'ಸೈರಾ' ಸಿನಿಮಾದಲ್ಲಿ ಸುದೀಪ್ ಹೆಸರಿನ ಜೊತೆಯಿರುವ ಬಿರುದು ಏನು?
ಸೈರಾ ನರಸಿಂಹ ರೆಡ್ಡಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾ. ಉತ್ತರ ಮತ್ತು ದಕ್ಷಿಣ ಭಾರತದ ದೊಡ್ಡ ದೊಡ್ಡ ಕಲಾವಿದರು ಬಣ್ಣ ಹಚ್ಚಿರುವ ಬಿಗ್ ಬಜೆಟ್ ನ ತೆಲುಗು ಸಿನಿಮಾ.
ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ರೆ, ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್, ಸ್ಯಾಂಡಲ್ ವುಡ ಮಾಣಿಕ್ಯ ಸುದೀಪ್, ಕಾಲಿವುಡ್ ನಟ ವಿಜಯ್ ಸೇತುಪತಿ, ಖ್ಯಾತ ಖಳ ನಟ ಜಗಪತಿ ಬಾಬು ಸೇರಿದಂತೆ ಸಾಕಷ್ಟು ದೊಡ್ಡ ಕಲಾವಿದರು ಬಣ್ಣ ಹಚ್ಚಿದ್ದಾರೆ.
ಭಾರಿ ಕುತೂಹಲ ಮೂಡಿಸಿರುವ ಸೈರಾ ನರಸಿಂಹ ರೆಡ್ಡಿ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ. ಅದ್ದೂರಿಯಾಗಿರುವ ಮೇಕಿಂಗ್ ನೋಡುತ್ತಿದ್ದರೆ ಚಿತ್ರದ ಮೇಲಿನ ನಿರೀಕ್ಷೆ, ಕುತೂಹಲ ಮತ್ತಷ್ಟು ಹೆಚ್ಚಾಗುತ್ತೆ. ಸಾಕಷ್ಟು ಅಂಶಗಳಿಂದ ಗಮನಸೆಳೆಯುತ್ತಿರುವ ಸೈರಾ ಚಿತ್ರದಲ್ಲಿ ಕಿಚ್ಚ ಸುದೀಪ್ ಗೆ ಮತ್ತೊಂದು ಬಿರುದನ್ನು ನೀಡಿದೆ ಚಿತ್ರತಂಡ.

ಸುದೀಪ್ ಹೆಸರಿನ ಜೊತೆಗಿದೆ ಸೂಪರ್ ಸ್ಟಾರ್
ಈಗಾಗಲೆ ಸುದೀಪ್ ಗೆ ಸಾಕಷ್ಟು ಬಿರುದುಗಳು ಇವೆ. ಈಗ ಮತ್ತೊಂದು ಬಿರುದನ್ನು ಸೈರಾ ಚಿತ್ರತಂಡ ನೀಡಿದೆ. ಈ ಚಿತ್ರದಲ್ಲಿ ಸುದೀಪ್ ಹೆಸರಿನ ಮುಂದೆ "ಕನ್ನಡ ಸೂಪರ್ ಸ್ಟಾರ್ ಕಿಚ್ಚ ಸುದೀಪ್" ಎಂದು ಸೇರಿಸಲಾಗಿದೆ. ಈ ಮೊದಲು ಕಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಸಿನಿಮಾ ಮಾಡಿದಾಗ ಕಿಚ್ಚ ಸುದೀಪ್ ಎಂದು ಮಾತ್ರ ಹೆಸರು ಹಾಕುತ್ತಿದ್ದರು. ಆದ್ರೀಗ ಸೈರಾ ಚಿತ್ರದ ಮೇಕಿಂಗ್ ನ ಟೈಟಲ್ ನಲ್ಲಿ "ಕನ್ನಡ ಸೂಪರ್ ಸ್ಟಾರ್ ಕಿಚ್ಚ ಸುದೀಪ್" ಎಂದು ಬಿರುದು ನೀಡಿರುವುದು ಕಿಚ್ಚನನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡುಹೋಗಿದೆ.

