Salaar Release Date: ಇನ್ನೂ ಬದಲಾಗಿಲ್ಲ 'ಸಲಾರ್' ರಿಲೀಸ್: ಚಿತ್ರತಂಡದ ಗಿಮಿಕ್ ಏನು?

'ಜೇಮ್ಸ್‌' ಸಿನಿಮಾ ರಿಲೀಸ್ ಆಗಿದ್ದು ಆಗಿದೆ. ಈಗ ಕನ್ನಡದ ಮತ್ತೊಂದು ಚಿತ್ರದ ಹವಾ ಶುರುವಾಗಿದೆ ಅದು ಬಹುನಿರೀಕ್ಷಿತ 'ಕೆಜಿಎಫ್ 2' ಸಿನಿಮಾ. 'ಕೆಜಿಎಫ್ 2' ಚಿತ್ರದ ದರ್ಬಾರ್ ಏಪ್ರಿಲ್‌ನಲ್ಲಿ ಶುರುವಾಗಲಿದೆ. ಏಪ್ರಿಲ್‌ 14ರಂದು ಚಿತ್ರದ ರಿಲೀಸ್ ದಿನಾಂಕ ಫಿಕ್ಸ್ ಆಗಿದೆ. ಹಾಗಾಗಿ ಸಿನಿಮಾ ತಂಡ ಈಗಾಗಲೇ ಚಿತ್ರದ ಪ್ರಚಾರ ಶುರುಮಾಡಿದೆ.

'ಕೆಜಿಎಫ್ 2' ಚಿತ್ರದ ಟ್ರೈಲರ್ ಹಾಗೂ ಹಾಡಿನ ರಿಲೀಸ್ ದಿನಾಂಕವನ್ನು ಈಗಾಗಲೇ ಪ್ರಕಟ ಮಾಡಲಾಗಿದೆ. ಈ ಚಿತ್ರವನ್ನು ಕನ್ನಡದ ಹೆಸರಾಂತ ನಿರ್ಮಾಣ ಸಂಸ್ಥೆ ಹೊಂಬಾಳೆ ನಿರ್ಮಾಣ ಮಾಡುತ್ತಿದೆ. ಇದರ ಜೊತೆಗೆ ಹೊಂಬಾಳೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರಕ್ಕೂ ಬಂಡವಾಳ ಹಾಕುತ್ತಿದೆ. ಅದು ಪ್ರಭಾಸ್ ಅಭಿನಯದ 'ಸಲಾರ್'.

'ಕೆಜಿಎಫ್ 2' ರಿಲೀಸ್‌ ಬಗ್ಗೆ ಮಾತನಾಡಬೇಕು ಅಂದರೆ 'ಸಲಾರ್' ಚಿತ್ರದ ಬಗ್ಗೆ ಮಾತನಾಡಲೇ ಬೇಕು. ಯಾಕೆಂದರೆ ಈ ಎರಡೂ ಚಿತ್ರಗಳಿಗೂ ಅನ್ವಯ ಆಗುವ ಒಂದು ವಿಚಾರ ಇದೆ. ಈ ವಿಚಾರದಲ್ಲಿ ಚಿತ್ರತಂಡ ಗಿಮಿಕ್ ಮಾಡುತ್ತಿದೆ ಎನ್ನುವುದು ಕಣ್ಣಿಗೆ ಸ್ಪಷ್ಟವಾಗಿಯೇ ಗೋಚರ ಆಗುತ್ತಿದೆ.

Recommended Video

ಬರ್ತಾ ಇದೆ ರಾಕಿ ಭಾಯ್ ತೂಫಾನ್

ಏಪ್ರಿಲ್ 14- 2022ಕ್ಕೆ 'ಸಲಾರ್' ರಿಲೀಸ್ ?

ಏಪ್ರಿಲ್ 14- 2022ಕ್ಕೆ 'ಸಲಾರ್' ರಿಲೀಸ್ ?

ಹೊಂಬಾಳೆ ಫಿಲಂಸ್ ನಿರ್ಮಾಣ ಸಂಸ್ಥೆ ಈಗಾಗಲೇ 'ಸಲಾರ್ ಚಿತ್ರದ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಿದೆ. ಇದೇ ಈಗ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆಯೇ ಚಿತ್ರತಂಡ ಸಲಾರ್ ರಿಲೀಸ್‌ ಡೇಟ್‌ ಅನ್ನು 2022 ಏಪ್ರಿಲ್ 14 ಎಂದು ಪ್ರಕಟ ಮಾಡಿದೆ. ಆದರೆ ಇದೇ ದಿನ 'ಕೆಜಿಎಫ್ 2' ಚಿತ್ರ ಕೂಡ ರಿಲೀಸ್ ಆಗುತ್ತಿದೆ. ಬೇರೆ ಬೇರೆ ಸಿನಿಮಾಗಳು ಒಂದೇ ದಿನ ರಿಲೀಸ್ ಆಗುತ್ತವೆ ಎಂದರೆ ಯಾವುದೇ ಗೊಂದಲ ಇರುವುದಿಲ್ಲ. ಆದರೆ ಹೊಂಬಾಳೆ ನಿರ್ಮಾಣ ಸಂಸ್ಥೆಯ ಎರಡು ಚಿತ್ರಗಳು ಒಂದೇ ದಿನ ರಿಲೀಸ್ ಆಗುವುದು ಸಾಧ್ಯನಾ? ಎನ್ನುವ ಪ್ರಶ್ನೆ ಮೂಡಿದೆ.

ಇನ್ನು ಬದಲಾಗಿಲ್ಲ 'ಸಲಾರ್' ರಿಲೀಸ್ ಡೇಟ್!

ಇನ್ನು ಬದಲಾಗಿಲ್ಲ 'ಸಲಾರ್' ರಿಲೀಸ್ ಡೇಟ್!

'ಕೆಜಿಎಫ್ 2' ಚಿತ್ರದ ರಿಲೀಸ್‌ಗೆ ಇನ್ನು ಕೆಲವು ದಿನಗಳು ಮಾತ್ರವೇ ಬಾಕಿ ಇದೆ. ಮಾರ್ಚ್ ಕಳೆದರೆ ಏಪ್ರಿಲ್‌ ಎರಡನೇ ವಾರದಲ್ಲಿ 'ಕೆಜಿಎಫ್ 2' ಚಿತ್ರ ತೆರೆಗೆಬರಲಿದೆ. ಆದರೆ ಇನ್ನೂ ಕೂಡ 'ಸಲಾರ್' ಚಿತ್ರ ರಿಲೀಸ್ ದಿನಾಂಕ ಬದಲಾಗಿಲ್ಲ. ಈ ಚಿತ್ರದ ಶೂಟಿಂಗ್ ಇನ್ನೂ ಬಾಕಿ ಇದೆ. ಶೂಟಿಂಗ್‌ ಮುಗಿಸಿದರೆ ಚಿತ್ರದ ಪೋಸ್ಟ್ ