ಎರಡು ದಿನಗಳಲ್ಲಿ ಕರ್ನಾಟಕದಲ್ಲಿ ಕೋಟಿ ಕೋಟಿ ಬಾಚಿಕೊಂಡ ಪ್ರಭಾಸ್ ನಟನೆಯ 'ಸಲಾರ್'
ಉಗ್ರಂ, ಕೆಜಿಎಫ್ ಖ್ಯಾತಿಕ ಪ್ರಶಾಂತ್ ನೀಲ್ ಬರೆದು ನಿರ್ದೇಶಿಸಿರುವ, ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ನಟಿಸಿರುವ ಸಲಾರ್: ಭಾಗ 1: ಕದನ ವಿರಾಮ ಬಿಡುಗಡೆಯಾಗಿದೆ. ಸಿನಿಮಾ ಬಿಡುಗಡೆಯಾಗಿ ಎರಡೇ ದಿನಕ್ಕೆ ಕೋಟಿ ಕೋಟಿ ರೂಪಾಯಿ ತನ್ನ ಬುಟ್ಟಿಗೆ ಹಾಕಿಕೊಳ್ಳುತ್ತಿದೆ. 270 ಕೋಟಿ ಬಜೆಟ್‌ನಲ್ಲಿ ತಯಾರಾಗಿದ್ದ ಸಿನಿಮಾ ಎರಡು ದಿನದಲ್ಲಿ 295 ಕೋಟಿ ರೂ. ಗಳಿಸಿದೆ.
ಇನ್ನು, 'ಸಲಾರ್' ಸಿನಿಮಾ ತೆಲುಗು ಭಾಷೆಯಲ್ಲಿ ತಯಾರಾಗಿದ್ದು, ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂನಲ್ಲಿ ಡಬ್ ಆಗಿ ಬಿಡುಗಡೆಯಾಗಿದೆ. ಕರ್ನಾಟಕದಲ್ಲೂ ಸಿನಿಮಾಗೆ ಸಕತ್ ಓಪನಿಂಗ್ ಸಿಕ್ಕಿದೆ. ವಿಶ್ವದಾದ್ಯಂತ 295 ಕೋಟಿ ರೂಪಾಯಿ ಗಳಿಸಿದರುವ ಸಿನಿಮಾ ಕರ್ನಾಟಕದಲ್ಲಿ ಗಳಿಸಿದ್ದು ಎಷ್ಟು ಎಂಬ ಮಾಹಿತಿ ಇಲ್ಲಿದೆ.

ಕರ್ನಾಟಕದಲ್ಲೂ 'ಸಲಾರ್'ಗೆ ಭರ್ಜರಿ ಕಲೆಕ್ಷನ್
ಸಲಾರ್ ಸಿನಿಮಾವನ್ನು ನಿರ್ಮಾಣ ಮಾಡಿರುವುದು, ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು ಕನ್ನಡಿಗರೆ. ಚಿತ್ರದಲ್ಲಿ ಕನ್ನಡಿಗರು ಕೂಡ ಹೆಚ್ಚಾಗಿದ್ದಾರೆ. ಹೀಗಿರುವಾಗ ಇದು 'ಉಗ್ರಂ' ಸಿನಿಮಾದ ರಿಮೇಕ್ ಎಂದು ತಿಳಿದಿದ್ದರೂ ಜನ ಥಿಯೇಟರ್‌ಗಳಿಗೆ ಲಗ್ಗೆ ಇಡುತ್ತಿದ್ದಾರೆ. ಕರ್ನಾಟಕದಲ್ಲಿ ಮೊದಲ ದಿನ 11.65 ಕೋಟಿ ಗಳಿಸಿತ್ತು.
ಈಗ ಚಿತ್ರ ಬಿಡುಗಡೆಯಾಗಿ ಎರಡು ದಿನಗಳಾಗಿದ್ದು, ವಿಶ್ವದಾದ್ಯಂತ 295 ಕೋಟಿ ರೂ. ಬಾಚಿಕೊಂಡಿದೆ. ಕರ್ನಾಟಕದಲ್ಲಿ ಎರಡನೇ ದಿನ 6.65 ಕೋಟಿ ರೂಪಾಯಿ ಗಳಿಸಿದೆ. ಕರ್ನಾಟಕದಾದ್ಯಂತ ಕೇವಲ ಎರಡು ದಿನಗಳಲ್ಲಿ 18.3 ಕೋಟಿ ಸಂಗ್ರಹಿಸಿದ್ದು, ಭಾನುವಾರದ ಅಂತ್ಯದಲ್ಲಿ 20 ಕೋಟಿ ಕ್ಲಬ್‌ಗೆ ಸೇರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ ಟ್ರೆಡ್ ಅನಲಿಸ್ಟ್‌ಗಳು.
