ಸಿನಿಮಾ ಸೋತಿದ್ದಕ್ಕೆ ಸಾಯಿ ಪಲ್ಲವಿ ಮಾಡಿದ್ದೇನು ಗೊತ್ತಾ?

ಸಿನಿಮಾ ಇಂಡಸ್ಟ್ರಿಯಲ್ಲಿ ನಾಯಕಿಯರು ಸಂಭಾವನೆ ತಾರತಮ್ಯ ವಿಚಾರ ಬಹುದಿನಗಳಿಂದ ಚರ್ಚೆಯಲ್ಲಿದೆ. ಹೀರೋಗಳಿಗೆ ಕೊಡೊವಷ್ಟೇ ಹೀರೋಯಿನ್ ಗಳಿಗೂ ಸಂಭಾವನೆ ಕೊಡಿ ಎಂದು ಅನೇಕ ನಟಿಯರು ಕೇಳಿದ್ದಾರೆ. ಹೀಗೆ, ಸಂಭಾವನೆ ವಿಷ್ಯದಲ್ಲಿ ಸುದ್ದಿಯಾಗಿದ್ದ ನಟಿಯರ ಮಧ್ಯೆ ಸಂಭಾವನೆಯೇ ಬೇಡ ಎಂಬ ನಟಿಯೊಬ್ಬರು ಈಗ ಸುದ್ದಿಯಾಗಿದ್ದಾರೆ.

ಹೌದು, ತೆಲುಗು ನಟಿ ಸಾಯಿ ಪಲ್ಲವಿ ಸಂಭಾವನೆ ವಿಚಾರದಲ್ಲಿ ಸಭ್ಯತೆಯಿಂದ ನಡೆದುಕೊಂಡಿದ್ದಾರೆ. ತಾವು ಅಭಿನಯಿಸಿದ್ದ ಸಿನಿಮಾ ಬಾಕ್ಸ್ ಅಫೀಸ್ ನಲ್ಲಿ ಸೋಲು ಕಂಡ ಪರಿಣಾಮ, ನಿರ್ಮಾಪಕರಿಗೆ ನೆರವಾಗಿದ್ದಾರೆ.

ಈ ಚಿತ್ರದ ನಟನೆಗಾಗಿ ಬರಬೇಕಿದ್ದ ಅರ್ಧ ಸಂಭಾವನೆಯನ್ನ ನಿರ್ಮಾಪಕರಿಗೆ ಬಿಟ್ಟು ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಸದ್ಯ ದಕ್ಷಿಣದಲ್ಲಿ ಬಹುಬೇಡಿಕೆಯ ನಟಿಯಾಗಿರುವ ಸಾಯಿಪಲ್ಲವಿ ಇತರೆ ಹೀರೋಯಿನ್ ಗಳಿಗೆ ಮಾದರಿಯಾಗಿದ್ದಾರೆ. ಮುಂದೆ ಓದಿ....

ತೆಲುಗು ಸಿನಿಮಾ ಫ್ಲಾಫ್

ತೆಲುಗು ಸಿನಿಮಾ ಫ್ಲಾಫ್

ಶಾರ್ವಾನಂದ್ ಮತ್ತು ಸಾಯಿ ಪಲ್ಲವಿ ಅಭಿನಯಿಸಿದ್ದ 'ಪಡಿ ಪಡಿ ಲೇಚೇ ಮನಸ್ಸು' ಸಿನಿಮಾ ಡಿಸೆಂಬರ್ 21 ರಂದು ಬಿಡುಗಡೆಯಾಗಿಯತ್ತು. ಬಾಕ್ಸ್ ಆಫೀಸ್ ನಲ್ಲಿ ಈ ಸಿನಿಮಾ ಅಷ್ಟಾಗಿ ಪರಿಣಾಮ ಬೀರಿಲ್ಲ. ನಿರ್ಮಾಪಕರಿಗೆ ನಷ್ಟವಾಗಯಿತು. ಸಿನಿಮಾ ಫ್ಲಾಫ್ ಆಯಿತು.

