For Quick Alerts
  ALLOW NOTIFICATIONS  
  For Daily Alerts

  'ಸಲಾಂ ರಾಕಿ ಭಾಯ್' ವಿಡಿಯೋ ಸಾಂಗ್ ರಿಲೀಸ್: ಭರ್ಜರಿ ರೆಸ್ಪಾನ್ಸ್

  |
  KGF Kannada Movie: ಸಲಾಂ ರಾಕಿ ಭಾಯ್' ವಿಡಿಯೋ ಸಾಂಗ್ ರಿಲೀಸ್: ಭರ್ಜರಿ ರೆಸ್ಪಾನ್ಸ್ | FILMIBEAT KANNADA

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಸಖತ್ ಸದ್ದು ಮಾಡ್ತಿದ್ದು, 'ಸಲಾಂ ರಾಕಿ ಭಾಯ್.....' ಹಾಡು ಈಗ ಟಾಕ್ ಆಫ್ ದಿ ಟೌನ್ ಆಗಿದೆ. ಅದರಲ್ಲೂ ಬಾಲಿವುಡ್ ಮಂದಿಯಂತೂ ಈ ಹಾಡಿನ ಹವಾ ನೋಡಿ ಅಚ್ಚರಿಯಾಗಿದ್ದಾರೆ.

  ಲಿರಿಕಲ್ ವಿಡಿಯೋ ಮೂಲಕ ಅಬ್ಬರಿಸಿದ್ದ 'ಸಲಾಂ ರಾಕಿ ಭಾಯ್' ಈಗ ವಿಡಿಯೋ ಸಾಂಗ್ ರಿಲೀಸ್ ಮಾಡಿದೆ. ಹಿಂದಿ ವರ್ಷನ್ ನಲ್ಲಿ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು, ಬಿಟೌನ್ ಮಂದಿಯ ಕಣ್ಣು ಕುಕ್ಕುತ್ತಿದೆ.

  ಕೆಜಿಎಫ್ ಮೊದಲ ಹಾಡು ಬಂತು: 'ರಾಕಿ' ಭಾಯ್ ಗೆ ಸಲಾಮ್

  ಬಾಲಿವುಡ್ ನ ಖ್ಯಾತ ಆಡಿಯೋ ಸಂಸ್ಥೆ ಟಿ-ಸೀರೀಸ್ ಕೆಜಿಎಫ್ ಹಿಂದಿ ಹಾಡುಗಳು ಖರೀದಿಸಿದ್ದು, ಮೊದಲ ಸಲ ಕನ್ನಡ ನಟನೊಬ್ಬನ ಹಾಡು ಟಿ-ಸಿರೀಸ್ ನಲ್ಲಿ ಬಿಡುಗಡೆಯಾಗಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

  ಅಂದ್ಹಾಗೆ, ಸಲಾಂ ರಾಕಿ ಭಾಯ್ ಕನ್ನಡ ವರ್ಷನ್ ಹಾಡಿಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಹಾಡಿನಲ್ಲಿ ಹೆಚ್ಚು ಹಿಂದಿ ಬಳಕೆಯಾಗಿದೆ ಎಂಬ ಕಾರಣಕ್ಕೆ ಆಕ್ರೋಶಗೊಂಡಿದ್ದರು. ಆದ್ರೆ, ಕಥೆಗೆ ಪೂರಕವಾಗಿ ಈ ಹಾಡನ್ನ ಬಳಸಲಾಗಿದ್ದು, ಎಲ್ಲರೂ ಮೆಚ್ಚಿಕೊಂಡಿದ್ದಾರೆ.

  'ಸಲಾಮ್ ರಾಕಿ ಭಾಯ್' ಹಿಂದಿ ಸಾಹಿತ್ಯಕ್ಕೆ ವಿರೋಧ: ನಾಗೇಂದ್ರ ಪ್ರಸಾದ್ ಪ್ರತಿಕ್ರಿಯೆ

  ರವಿ ಬಸ್ರೂರು ಸಂಗೀತ ನೀಡಿರುವ ಈ ಹಾಡಿಗೆ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ. ವಿಜಯ್ ಪ್ರಕಾಶ್, ಸಂತೋಷ್ ವೆಂಕಿ, ಸಚಿನ್ ಬಸ್ರೂರು, ಪುನೀತ್ ರುದ್ರಂಗ, ಮೋಹನ್, ಎಚ್ ಶ್ರೀನಿವಾಸ್ ಮೂರ್ತಿ, ವಿಜಯ್ ಅರಸ್ ಈ ಹಾಡಿಗೆ ಧ್ವನಿಗೂಡಿಸಿದ್ದಾರೆ.

  ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರ್ ನಿರ್ಮಾಣವಾಗಿರುವ ಬಹುಕೋಟಿ ವೆಚ್ಚದ ಸಿನಿಮಾ ಇದೇ ಡಿಸೆಂಬರ್ 21 ರಂದು ಐದು ಭಾಷೆಗಳಲ್ಲಿ ತೆರೆಕಾಣುತ್ತಿದೆ.

  English summary
  With KGF already creating a buzz ahead of its release, the video of Salaam Rocky Bhai has already garnered nearly 1 lakh views. The song, featuring Rocking Star Yash, has been composed by Ravi Basrur.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X