ಕೆಜಿಎಫ್ ಟ್ರೈಲರ್ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ಬಾಲಿವುಡ್ ನಟಿ.!

ಕನ್ನಡದ ರಾಜಾಹುಲಿ ಯಶ್ ಅಭಿನಯದ 'ಕೆಜಿಎಫ್' ಸಿನಿಮಾದ ಟ್ರೈಲರ್ ಐದು ಭಾಷೆಯಲ್ಲಿ ಬಿಡುಗಡೆಯಾಗಿದ್ದು, ಒಟ್ಟಾರೆ ವೀವ್ಸ್ 20 ಮಿಲಿಯನ್ ದಾಟಿದೆ. ಕನ್ನಡದ ಚಿತ್ರವೊಂದು ಈ ಮಟ್ಟಿಗೆ ದಾಖಲೆ ಮಾಡಿರುವುದು ಬಹುಶಃ ಇದೇ ಮೊದಲು.

ಹಿಂದಿ ಭಾಷೆಯ ಕೆಜಿಎಫ್ ಟ್ರೈಲರ್ ಅತಿ ಹೆಚ್ಚು ವೀವ್ಸ್ ಪಡೆದುಕೊಂಡಿದ್ರೆ, ತೆಲುಗು ಭಾಷೆಯ ಕೆಜಿಎಫ್ ಟ್ರೈಲರ್ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ನಂಬರ್ 1 ಸ್ಥಾನದಲ್ಲಿತ್ತು. ಸತತ ಮೂರು ದಿನಗಳ ಕಾಲ ಸೌತ್ ಸ್ಟಾರ್ ನಟರನ್ನ, ಬಾಲಿವುಡ್ ನಟರನ್ನ ಹಿಂದಿಕ್ಕಿ ಅಗ್ರಸ್ಥಾನದಲ್ಲಿತ್ತು.

ಇದೀಗ, ಕೆಜಿಎಫ್ ಟ್ರೈಲರ್ ನ್ನ ಬಾಲಿವುಡ್ ನಟಿಯೊಬ್ಬರ ಹಿಂದಿಕ್ಕಿದ್ದಾರೆ. ಹಿಂದಿ ಇಂಡಸ್ಟ್ರಿಯ ತಂದೆ ಮತ್ತು ಮಗಳ ಪ್ರೋಮೋವೊಂದು ಯಶ್ ಟ್ರೈಲರ್ ದಾಟಿ ಮುಂದೆ ಸಾಗಿದೆ. ಅಷ್ಟಕ್ಕೂ, ಯಾರು ಆ ನಟಿ.? ಮುಂದೆ ಓದಿ....

ಯಶ್ ಟ್ರೈಲರ್ ಹಿಂದಿಕ್ಕಿದ ಸಾರಾ

ಯಶ್ ಟ್ರೈಲರ್ ಹಿಂದಿಕ್ಕಿದ ಸಾರಾ

'ಕೆಜಿಎಫ್' ತೆಲುಗು ಭಾಷೆಯ ಟ್ರೈಲರ್ ನ್ನ ಮೂರು ದಿನಗಳ ಕಾಲ ಯಾವ ನಟರ ಟ್ರೈಲರ್, ಟೀಸರ್, ಹಾಡುಗಳ ವಿಡಿಯೋ ಮುಟ್ಟಿರಲಿಲ್ಲ. ರವಿತೇಜ ಅವರ 'ಅಮರ್ ಅಕ್ಬರ್ ಆಂಟೋನಿ' ಹಾಗೂ ವಿಜಯ್ ದೇವರಕೊಂಡ ಅವರ 'ಟ್ಯಾಕ್ಸಿವಾಲ' ಟ್ರೈಲರ್ ಎರಡನೇ ಸ್ಥಾನ ಮತ್ತು ಮೂರನೇ ಸ್ಥಾನಕ್ಕೆ ಸೀಮಿತವಾಗಿತ್ತು. ಆದ್ರೀಗ, ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರ ಪ್ರೋಮೋ ಹಿಂದಿಕ್ಕಿದೆ.