ಸಲಾರ್: ಕನ್ನಡ ಆವೃತ್ತಿಯಲ್ಲು ದಾಖಲೆ
ಕರ್ನಾಟಕ ಟಾಕೀಸ್ ವರದಿ ಮಾಡಿದಂತೆ, ಸಲಾರ್ ಕರ್ನಾಟಕದಲ್ಲಿ ಬಾಕ್ಸ್ ಆಫೀಸ್ ಶೇಕ್ ಮಾಡುತ್ತಿದೆ. ಭಾನುವಾರದಲ್ಲಿ 20 ಕೋಟಿ ಗಳಿಸುವ ಮೂಲಕ 20 ಕ್ಲಬ್‌ಗೆ ಸೇರಲಿದೆ. 'ಸಲಾರ್' ಸಿನಿಮಾ 2 ಕೋಟಿ ದಾಖಲೆಯನ್ನು ಬೇಗನೆ ಮುರಿದ ಕನ್ನಡದ ಡಬ್ ಚಿತ್ರವಾಗಿದೆ. ಇಷ್ಟು ಬೇಗ 2 ಕೋಟಿ ಗಳಿಸಿದ 5 ನೇ ಕನ್ನಡ ಡಬ್ ಸಿನಿಮಾವಾಗಿ ತನ್ನ ಸ್ಥಾನ ಪಡೆದಿದೆ.
'ಸಲಾರ್' ಮೊದಲ ದಿನದಲ್ಲಿ 1.07 ಕೋಟಿ ಮತ್ತು ಎರಡನೇ ದಿನದಲ್ಲಿ ದಾಖಲೆಯ 1.15 ಕೋಟಿ ಗಳಿಸುವುದರೊಂದಿಗೆ, ಸಲಾರ್‌ನ ಕನ್ನಡ ಆವೃತ್ತಿಯು ಎರಡು ದಿನಗಳಲ್ಲಿ ಒಟ್ಟು 2.22 ಕೋಟಿ ರೂಪಾಯಿ ಗಳಿಸಿದೆ. ಸಲಾರ್ ಪ್ರಾದೇಶಿಕ ಮಾರುಕಟ್ಟೆಯಲ್ಲಿ ಹೊಸ ದಾಖಲೆಯನ್ನು ಬರೆದಿದೆ.

ಸಲಾರ್: ಭಾಗ 1 ಪಾತ್ರವರ್ಗ
ಡಿಸೆಂಬರ್ 2020 ರಲ್ಲಿ ಘೋಷಣೆಯಾದ 'ಸಲಾರ್' ಸಿನಿಮಾಕ್ಕೆ 2021 ರ ಜನವರಿಯಲ್ಲಿ ಚಿತ್ರೀಕರಣ ಪ್ರಾರಂಭವಾಗಿತ್ತು. ಚಲನಚಿತ್ರದಲ್ಲಿ ಪ್ರತಿಭಾನ್ವಿತರನ್ನು ಒಂದೆಡೆ ತಂದು ಕೂರಿಸಲಾಗಿದೆ. ಪ್ರಭಾಸ್ ದೇವಾ ಪಾತ್ರವನ್ನು, ಪೃಥ್ವಿರಾಜ್ ಸುಕುಮಾರನ್ ರಾಜಮನ್ನಾರ್ ಅವರ ಮಗ ವರದರಾಜ ಮನ್ನಾರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಇವರ ಜೊತೆಯಲ್ಲಿ, ಶ್ರುತಿ ಹಾಸನ್ ಆಧ್ಯಾ ಪಾತ್ರದಲ್ಲಿ, ಜಗಪತಿ ಬಾಬು ರಾಜಮನ್ನಾರ್ ಆಗಿದ್ದಾರೆ. ಇನ್ನು, ಕನ್ನಡಿಗರಾದ ದೇವರಾಜ್, ನವೀನ್ ಶಂಕರ್, ಪ್ರಮೋದ್, ಆನಂದ್, ಈಶ್ವರಿ ರಾವ್, ಶ್ರೀಯಾ ರೆಡ್ಡಿ, ರಾಮಚಂದ್ರರಾಜು, ಮಧು ಗುರುಸ್ವಾಮಿ, ಸಪ್ತಗಿರಿ, ಪೃಧ್ವಿ ರಾಜ್, ಝಾನ್ಸಿ ಮತ್ತು ಮೈಮ್ ಗೋಪಿ ಕೂಡ ಇದ್ದಾರೆ. ಸಿಮ್ರತ್ ಕೌರ್ ಅವರು ಐಟಂ ಸಾಂಗ್‌ನಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications










