»   » ಕಾರ್ಗಿಲ್‌ಗೆ ಮುನ್ನ ಕೊಡಗಿಗೆ ಹೊರಟ ‘ಸೈನಿಕ’

ಕಾರ್ಗಿಲ್‌ಗೆ ಮುನ್ನ ಕೊಡಗಿಗೆ ಹೊರಟ ‘ಸೈನಿಕ’

Posted By: Staff
Subscribe to Filmibeat Kannada

ಮುಂಬಯಿಯಿಂದ ಕನ್ನಡ ಚಿತ್ರರಂಗಕ್ಕೆ ಬಂದ ಆಮದು ನಟಿ ಸಾಕ್ಷಿ ಶಿವಾನಂದ್‌ ಅವರ ಅವಳಿ -- -ಜವಳಿ ಕಥೆಯಿಂದಲೇ ಭಾರೀ ಪ್ರಚಾರ ಪಡೆದ ಸೈನಿಕ - ಕಾರ್ಗಿಲ್‌ಗೆ ಹೊರಡುವ ಮುನ್ನ ಹಲವು ವೀರ ಯೋಧರನ್ನು ರಾಷ್ಟ್ರಕ್ಕೆ ನೀಡಿದ ಕರ್ನಾಟಕದ ಹೆಮ್ಮೆಯ ಕೊಡಗಿಗೆ ಹೋಗಿದ್ದಾನೆ.

ಚನ್ನಪಟ್ಟಣದ ಶಾಸಕರೂ ಆದ ಚಿತ್ರ ನಟ ಸಿ.ಪಿ. ಯೋಗೀಶ್ವರ್‌ ತಮ್ಮ ತಂಡದೊಂದಿಗೆ 'ಸೈನಿಕ" ಚಿತ್ರದ ಎರಡನೇ ಹಂತದ ಚಿತ್ರೀಕರಣಕ್ಕಾಗಿ ಕೊಡಗಿಗೆ ತೆರಳಿದ್ದಾರೆ. ಸುಮಾರು 15 ದಿನಗಳ ಕಾಲ ಚಿತ್ರದ ಚಿತ್ರೀಕರಣ ಕೊಡಗಿನ ಸಮೃದ್ಧ ನಿಸರ್ಗದ ಮಡಿಲಲ್ಲಿ ನಡೆಯಲಿದೆ. ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ಮುಗಿದರೆ, ಚಿತ್ರೀಕರಣ ಶೇಕಡಾ 60ರಷ್ಟು ಮುಗಿದಂತೆಯೇ.

ಮೂರನೇ ಹಾಗೂ ಅಂತಿಮ ಹಂತದ ಚಿತ್ರೀಕರಣ ಕಾರ್ಗಿಲ್‌ನಲ್ಲಿ ನಡೆಯಲಿದೆ. ಚಿತ್ರದ ಕ್ಲೈಮ್ಯಾಕ್ಸ್‌ ಕೂಡ ಅಲ್ಲೆ ನಡೆಯತ್ತಂತೆ. ಅದು ಪೂರ್ಣವಾದರೆ, ಕಾರ್ಗಿಲ್‌ ವಿಜಯ. ಆನಂತರ ಮಾತಿನ ಮರು ಮುದ್ರಣ ಇತ್ಯಾದಿ. ಚಿತ್ರವನ್ನು ಜೂನ್‌ ಅಂತ್ಯಕ್ಕೆ ಬಿಡುಗಡೆ ಮಾಡುವ ಇರಾದೆ ನಿರ್ಮಾಪಕರದು. ನಾಯಕ ನಟ ಯೋಗಿಶ್ವರ್‌ ಅವರೊಂದಿಗೆ, ಸಾಕ್ಷಿ ಶಿವಾನಂದ್‌, ಸೋನಾಲಿ ಹಾಗೂ ವಸುಮಾಲಾ ನಾಯಕಿಯಾಗಿ ನಟಿಸುತ್ತಿದ್ದಾರೆ.

English summary
kannada film sainika shooting in full swing
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada