ಅವರಿಬ್ಬರ ಸ್ಫೂರ್ತಿಯಿಂದಲೇ ಸಾಯಿ ಪಲ್ಲವಿ ಡ್ಯಾನ್ಸ್ ಕಲಿತರು.!
Recommended Video
ಸೌತ್ ಇಂಡಸ್ಟ್ರಿಯಲ್ಲಿ ಮೋಡಿ ಮಾಡುತ್ತಿರುವ ನಟಿ ಸಾಯಿ ಪಲ್ಲವಿ ಸದ್ಯ ಸ್ಟಾರ್ ನಟರ ನೆಚ್ಚಿನ ನಟಿ. ಮಾಡಿರುವುದು ಕಡಿಮೆ ಚಿತ್ರಗಳಾದರೂ ಅದಕ್ಕಿಂತ ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದಾರೆ. ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರಗಳಲ್ಲಿ ಬೇಡಿಕೆ ಹೊಂದಿರುವ ಸಾಯಿ ಪಲ್ಲವಿ ಸದ್ಯದಲ್ಲೇ ಕನ್ನಡಕ್ಕೂ ಬರಲಿದ್ದಾರೆ ಎನ್ನಲಾಗುತ್ತಿದೆ.
ದಕ್ಷಿಣ ಭಾರತದ ಅನೇಕ ನಟ-ನಟಿಯರು ಈ ಲಕ್ಕಿ ಕಲಾವಿದೆಗೆ ಶುಭ ಕೋರಿದ್ದಾರೆ. ಕೇವಲ ನಟನೆಯಿಂದ ಮಾತ್ರವಲ್ಲ, ಡ್ಯಾನ್ಸ್ ನಿಂದಲೂ ಪಲ್ಲವಿ ಬಹುದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಅಂದ್ಹಾಗೆ, ಸಾಯಿ ಪಲ್ಲವಿ ಎಲ್ಲಿಯೂ ಡ್ಯಾನ್ಸ್ ಕ್ಲಾಸ್ ಗೆ ಹೋಗಿಲ್ಲವಂತೆ. ಆ ಇಬ್ಬರು ನಟಿಯರ ಚಿತ್ರಗಳನ್ನ ನೋಡಿಯೇ ಡ್ಯಾನ್ಸ್ ಕಲಿಯುತ್ತಿದ್ದರಂತೆ.
ಹೌದು, ಸಾಯಿ ಪಲ್ಲವಿ ಅವರ ನೆಚ್ಚಿನ ನಟಿಯರಾದ ಮಾಧುರಿ ದೀಕ್ಷಿತ್ ಮತ್ತು ಐಶ್ವರ್ಯ ರೈ ಅವರ ಡ್ಯಾನ್ಸ್ ನೋಡಿ, ತಾನು ಕೂಡ ಡ್ಯಾನ್ಸ್ ಮಾಡುತ್ತಿದ್ದರಂತೆ. ಕ್ರಮೇಣ ಡ್ಯಾನ್ಸ್ ಮೇಲೆ ಹೆಚ್ಚು ಆಸಕ್ತಿ ಬೆಳಸಿಕೊಂಡರಂತೆ.

ಇನ್ನು ಸಾಯಿ ಪಲ್ಲವಿ ನಟಿಯಾಗಬೇಕು ಎಂದು ಯಾವತ್ತು ಅಂದುಕೊಂಡಿಲಿಲ್ಲವಂತೆ. ಮೆಡಿಕಲ್ ನಲ್ಲಿ ಪದವಿ ಪಡೆದುಕೊಂಡಿದ್ದ ಈಕೆ ಡಾಕ್ಟರ್ ಆಗುವ ಕನಸು ಹೊಂದಿದ್ದರು. ಈ ಮಧ್ಯೆ ನಟನೆ ಮೇಲೆ ಆಸಕ್ತಿ ಹೊಂದಿ, ಅಕಸ್ಮಾತ್ ಆಗಿ ಇಂಡಸ್ಟ್ರಿಗೆ ಬಂದರು.
ಸಿಕ್ಕ ಅವಕಾಶಗಳನ್ನ ಬಳಸಿಕೊಂಡ ಸಾಯಿ ಪಲ್ಲವಿ, ಹಿಟ್ ಮೇಲೆ ಹಿಟ್ ಚಿತ್ರಗಳ ನೀಡಿ ಈಗ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. 2005ರಲ್ಲಿ ತಮಿಳಿನ ಕಸ್ತೂರಿ ಮಾನ್ ಚಿತ್ರದಲ್ಲಿ ಸಣ್ಣದೊಂದು ಪಾತ್ರ ಮಾಡಿದ್ದರು. ನಂತರ 2008 ರಲ್ಲಿ ಬಂದಿದ್ದ 'ದಾಂ ಧೂಂ' ಚಿತ್ರದಲ್ಲಿ ಕಂಗನಾ ಜೊತೆ ಸ್ನೇಹಿತೆಯಾಗಿ ನಟಿಸಿದ್ದರು. 2015ರಲ್ಲಿ ಮಲಯಾಳಂನ ಪ್ರೇಮಂ ಚಿತ್ರದ ಮಲರ್ ಪಾತ್ರದಲ್ಲಿ ಮಿಂಚಿದ ಸಾಯಿ ಪಲ್ಲವಿ ರಾತ್ರೋ ರಾತ್ರಿ ಸ್ಟಾರ್ ಆಗಿದ್ದು ಈಗ ಇತಿಹಾಸ.
ತೆಲುಗಿನ ಫಿದಾ, ಎಂಎಲ್ಎ ಹಾಗೂ ತಮಿಳಿನ ಮಾರಿ-2 ಅಂತಹ ಸಿನಿಮಾದಲ್ಲಿ ನಟಿಸಿದ್ದಾರೆ. ಈಗ ಸೂರ್ಯ ಅಭಿನಯದ ಎನ್.ಜಿ.ಕೆ ಚಿತ್ರದ ನಾಯಕಿಯಾಗಿ ನಟಿಸಿದ್ದು, ಬಿಡುಗಡೆಗೆ ಕಾಯುತ್ತಿದ್ದಾರೆ.


Click it and Unblock the Notifications











