ಯಶ್‌ಗಾಗಿ ಹಿಂದೆ ಸರಿದ ಪ್ರಭಾಸ್: 'ಸಲಾರ್' ಬಿಡುಗಡೆ ಯಾವಾಗ?
'ಕೆಜಿಎಫ್ 2' ಸಿನಿಮಾ ಬಿಡುಗಡೆಗೆಯ ಹೊಸ ದಿನಾಂಕವನ್ನು ಇಂದು ಹೊಂಬಾಳೆ ಫಿಲಮ್ಸ್ ಸಿನಿಮಾ ನಿರ್ಮಾಣ ಸಂಸ್ಥೆ ಪ್ರಕಟಿಸಿದೆ. ಡಿಸೆಂಬರ್‌ನಲ್ಲಿ ಸಿನಿಮಾ ಬಿಡುಗಡೆ ಆಗಬಹುದು ಎಂಬ ಬಹುತೇಕರ ನಿರೀಕ್ಷೆಯನ್ನು ಮೀರಿ ಸಿನಿಮಾವು ಮುಂದಿನ ವರ್ಷ ಬಿಡುಗಡೆ ಆಗಲಿದೆ ಎಂದು ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಘೊಷಿಸಿದೆ.
Recommended Video
ಮುಂದಿನ ವರ್ಷ ಏಪ್ರಿಲ್ 14ನೇ ತಾರೀಖಿನಂದು 'ಕೆಜಿಎಫ್ 2' ಸಿನಿಮಾ ಬಿಡುಗಡೆ ಆಗಲಿದೆ. ಬಹಳ ದೂರದ ಬಿಡುಗಡೆ ದಿನಾಂಕ ಘೋಷಿಸುವ ಮೂಲಕ ಯಶ್ ಅಭಿಮಾನಿಗಳು ಮತ್ತು 'ಕೆಜಿಎಫ್' ಅಭಿಮಾನಿಗಳಿಗೆ ಹೊಂಬಾಳೆ ಫಿಲಮ್ಸ್ ಬೇಸರವನ್ನೇ ಮಾಡಿದೆ.
ಏಪ್ರಿಲ್ 14ಕ್ಕೆ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಬಿಡುಗಡೆಗೆ ರೆಡಿಯಾಗಿತ್ತು. ಆದರೆ 'ಕೆಜಿಎಫ್ 2' ಸಿನಿಮಾ ಬಿಡುಗಡೆ ಆಗುತ್ತಿರುವ ಕಾರಣಕ್ಕೆ 'ಸಲಾರ್' ಸಿನಿಮಾದ ಬಿಡುಗಡೆ ಇನ್ನಷ್ಟು ಮುಂದಕ್ಕೆ ಹೋಗಿದೆ ಎನ್ನಲಾಗುತ್ತಿದೆ.
'ಕೆಜಿಎಫ್ 2' ನಿರ್ದೇಶಿಸಿರುವ ಪ್ರಶಾಂತ್ ನೀಲ್ ಅವರೇ ನಿರ್ದೇಶನ ಮಾಡಿರುವ 'ಸಲಾರ್' ಸಿನಿಮಾಕ್ಕೆ 'ಕೆಜಿಎಫ್ 2'ಗೆ ಬಂಡವಾಳ ಹೂಡಿರುವ ಹೊಂಬಾಳೆ ಫಿಲಮ್ಸ್‌ನ ವಿಜಯ್ ಕಿರಗಂದೂರು ಅವರೇ ಬಂಡವಾಳ ಹೂಡಿದ್ದಾರೆ. 'ಸಲಾರ್' ಸಿನಿಮಾ ಏಪ್ರಿಲ್ 14ಕ್ಕೆ ಬಿಡುಗಡೆ ಆಗುತ್ತದೆ ಎನ್ನಲಾಗಿತ್ತು. ಆದರೆ ಅದೀಗ ಮುಂದಕ್ಕೆ ಹೋಗಿದೆ.

