ರಾಣ ದಗ್ಗುಬಾಟಿ ಸಿನಿಮಾದಿಂದ ಹೊರ ನಡೆಯುವುದಾಗಿ ಬೆದರಿಕೆ ಹಾಕಿದ್ರಾ ಸಾಯಿ ಪಲ್ಲವಿ?
Recommended Video
ಬಹುಭಾಷ ನಟಿ ಸಾಯಿ ಪಲ್ಲವಿ ಇತ್ತಿಚಿಗೆ ಸಿನಿಮಾ ವಿಚಾರಗಳಿಗಿಂತ ಹೆಚ್ಚಾಗಿ ವಿವಾದದ ಮೂಲಕವೆ ಸುದ್ದಿಯಲ್ಲಿದ್ದಾರೆ. ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಬ್ಯುಸಿ ಇರುವ ಸಾಯಿ ಪಲ್ಲವಿ ಬಗ್ಗೆ ಮತ್ತೊಂದು ವಿವಾದ ಕೇಳಿ ಬರುತ್ತಿದೆ. ಇತ್ತೀಚಿಗಷ್ಟೆ ತಮಿಳು ನಿರ್ದೇಶಕ ವಿಜಯ್ ಜೊತೆ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು.
ಮದುವೆ ವಿವಾದದಿಂದ ಹೊರಬರುತ್ತಿದಂತೆ 'ಪ್ರೇಮಂ' ಸುಂದರಿ ಈಗ ಮತ್ತೊಂದು ವಿವಾದದ ಮೂಲಕ ಸುದ್ದಿಯಾಗುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ 'ಫಿದಾ' ಬ್ಯೂಟಿ ವಿರುದ್ಧ ರಾಣ ದಗ್ಗುಬಾಟಿ ಸಿನಿಮಾದಿಂದ ಹೊರನಡೆಯುವುದಾಗಿ ಚಿತ್ರತಂಡಕ್ಕೆ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಟಾಲಿವುಡ್ ಅಂಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
ರಾಣ ದಗ್ಗುಬಾಟಿ ನಾಯಕನಾಗಿರುವ 'ವಿರಾಟ ಪರ್ವಂ' ಚಿತ್ರದಲ್ಲಿ ಸಾಯಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದ್ರೀಗ ಚಿತ್ರದಿಂದ ಔಟ್ ಆಗಿದ್ದಾರಂತೆ. ಕಾರಣ 'ವಿರಾಟ ಪರ್ವಂ' ಚಿತ್ರಕ್ಕೆ ಕೆಲವು ತಿಂಗಳ ಹಿಂದೆಯೆ ಸಾಯಿ ಪಲ್ಲವಿ ಒಪ್ಪಿಕೊಂಡಿದ್ದರಂತೆ. ಆದ್ರೀಗ ಬೇರೆ ಸಿನಿಮಾದಲ್ಲಿ ಬ್ಯುಸಿಯಾದ ಕಾರಣ ಡೇಟ್ ಹೊಂದಾಣಿಯಾಗದೆ ಒದ್ದಾಡುತ್ತಿದ್ದಾರಂತೆ. ಚಿತ್ರತಂಡದ ಬಳಿ ಡೇಟ್ ಕೇಳಿದ್ರೆ ಕೊಡಲು ನಿರಾಕರಿಸಿದ್ದಾರಂತೆ.

ಚಿತ್ರತಂಡ ಶೂಟಿಂಗ್ ಪ್ಲಾನ್ ರಿಪೋರ್ಟ್ ಕೊಡದೆ ಹೋದರೆ ಚಿತ್ರದಿಂದ ಹೊರನಡೆಯುವುದಾಗಿ ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರಂತೆ ಸಾಯಿ. ಪಲ್ಲವಿ ಮಾತು ಕೇಳಿ ಶಾಕ್ ಆದ 'ವಿರಾಟ ಪರ್ವಂ' ಚಿತ್ರತಂಡ ಸಾಯಿ ಪಲ್ಲವಿ ಅವರನ್ನು ಚಿತ್ರದಿಂದ ಕೈ ಬಿಡುವ ನಿರ್ಧಾರ ಮಾಡಿದೆಯಂತೆ. 'ವಿರಾಟ ಪರ್ವಂ' 1992ರ ಕಾಲಘಟ್ಟದ ಐತಿಹಾಸಿಕ ಸಿನಿಮಾ. ಚಿತ್ರದಲ್ಲಿ ನಟಿ ಪ್ರಿಯಾ ಮಣಿ ಮತ್ತು ಬಾಲಿವುಡ್ ನಟಿ ತಬು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











