ಸಖತ್ತಾಗಿದೆ ಗಣೇಶ್ ನಟನೆಯ 'ಸಖತ್' ಮೋಷನ್ ಪೋಸ್ಟರ್
ಸಿಂಪಲ್ ಸುನಿ ಮತ್ತು ಗಣೇಶ್ ಜೋಡಿ ಮತ್ತೆ ಪ್ರೇಕ್ಷಕರಿಗೆ ಮೋಡಿ ಮಾಡಲು ತಯಾರಾಗಿದೆ. ಈ ಬಾರಿ ಸಖತ್ ಎಂಬ ಸಿನಿಮಾದೊಂದಿಗೆ ಇಬ್ಬರೂ ಜೊತೆಯಾಗುತ್ತಿದ್ದಾರೆ.
Recommended Video
ಸಖತ್ ಸಿನಿಮಾದ ಮೋಷನ್ ಪೋಸ್ಟರ್ ಇಂದು ಬಿಡುಗಡೆ ಆಗಿದ್ದು, ನಿಜಕ್ಕೂ ಸಖತ್ ಆಗಿದೆ ಪೋಸ್ಟರ್. ಪೋಷನ್ ಪೋಸ್ಟರ್ ಪೋಸ್ಟರ್‌ನ ಹಿನ್ನೆಯಲ ರ್ಯಾಪ್ ಹಾಡು ಸಹ ಗುನುಗುವಂತಿದೆ.
ಸಖತ್ ನ ಪೋಷನ್ ಪೋಸ್ಟರ್ ನ ರ್ಯಾಪ್ ಹಾಡಿನಲ್ಲಿ ಗಣೇಶ್ ಅವರಿಗೆ ಹೊಗಳಿಕೆಯ ಹೂಮಾಲೆಯನ್ನೇ ಪೋಣಿಸಲಾಗಿದೆ. ಪೋಸ್ಟರ್ ಸಹ ಸಖತ್ ಕಲರ್‌ಫುಲ್ಲಾಗಿದೆ. ಗಣೇಶ್ ಅಭಿಮಾನಿಗಳಿಗೆ ಪೋಸ್ಟರ್ ಹಬ್ಬ.

ಚಮಕ್ ಸಿನಿಮಾ ಮಾಡಿದ್ದ ಗಣೇಶ್-ಸುನಿ
ಸಿಂಪಲ್ ಸುನಿ ಮತ್ತು ಗಣೇಶ್ ಒಟ್ಟಾಗಿರುವ ಎರಡನೇ ಸಿನಿಮಾ ಇದೆ. ಈ ಮೊದಲು ಚಮಕ್ ಸಿನಿಮಾಕ್ಕಾಗಿ ಒಟ್ಟಿಗೆ ಕೆಲಸ ಮಾಡಿದ್ದರು. ಇದು ಈ ಜೋಡಿಯ ಎರಡನೇಯ ಸಿನಿಮಾ.

ರಾಯಘಡ ಘೊಷಿಸಿರುವ ಸಿಂಪಲ್ ಸುನಿ
ಸಿಂಪಲ್ ಸುನಿ ಗಣೇಶ್ ಅವರೊಂದಿಗೆ ಮತ್ತೊಂದು ಸಿನಿಮಾವನ್ನು ನಿನ್ನೆಯಷ್ಟೆ ಘೋಷಿಸಿದ್ದು, ಅದರ ಹೆಸರು ರಾಯಘಡ. ಇದಕ್ಕೆ ಗಣೇಶ್ ಅವರೇ ನಾಯಕಾರಿದ್ದು, ಸಿನಿಮಾದಲ್ಲಿ ರಗಡ್ ಲುಕ್‌ನಲ್ಲಿ ಗಣೇಶ್ ಕಾಣಿಸಿಕೊಳ್ಳಲಿದ್ದಾರೆ.

ಯುವ ಪ್ರತಿಭೆ ಸಿದ್
ಇದೀಗ ಬಿಡುಗಡೆ ಆಗಿರುವ ರ್ಯಾಪ್ ಗೆ ಯುವ ಪ್ರತಿಭೆ ಸಿದ್ ದನಿ ನೀಡಿದ್ದಾರೆ. ಸಖತ್ ಗೆ ಸಂಗೀತ ನೀಡಿರುವುದು ಚಮಕ್ ಗೆ ಸಂಗೀತ ನೀಡಿದ್ದ ಜ್ಯೂಡಾ ಸ್ಯಾಂಡಿ. ಮೋಷನ್ ಪೋಸ್ಟರ್‌ನ ರ್ಯಾಪ್ ಅಂತೂ ಸಖತ್ತಾಗಿದೆ.

ಕೆವಿಎನ್ ಬ್ಯಾನರ್ ಮೂಲಕ ಸಿನಿಮಾ
ಸಖತ್ ಸಿನಿಮಾವು ಕೆವಿಎನ್ ಬ್ಯಾನರ್‌ನಲ್ಲಿ ತಯಾರಾಗುತ್ತಿದ್ದು, ಸಿನಿಮಾದ ನಿರ್ಮಾಣವನ್ನು ನಿಶಾ ವೆಂಕಟ್ ಕೊನಾಂಕಿ ಮತ್ತು ಸುಪ್ರಿತ್ ಮಾಡುತ್ತಿದ್ದಾರೆ. ಆನಂದ್ ಆಡಿಯೋ ಸಂಗೀತ ಹಕ್ಕು ಪಡೆದಿದೆ.


Click it and Unblock the Notifications