ಇಂಡಿಯಾದ ಬಿಗ್ಗೆಸ್ಟ್ ಸೂಪರ್ ಸ್ಟಾರ್
ಇಂಡಿಯಾದ ಬಿಗ್ಗೆಸ್ಟ್ ಸೂಪರ್ ಸ್ಟಾರ್ ಮತ್ಯಾರು ಅಲ್ಲ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್. ಹೌದು, ಚಿತ್ರದಲ್ಲಿ ಅಮಿತಾಭ್ ಗೆ "ಇಂಡಿಯಾದ ಬಿಗ್ಗೆಸ್ಟ್ ಸೂಪರ್ ಸ್ಟಾರ್" ಎನ್ನುವ ಹೆಸರನ್ನು ನೀಡಿದೆ ಚಿತ್ರತಂಡ. ಅಂದ್ಹಾಗೆ ಸೈರಾ ಚಿತ್ರದಲ್ಲಿ ಖ್ಯಾತ ಕಲಾವಿದರ ಹೆಸರಿನ ಮುಂದೆ ಸೂಪರ್ ಸ್ಟಾರ್ ಎನ್ನುವ ಬಿರುದನ್ನ ನೀಡಿ ಕಲಾವಿದರ ಗೌರವನ್ನು ಮತ್ತಷ್ಟು ಹೆಚ್ಚಿಸಿದೆ ಚಿತ್ರತಂಡ.

ಲೇಡಿ ಸೂಪರ್ ಸ್ಟಾರ್
ಲೇಡಿ ಸೂಪರ್ ಸ್ಟಾರ್ ಅಂದಕ್ಷಣ ಮೊದಲು ನೆನಪಾಗುವುದು ಬಾಲಿವುಡ್ ನ ಎವರ್ ಗ್ರೀನ್ ನಟಿ ಶ್ರೀದೇವಿ. ಹಾಗೆ ವಿಜಯಶಾಂತಿ, ಮಾಲಾಶ್ರೀಗೂ ಲೇಡಿ ಸೂಪರ್ ಸ್ಟಾರ್ ಎಂದು ಕರೆಯುತ್ತಾರೆ. ಅದು ಬಿಟ್ಟರೆ ಲೇಡಿ ಸೂಪರ್ ಸ್ಟಾರ್ ಅಂದ್ರೆ ನಯನತಾರಾ ನೆನಪಾಗುತ್ತಾರೆ. ಸೈರಾ ಚಿತ್ರದ ಟೈಟಲ್ ಕಾರ್ಡ್ ನಲ್ಲಿ ನಯನತಾರಾ ಹೆಸರಿನ ಜೊತೆಗೆ ಲೇಡಿ ಸೂಪರ್ ಸ್ಟಾರ್ ಹೆಸರನ್ನು ಸೇರಿಸಿದೆ ಚಿತ್ರತಂಡ.

ಅಕ್ಟೋಬರ್ ನಲ್ಲಿ ಸಿನಿಮಾ ರಿಲೀಸ್ ಸಾಧ್ಯತೆ
ಸೈರಾ ನರಸಿಂಹ ರೆಡ್ಡಿ ಅಕ್ಟೋಬರ್ ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಚಿತ್ರದಲ್ಲಿ ಸುದೀಪ್ ಅವುಕು ಪ್ರಾಂತ್ಯದ ರಾಜನಾಗಿ ಕಾಣಿಸಿಕೊಂಡಿದ್ದಾರೆ. ವಿಜಯ್ ಸೇತುಪತಿ ರಾಜ ಪಾಂಡಿ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನು ಜಗಪತಿ ಬಾಬು ವೀರ ರೆಡ್ಡಿ ಪಾತ್ರಕ್ಕೆ ಬಣ್ಣ ಹಚ್ಚಿದ್ರೆ, ನಯನತಾರ ಮತ್ತು ತಮನ್ನಾ ಸಿದ್ದಮ್ಮ ಮತ್ತು ಲಕ್ಷ್ಮಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











