆ ಬಿದ್ದಿದೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೇ ಬಿಡುಗಡೆಯಾಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಮುಂದಕ್ಕೆ ಹೋಗಿತ್ತು.

ಈ ಮೊದಲು ಏಪ್ರಿಲ್ 16ಕ್ಕೆ ಲವ್ ಸ್ಟೋರಿ ಸಿನಿಮಾ ಬಿಡುಗಡೆ ದಿನಾಂಕ ನಿಗದಿಪಡಿಸಲಾಗಿತ್ತು. ಅಲ್ಲದೆ ಸಿನಿಮಾದ ಪ್ರಮೋಷನ್ ಕೂಡ ಭರ್ಜರಿಯಾಗಿ ನಡೆಯುತ್ತಿತ್ತು. ಆದರೆ ದೇಶದಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚಾಗಿ ಹಲವು ರಾಜ್ಯಗಳಲ್ಲಿ ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರಲಾಯಿತು. ಆಂಧ್ರ-ತೆಲಂಗಾಣಗಳಲ್ಲಿ ಸಹ ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿತು. ಹಾಗಾಗಿ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳದೆ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿತ್ತು.

ಇದೀಗ ಮತ್ತೆ 'ಲವ್ ಸ್ಟೋರಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು ಹೊಸ ದಿನಾಂಕವನ್ನು ಘೋಷಿಸಲಾಗಿದೆ. ಸಿನಿಮಾವನ್ನು ಮುಂದಿನ ತಿಂಗಳು ಅಂದರೆ ಸೆಪ್ಟಂಬರ್ 10ಕ್ಕೆ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಅನೌನ್ಸ್ ಮಾಡಿದೆ. ಗೌರಿ ಗಣೇಶ ಹಬ್ಬದ ದಿನ ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ಲವ್ ಸ್ಟೋರಿ ರಿವೀಲ್ ಆಗಲಿದೆ.

Sai Pallavi and Naga Chaitanya starrer Love story movie set to release on September 10

ಅಂದಹಾಗೆ ಬಹುನಿರೀಕ್ಷೆಯ 'ಲವ್ ಸ್ಟೋರಿ' ಸಿನಿಮಾವನ್ನು ಶೇಖರ್ ಕಮ್ಮುಲ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿವೆ. 'ಸಾರಂಗ ದರಿಯಾ' ಹಾಡಂತೂ ಯೂಟ್ಯೂಬ್ ನಲ್ಲಿ ದಾಖಲೆ ಬರೆದಿದೆ. ಸೂಪರ್ ಹಿಟ್ ಆಗುವ ಜೊತೆಗೆ ಈ ಹಾಡು ವಿವಾದವನ್ನು ಸೃಷ್ಟಿ ಮಾಡಿತ್ತು. 'ಸರಂಗ ದರಿಯಾ' ಹಾಡಿನ ಮೂಲ ಗಾಯಕಿ ಎನ್ನಲಾಗುತ್ತಿರುವ ಕೋಮಲಿ ಎನ್ನುವವರು ಹಾಡಿನ ಮೇಲೆ ಹಕ್ಕುಚ್ಯುತಿ ಪ್ರಕರಣ ದಾಖಲಿಸುವುದಾಗಿ ಹೇಳಿ ಚಿತ್ರತಂಡದ ವಿರುದ್ಧ ಗರಂ ಆಗಿದ್ದರು. ಬಳಿಕ ಈ ವಿವಾದ ಸೈಲೆಂಟ್ ಆಯಿತು. ಈ ಹಾಡು ನಟಿ ಸಾಯಿ ಪಲ್ಲವಿ ಸೂಪರ್ ಸ್ಟೆಪ್ ಮತ್ತು ಗಾಯಕಿ ಮಂಗ್ಲಿ ಧ್ವನಿ ತೆಲುಗು ಪ್ರೇಕ್ಷಕರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದೆ.

ಅಂದಹಾಗೆ ಶೇಖರ್ ಕಮ್ಮುಲ ನಿರ್ದೇಶನದಲ್ಲಿ ನಟಿ ಸಾಯಿ ಪಲ್ಲವಿ ನಟಿಸುತ್ತಿರುವ ಎರಡನೇ ಸಿನಿಮಾ 'ಲವ್ ಸ್ಟೋರಿ'. ಈ ಮೊದಲು ಶೇಖರ್ ನಿರ್ದೇಶಿಸಿದ್ದ 'ಫಿದಾ' ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ ಟ್ರೈಲರ್ ಮತ್ತು ಹಾಡುಗಳನ್ನು ನೋಡಿದ್ರೆ ಮತ್ತೆ ಹಳೆ ಮ್ಯಾಜಿಕ್ ಪುನರಾವರ್ತನೆ ಆಗಲಿದೆ ಎನ್ನಲಾಗುತ್ತಿದೆ.

ಬಿಡಗಡೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿರುವ ಸಿನಿಮಾತಂಡ "ಕೊನೆಗೂ ನಾವು ನಿಮ್ಮನ್ನು ಸೆಪ್ಟಂಬರ್ 10ಕ್ಕೆ ನೋಡುತ್ತೇವೆ" ಎಂದು ಬರೆದುಕೊಂಡಿದ್ದಾರೆ.

Sai Pallavi and Naga Chaitanya starrer Love story movie set to release on September 10

ಇನ್ನು ನಟ ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ಮೊದಲ ಬಾರಿಗೆ ತೆರೆಮೇಲೆ ಬರ್ತಿದ್ದಾರೆ. ಇಬ್ಬರ ಹೊಸ ಕಾಂಬಿನೇಷನ್ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ. ಈಗಾಗಲೇ ಟ್ರೇಲರ್, ಫಸ್ಟ್ ಲುಕ್ ಮೂಲಕ ನಿರೀಕ್ಷೆ, ಕುತೂಹಲ ಹೆಚ್ಚಿಸಿರುವ ಲವ್ ಸ್ಟೋರಿ ಸೆಪ್ಟಂಬರ್ 10ಕ್ಕೆ ಮ್ಯಾಜಿಕ್ ಮಾಡುತ್ತಾ ಎಂದು ಕಾದುನೋಡಬೇಕು.

'ಲವ್‌ ಸ್ಟೋರಿ' ಹೊರತಾಗಿ ಸಾಯಿ ಪಲ್ಲವಿ 'ವಿರಾಟ ಪರ್ವಂ' ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿದ್ದು ಸದ್ಯದಲ್ಲೇ ಅಭಿಮಾನಿಗಳ ಮುಂದೆ ಬರಲಿದೆ. ಜೊತೆಗೆ ನಟ ನಾನಿ ನಟನೆಯ 'ಶ್ಯಾಮ ಸಿಂಗ ರಾಯ್' ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಇನ್ನು ನಟ ನಾಗ ಚೈತನ್ಯ ತೆಲುಗು ಜೊತೆಗೆ ಬಾಲಿವುಡ್ ಗೂ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಬಾರಿಗೆ ನಾಗ ಚೈತನ್ಯ ಬಾಲಿವುಡ್ ನಲ್ಲಿ ನಟಿಸುತ್ತಿದ್ದು, ಆಮೀರ್ ಖಾನ್ ಜೊತೆ ತೆರೆಹಂಚಿಕೊಂಡಿದ್ದಾರೆ.

ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡ ಸಿನಿಮಾದಲ್ಲಿ ನಾಗ ಚೈತನ್ಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಕೆಲವು ಫೋಟೋಗಳು ವೈರಲ್ ಆಗಿದ್ದು, ಲಾಲ್ ಸಿಂಗ್ ಚಡ್ಡ ಕೂಡ ಬಾಲಿವುಡ್ ನ ನಿರೀಕ್ಷೆಯ ಸಿನಿಮಾವಾಗಿದೆ.

More from Filmibeat

English summary
Actress Sai Pallavi and Naga Chaitanya starrer Love story movie set to release on September 10.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X