ಬಾಕಿ ಹಣ ಬೇಡವೆಂದ ನಟಿ

ಬಾಕಿ ಹಣ ಬೇಡವೆಂದ ನಟಿ

ಈ ಚಿತ್ರದಲ್ಲಿ ಅಭಿನಯಿಸುವುದಕ್ಕಾಗಿ ನಟಿ ಸಾಯಿ ಪಲ್ಲವಿ ಅವರಿಗೆ ಅರ್ಧ ಸಂಭಾವನೆಯನ್ನ ಅಡ್ವಾನ್ಸ್ ಅಂತ ನೀಡಿದ್ದರು. ಸಿನಿಮಾ ರಿಲೀಸ್ ಬಳಿಕ ಉಳಿದ ಹಣವನ್ನ ಕೊಡುವುದಾಗಿ ನಿರ್ಮಾಪಕ ಹೇಳಿದ್ದರು. ಸಿನಿಮಾ ರಿಲೀಸ್ ಆಗಿ ಫ್ಲಾಫ್ ಆಯಿತು. ಹಾಗಿದ್ದರೂ, ಸಾಯಿ ಪಲ್ಲವಿಗೆ ಕೊಡಬೇಕಾಗಿದ್ದ ಬಾಕಿ ಸಂಭಾವನೆಯನ್ನ ಕೊಡಲು ನಿರ್ಮಾಪಕರು ಮುಂದಾದರು. ಆದ್ರೆ, ಈ ಹಣವನ್ನ ನಟಿ ತೆಗೆದುಕೊಂಡಿಲ್ಲ.

40 ಲಕ್ಷ ಕೊಡಬೇಕಿತ್ತಂತೆ

40 ಲಕ್ಷ ಕೊಡಬೇಕಿತ್ತಂತೆ

ಸದ್ಯದ ಮಾಹಿತಿ ಪ್ರಕಾರ, ಸಾಯಿ ಪಲ್ಲವಿಗೆ ಅವರಿಗೆ ಚಿತ್ರದ ನಿರ್ಮಾಪಕ 40 ಲಕ್ಷ ಸಂಭಾವನೆ ಕೊಡಬೇಕಿತ್ತು. ಸಾಯಿ ಪಲ್ಲವಿ ಅವರ ಪೋಷಕರ ಬಳಿ ದುಡ್ಡು ಕೊಡಲು ನಿರ್ಮಾಪಕರು ಫೋನ್ ಮಾಡಿದಾಗ, ನಮ್ಮ ಮಗಳು ಹಣವನ್ನ ಪಡೆಯಬೇಡಿ ಎಂದು ಹೇಳಿದ್ದಾಳೆ. ಆಕೆಯ ಮಾತಿಗೆ ಗೌರವಿಸುವುದು ನಮ್ಮ ಕರ್ತವ್ಯ. ಸಂಭಾವನೆ ಹಣ ನೀವು ಉಳಿಸಿಕೊಳ್ಳಿ'' ಎಂದು ತಿಳಿಸಿದರಂತೆ.

ಬೇಡಿಕೆಯ ನಟಿ ಸಾಯಿ ಪಲ್ಲವಿ

ಬೇಡಿಕೆಯ ನಟಿ ಸಾಯಿ ಪಲ್ಲವಿ

ಮಲಯಾಳಂನ ಪ್ರೇಮಂ ಚಿತ್ರದ ಮೂಲಕ ಖ್ಯಾತಿ ಗಳಿಸಿಕೊಂಡ ಸಾಯಿ ಪಲ್ಲವಿ, ಫಿದಾ, ಮಾರಿ 2 ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ, ಸೂರ್ಯ ನಾಯಕನಾಗಿರುವ ಚಿತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ.

More from Filmibeat

English summary
Sai Pallavi has refused to accept the remaining remuneration for her work in the Telugu movie Padi Padi Leche Manasu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X