'ಸಲಾರ್' ಸಹ ಬಿಡುಗಡೆ ಆಗುವುದರಲ್ಲಿತ್ತು
ಒಂದೇ ನಿರ್ಮಾಣ ಸಂಸ್ಥೆಯ ಎರಡು ಸಿನಿಮಾಗಳು ಮಾರುಕಟ್ಟೆಯಲ್ಲಿ ಪರಸ್ಪರ ಎದುರಾಗುವುದು ಬೇಡವೆಂಬ ಕಾರಣದಿಂದ 'ಸಲಾರ್' ಸಿನಿಮಾದ ಬಿಡುಗಡೆಯನ್ನು ಹೊಂಬಾಳೆ ಫಿಲಮ್ಸ್ ಮುಂದೂಡಿದೆ ಎನ್ನಲಾಗುತ್ತಿದೆ. 'ಸಲಾರ್' ಸಿನಿಮಾ ಪೂರ್ಣವಾಗಿ ಮುಗಿಯಲು ಇನ್ನಷ್ಟು ಕಾಲಾವಕಾಶ ಬೇಕಿದ್ದು, ಇದೀಗ ಬಿಡುಗಡೆ ಮುಂದಕ್ಕೆ ಹೋಗಿರುವ ಕಾರಣ ಸಾವಧಾನದಿಂದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಮಾಡುವ ಸಮಯ ಪ್ರಶಾಂತ್ ನೀಲ್‌ಗೆ ದೊರಕಿದೆ.

ರಾಧೆ-ಶ್ಯಾಮ್ ಸಿನಿಮಾ ಬಿಡುಗಡೆ ತಡವಾಗುತ್ತಿದೆ
ಅದೂ ಅಲ್ಲದೆ ಪ್ರಭಾಸ್ ನಟಿಸಿರುವ 'ರಾಧೆ-ಶ್ಯಾಮ್' ಸಿನಿಮಾದ ಬಿಡುಗಡೆ ತಡವಾಗುತ್ತಿದೆ. ಆ ಸಿನಿಮಾವನ್ನು ಮುಂದಿನ ವರ್ಷ ಪ್ರೇಮಿಗಳ ದಿನಾಚರಣೆಯಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಅದೇ ಸಮಯಕ್ಕೆ ಮತ್ತೊಂದು ಪ್ರಭಾಸ್ ಸಮಯ ಬರುವುದು ಸೂಕ್ತವಲ್ಲವೆಂಬ ಕಾರಣಕ್ಕೆ 'ಸಲಾರ್' ಸಿನಿಮಾದ ಬಿಡುಗಡೆಯನ್ನು ಮುಂದಕ್ಕೆ ಹಾಕಿದ್ದಾರೆ. 'ರಾಧೆ-ಶ್ಯಾಮ್' ಸಿನಿಮಾದ ಬಹುತೇಕ ಚಿತ್ರೀಕರಣ ವಿದೇಶದಲ್ಲಿ ಮುಗಿದಿದ್ದು, ಕೆಲವು ಭಾಗದ ಚಿತ್ರೀಕರಣ ಹೈದರಾಬಾದ್‌ನಲ್ಲಿ ಆಗಬೇಕಿದೆ. ಆದರೆ ಪ್ರಭಾಸ್‌ರ ಬ್ಯುಸಿ ಶೆಡ್ಯೂಲ್ ಮತ್ತು ಕೊರೊನಾ ಕಾರಣದಿಂದ ಚಿತ್ರೀಕರಣ ಅಂದುಕೊಂಡಂತೆ ಆಗುತ್ತಿಲ್ಲ.

