For Quick Alerts
  ALLOW NOTIFICATIONS  
  For Daily Alerts

  'ಕಲಿಗಾಲ'ದಲ್ಲಿ ಸಾಯಿಕುಮಾರ್ ಕೈಗೆ ಮತ್ತೆ ಲಾಠಿ

  By Rajendra
  |
  ಮಹಿಳಾ ಸಂವೇದನೆಯ ಚಿತ್ರಗಳಿಗೆ ಹೆಸರಾಗಿರುವ ಓಂ ಸಾಯಿ ಪ್ರಕಾಶ್ ಅವರು ಈಗ ಮತ್ತೊಂದು ಕಣ್ಣೀರ ಕಥೆಯನ್ನು ಕೈಗೆತ್ತಿಕೊಂಡಿದ್ದಾರೆ. ಇದು ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 97ನೇ ಚಿತ್ರ. ಹೆಸರು 'ಕಲಿಗಾಲ'.

  ಅಪರಾಧಕ್ಕೆ ತಕ್ಕ ಶಿಕ್ಷೆ ಬಗ್ಗೆ ಯೋಚನೆ ಹರಿಸಿರುವ ಚಿತ್ರವಿದು. ದೆಹಲಿಯ ನಿರ್ಭಯಾ ಪ್ರಕರಣದ ನಂತರ ಹೆಚ್ಚು ಪ್ರಸ್ತುತವಾದ ವಿಚಾರವನ್ನು ಕೈಗೆತ್ತಿಕೊಂಡಿದ್ದಾರೆ. ತಪ್ಪು ಸಂಭವಿಸಿದರೆ ಅದಕ್ಕೆ ಶಿಕ್ಷೆ ಇಲ್ಲದೆ ಕಾನೂನಿನ ಸಹಾಯದಿಂದ ರಾಜಾರೋಷವಾಗಿ ಇರುವುದು ತಿಳಿದಿರುವ ವಿಚಾರ. ಅದನ್ನೇ ಚಿತ್ರದಲ್ಲೂ ನಿರ್ದೇಶಕರೂ ಅಳವಡಿಸಿಕೊಳ್ಳುತ್ತಿದ್ದಾರೆ.

  ಹಾಸ್ಯ ಚಿತ್ರಗಳು, ಮನೆಮಂದಿಯೆಲ್ಲಾ ಕುಳಿತು ನೋಡುವ ಚಿತ್ರಗಳಿಗೆ ಪ್ರಸಿದ್ಧರಾದ ಸಾಯಿ ಪ್ರಕಾಶ್ ಅವರು ಹಿರಿಯ ಹಾಗೂ ಕಿರಿಯರ ಸಂಗಮದಿಂದ ಈ ಚಿತ್ರವನ್ನು ಈಗಾಗಲೇ ದ್ವಿತೀಯ ಹಂತಕ್ಕೆ ಮುನ್ನಡೆಸಿದ್ದಾರೆ.

  ಸುಮನ್ ರಾಯ್ ಪ್ರೊಡಕ್ಷನ್ ರಾಯಣ್ಣ ಅವರು ಈ ಚಿತ್ರದ ನಿರ್ಮಾಪಕರು. ಹೆಣ್ಣು ಮಕ್ಕಳ ರಕ್ಷಣೆ ಬಗ್ಗೆ ನಿರ್ದೇಶಕರು ಇಟ್ಟಿರುವ ಕಾಳಜಿ ಇಂದಿನ ಸಮಾಜದಲ್ಲಿ ಆಗಬೇಕು ಎನ್ನುತ್ತಾರೆ. ಈ ಚಿತ್ರದಲ್ಲಿ ಬರುವ ಸಂದೇಶ ಇಡೀ ಭಾರತ ದೇಶಕ್ಕೆ ಅನ್ವಯ ಎಂದು ಅವರು ಹೇಳುತ್ತಾರೆ.

  ಈ ಚಿತ್ರದಲ್ಲಿ ಸಾಯಿಕುಮಾರ್ ಮತ್ತೆ ಲಾಠಿ ಕೈಗೆತ್ತಿಕೊಳ್ಳುತ್ತಿದ್ದಾರೆ. ವಕೀಲರಾಗಿ ಶ್ರೀನಿವಾಸಮೂರ್ತಿ, ಹೆಡ್ ಕಾನ್ಸ್ ಟೇಬಲ್ ಆಗಿ ರಮೇಶ್ ಭಟ್, ಎಂ ಎನ್ ಲಕ್ಷ್ಮೀದೇವಿ, ಅಕ್ಕಿ ಚನ್ನಬಸಪ್ಪ, ಪದ್ಮಾ ವಾಸಂತಿ, ಕ್ಷಮಾ, ರೂಪಿಕಾ, ಪಾವನಿ, ಆನಂದ್, ದರ್ಶನ್, ಸಂದೀಪ್ ಹಾಗೂ ಇನ್ನಿತರರು ಇದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Om Sai Prakash's 97th Kannada film Kaligaala second schedule shooting going on brisk way. Dialogue King Saikumar is playing tough cop in this film while Srinivasamurthy is lawyer, Ramesh Bhat is head constable.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X