ಫಸ್ಟ್ ಲುಕ್ : ಸೈನಾ ನೆಹ್ವಾಲ್ ಆಗಿ ಬದಲಾದ ಶ್ರದ್ಧಾ
ಈ ಫೋಟೋ ಒಮ್ಮೆ ನೋಡಿ.. ಈ ಹುಡುಗಿ ಥೇಟ್ ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ರೀತಿಯೇ ಇದ್ದಾಳೆ ಅಲ್ವಾ. ಈ ರೀತಿ ಸೈನಾ ಆಗಿ ಬದಲಾಗಿರುವುದು ನಟಿ ಶ್ರದ್ಧಾ ಕಪೂರ್.
ಬಾಲಿವುಡ್ ನಲ್ಲಿ ಈಗ ಮತ್ತೊಂದು ಬಯೋಪಿಕ್ ಬರುತ್ತಿದೆ. ಸೈನಾ ನೆಹ್ವಾಲ್ ಜೀವನಾಧಾರಿತ ಸಿನಿಮಾ ಇದಾಗಿದ್ದು, ಈ ಚಿತ್ರದಲ್ಲಿ ಶ್ರದ್ಧಾ ಕಪೂರ್ ನಟಿಸುತ್ತಿದ್ದಾರೆ. ಸಿನಿಮಾದ ಫಸ್ಟ್ ಲುಕ್ ಇದೀಗ ಬಿಡುಗಡೆಯಾಗಿದ್ದು, ಮೊದಲ ನೋಟಕ್ಕೆ ಇಷ್ಟ ಆಗುತ್ತಿದೆ.

ಸೈನಾ ನೆಹ್ವಾಲ್ ರೀತಿಯೇ ಇಲ್ಲಿ ಶ್ರದ್ಧಾ ಕಾಣಿಸಿಕೊಂಡಿದ್ದಾರೆ. 'ಸೈನಾ' ಚಿತ್ರದ ಫಸ್ಟ್ ಲುಕ್ ಅನ್ನು ಶ್ರದ್ಧಾ ತಮ್ಮ ಇನ್ಟಾಗ್ರಾಮ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಚಿತ್ರದ ಫಸ್ಟ್ ಲುಕ್ ದೊಡ್ಡ ಮಟ್ಟದ ಪ್ರತಿಕ್ರಿಯೆ ಪಡೆದುಕೊಂಡಿದೆ.

ಸೈನಾ ಪಾತ್ರಕ್ಕಾಗಿ ಸಾಕಷ್ಟು ಶ್ರಮ ಪಟ್ಟಿರುವ ಅವರು ಅದೆಷ್ಟೋ ದಿನಗಳು ಬ್ಯಾಡ್ಮಿಂಟನ್ ಕಲಿತಿದ್ದಾರೆ. ಸೈನಾ ಲುಕ್ ಬರಲು ಸಾಕಷ್ಟು ಕಸರತ್ತು ಮಾಡಿದ್ದಾರೆ. ಸಪ್ಟೆಂಬರ್ 22 ಈ ಸಿನಿಮಾ ಶುರು ಆಗಿದೆ. ಅಮೊಲ್ ಗುಪ್ತ್ (Amol Gupte) ಈ ಚಿತ್ರದ ನಿರ್ದೇಶನ ಮಾಡಿದ್ದಾರೆ.


Click it and Unblock the Notifications