ಡಿಸೆಂಬರ್ ನಲ್ಲಿ ಹಲವು ಸಿನಿಮಾಗಳು ತೆರೆಗೆ
'ಕೆಜಿಎಫ್ 2' ಸಿನಿಮಾ ಜುಲೈ 16ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತದೆ ಎಂದು ಮೊದಲಿಗೆ ಘೋಷಿಸಲಾಯ್ತು. ಜುಲೈ 16ರ ವೇಳೆಗೆ ಕೊರೊನಾ ಕಾರಣಕ್ಕೆ ಚಿತ್ರಮಂದಿರಗಳ ಮೇಲೆ ಸರ್ಕಾರವು ನಿರ್ಬಂಧ ಹೇರಿತು. ಚಿತ್ರಮಂದಿರಗಳು ತುಂಬಿದ್ದಾಗಷ್ಟೆ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿ ಚಿತ್ರತಂಡವು ಜುಲೈ 16ರ ಬಿಡುಗಡೆ ಘೋಷಣೆಯಿಂದ ಹಿಂದೆ ಸರಿಯಿತು. ಡಿಸೆಂಬರ್‌ನಲ್ಲಿ ಸಿನಿಮಾದ ಬಿಡುಗಡೆ ಆಗುತ್ತದೆ ಎಂಬ ಲೆಕ್ಕಾಚಾರ ಹಾಕಲಾಯ್ತು ಆದರೆ ಅದೇ ವೇಳೆಗೆ ತೆಲುಗಿನ 'ಪುಷ್ಪ', ತಮಿಳಿನ 'ಬೀಸ್ಟ್', 'ಅನ್ನಾತೆ' ಹಿಂದಿಯ 'ಲಾಲ್ ಸಿಂಗ್ ಛಡ್ಡಾ' ಸಿನಿಮಾಗಳು ಬಿಡುಗಡೆ ಆಗಲು ತಯಾರಿರುವ ಕಾರಣ ಆ ದಿನಾಂಕವನ್ನು ಬೇಡವೆನ್ನಲಾಗಿದೆ. ಕೊನೆಗೆ ಬಹುತೇಕ ಸೇಫ್ ಆದ ಏಪ್ರಿಲ್ 14ನ್ನು ಬಿಡುಗಡೆಗೆ ಆಯ್ಕೆ ಮಾಡಿಕೊಂಡಿದ್ದಾರೆ ನಿರ್ಮಾಪಕರು.

ಬಿಡುಗಡೆಗೆ ಮುನ್ನವೇ ಕೋಟಿ-ಕೋಟಿ ಬ್ಯುಸ್ನೆಸ್
ಯಶ್ ನಟನೆಯ 'ಕೆಜಿಎಫ್ 2' ಸಿನಿಮಾವು ಬಿಡುಗಡೆಗೆ ಮುಂಚೆಯೇ ಕೋಟ್ಯಂತರ ರೂಪಾಯಿ ಬ್ಯುಸಿನೆಸ್ ಮಾಡಿದೆ. 'ಕೆಜಿಎಫ್ 2' ಸಿನಿಮಾದ ಆಡಿಯೋ ಹಕ್ಕನ್ನು ಕರ್ನಾಟಕದ್ದೇ ಆದ ಲಹರಿ ಆಡಿಯೋ ಸಂಸ್ಥೆ 7.20 ಕೋಟಿ ರು ನೀಡಿ ಖರೀದಿ ಮಾಡಿದ್ದಾರೆ. ಸಿನಿಮಾದ ಎಲ್ಲ ಭಾಷೆಯ ಆಡಿಯೋ ಹಕ್ಕುಗಳು ಆನಂದ್ ಆಡಿಯೋ ಬಳಿ ಇವೆ. ಅಲ್ಲದೆ ಸಿನಿಮಾದ ದಕ್ಷಿಣ ಭಾರತ ಸ್ಯಾಟಲೈಟ್ ಹಕ್ಕನ್ನು ಜೀ ಸಂಸ್ಥೆ ಖರೀದಿ ಮಾಡಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಭಾಷೆಗಳಲ್ಲಿ 'ಕೆಜಿಎಫ್ 2' ಸಿನಿಮಾವು ಜೀ ಸಂಸ್ಥೆಯ ಪ್ರಾದೇಶಿಕ ಭಾಷೆಯಲ್ಲಿಯೇ ಪ್ರಸಾರವಾಗಲಿದೆ.


Click it and Unblock the Notifications