ಸೈಫ್ ಮತ್ತು ಸಾರಾ ಪ್ರೋಮೋ

ಸೈಫ್ ಮತ್ತು ಸಾರಾ ಪ್ರೋಮೋ

ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಮತ್ತು ಅವರ ಮಗಳು ಸಾರಾ ಅಲಿ ಖಾನ್ ಭಾಗವಹಿಸಿದ್ದಾರೆ. ಈ ಶೋನ ಪ್ರೋಮೋ ಒಂದು ದಿನ ಮುಂಚೆ ಬಿಡುಗಡೆಯಾಗಿದ್ದು, ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಮೊದಲ ಸ್ಥಾನಕ್ಕೇರಿದೆ.

ಟಾಪ್-5 ನಲ್ಲಿ ಯಾವ ವಿಡಿಯೋಗಳಿವೆ

ಟಾಪ್-5 ನಲ್ಲಿ ಯಾವ ವಿಡಿಯೋಗಳಿವೆ

ಸದ್ಯ ಯೂಟ್ಯೂಬ್ ಟ್ರೆಂಡಿಂಗ್ ನ ಮೊದಲ ಸ್ಥಾನದಲ್ಲಿ ಸಾರಾ ಅಲಿಖಾನ್ ಅವರ 'ಕಾಫಿ ವಿತ್ ಕರಣ್', ಎರಡನೇ ಸ್ಥಾನದಲ್ಲಿ ತೆಲುಗು 'ಕೆಜಿಎಫ್' ಟ್ರೈಲರ್, ಮೂರನೇ ಸ್ಥಾನದಲ್ಲಿ ವಿಜಯ್ ದೇವರಕೊಂಡ 'ಟ್ಯಾಕ್ಸಿವಾಲ' ಟ್ರೈಲರ್, ನಾಲ್ಕನೇ ಸ್ಥಾನದಲ್ಲಿ ಯಶ್ ಅವರ ಸಂದರ್ಶನ ಹಾಗೂ ಐದನೇ ಸ್ಥಾನದಲ್ಲಿ ರಾಜಮೌಳಿ ಅವರ 'ಆರ್ಆರ್ಆರ್' ಸಿನಿಮಾದ ಮುಹೂರ್ತ ಕಾರ್ಯಕ್ರಮದ ವಿಡಿಯೋ ಇದೆ.

ಐದು ಟ್ರೈಲರ್ ವೀಕ್ಷಣೆ ಎಷ್ಟಿದೆ.?

ಐದು ಟ್ರೈಲರ್ ವೀಕ್ಷಣೆ ಎಷ್ಟಿದೆ.?

ನವೆಂಬರ್ 13, ಮಧ್ಯಾಹ್ನ 12.55ಕ್ಕೆ ಸರಿಯಾಗಿ ಕೆಜಿಎಫ್ ಟ್ರೈಲರ್ ಯಾವ ಭಾಷೆಯಲ್ಲಿ ಎಷ್ಟು ವೀವ್ಸ್ ಇದೆ ಎಂದು ಮುಂದೆ ನೀಡಲಾಗಿದೆ. ಕನ್ನಡದ ಟ್ರೈಲರ್ 77 ಲಕ್ಷ (7,797,080), ತೆಲುಗು ಟ್ರೈಲರ್ 48 ಲಕ್ಷ (4,867,424), ತಮಿಳು ಟ್ರೈಲರ್ 13 ಲಕ್ಷ (1,313,043), ಹಿಂದಿ ಟ್ರೈಲರ್ 1.1 ಕೋಟಿ (11,123,508), ಮಲಯಾಳಂ ಟ್ರೈಲರ್ 6 ಲಕ್ಷ (693,170) ವೀಕ್ಷಕರ ಸಂಖ್ಯೆಯನ್ನ ಹೊಂದಿದೆ.

More from Filmibeat

English summary
Koffee with karan: saif ali khan and sara ali khan promo beats kgf telugu trailer in youtube trending.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X