'ಅಡ್ಜೆಸ್ಟ್ ಮಾಡ್ಕೊಬೇಕು' ಎಂದ ಸಹ ನಿರ್ದೇಶಕನ ಕರ್ಮಕಾಂಡ ಬಯಲಿಗೆಳೆದ ನಟಿ
ಕಾಸ್ಟಿಂಗ್ ಕೌಚ್ ಅನೇಕ ವರ್ಷಗಳಿಂದ ಚಿತ್ರರಂಗದಲ್ಲಿ ನಟಿಮಣಿಯರು ಎದುರಿಸುತ್ತಿರುವ ದೊಡ್ಡ ಸಮಸ್ಯೆ. ಈ ಸಮಸ್ಯೆ ಈಗ ಮಲಯಾಳಂ ನಟಿ ಸಜಿತಾ ಮಡತಿಲ್ ಅವರನ್ನು ಕಾಡುತ್ತಿದೆ. ಅವಕಾಶ ನೀಡುವುದಾಗಿ ಹೇಳಿ ಮಂಚಕ್ಕೆ ಕರೆದ ಸಹ ನಿರ್ದೇಶಕನೊಬ್ಬನ ಕಾರ್ಮಕಾಂಡವನ್ನು ಸಜಿತಾ ಬಯಲಿಗೆಳೆದಿದ್ದಾರೆ.
ಸಜಿತಾ ತಮಿಳು ಚಿತ್ರರಂಗದಲ್ಲಿ ಬೋಲ್ಡ್ ಪಾತ್ರದ ಮೂಲಕವೇ ಖ್ಯಾತಿ ಗಳಿಸಿದ ನಟಿ. ಈ ನಟಿಗೆ ಇತ್ತೀಚಿಗೊಬ್ಬ ಸಹ ನಿರ್ದೇಶಕ ಅಂತ ಹೇಳಿಕೊಂಡು ಕರೆ ಮಾಡಿದ್ದಾನೆ. "ನಿಮಗೆ ವಯಸ್ಸು ಎಷ್ಟು? ನೀವು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತೀರಾ?" ಎಂದು ಹೇಳಿ ನಂತರ "ಅವಕಾಶ ಬೇಕು ಅಂದ್ರೆ ಕಾಂಪ್ರಮೈಸ್ ಗೆ ರೆಡಿಯಾಗಬೇಕೆಂದು ಹೇಳಿದ್ದಾನೆ".
ಸಹ ನಿರ್ದೇಶಕನ ಮಾತು ಕೇಳಿ ಶಾಕ್ ಆದ ಸಜಿತಾ ಫೋನ್ ಮಾಡಿದ ವ್ಯಕ್ತಿ ಯಾರು ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆ ನಂತರ ಗೊತ್ತಾಗಿದ್ದು ಆತ ಕಾರ್ತಿಕ್ ಎನ್ನುವ ತಮಿಳಿನ ಸಹ ನಿರ್ದೇಶಕ ಎನ್ನವುದು. ನಂತರ ಸಜಿತಾ ತನಗಾದ ಅನುಭವವನ್ನು ಫೇಸ್ ಬುಕ್ ನಲ್ಲಿ ಹಂಚಿಕೊಳ್ಳುವ ಜೊತೆಗೆ ಸಹ ನಿರ್ದೇಶಕ ಕಾರ್ತಿಕ್ ಫೋನ್ ನಂಬರ್ ಅನ್ನು ಪೋಸ್ಟ್ ಮಾಡಿದ್ದಾರೆ.

"ಯಾರಾದರು ಇದಕ್ಕೆ ಸಿದ್ಧರಾಗಿದ್ದರೆ ಫೋನ್ ಮಾಡಿ" ಎಂದು ಬರೆದು ಆತನ ಫೋನ್ ನಂಬರ್ ಪೋಸ್ಟ್ ಮಾಡಿದ್ದಾರೆ. ಸಜಿತಾ ಆತನ ಕರ್ಮಕಾಂಡವನ್ನು ಬಯಲಿಗೆ ಎಳೆಯುತ್ತಿದಂತೆ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಆದ್ರೆ ಅದಕ್ಕು ಮೊದಲು ಸಜಿತಾ ಸೋದರ ಸಂಬಂದಿ ಒಬ್ಬರು ಕಾರ್ತಿಕ್ ಗೆ ಫೋನ್ ಮಾಡಿ ಸಜಿತಾ ಪೊಲೀಸರಿಗೆ ದೂರು ನೀಡುತ್ತಿದ್ದಾರೆ ಎಂದು ಹೇಳುತ್ತಿದ್ದಂತೆ ಕಾರ್ತಿಕ್ ಕ್ಷಮೆ ಕೇಳಲು ಶುರುಮಾಡಿಕೊಂಡಿದ್ದಾನೆ.
"ಆದ್ರೆ ಆತನನ್ನು ಕ್ಷಮಿಸಿದ್ರೆ ಇಂತಹ ಸಮಸ್ಯೆಗಳು ಇಲ್ಲಿಗೆ ನಿಲ್ಲುವುದಿಲ್ಲ. ಹಾಗಾಗಿ ಕ್ಷಮೆಯ ಮಾತೆ ಇಲ್ಲ, ಇದು ಎಲ್ಲರ ಗಮನಕ್ಕೆ ಬರಲಿ ಎಂದು ಫೇಸ್ ಬುಕ್ ನಲ್ಲಿ ಹಾಕಿದ್ದೇನೆ.ಈ ರೀತಿಯ ಪ್ರಶ್ನೆಗಳನ್ನು ಮಹಿಳೆಯರಿಗೆ ಕೇಳಬಾರದು" ಎಂದು ಹೇಳಿದ್ದಾರೆ.


Click it and Unblock the Notifications











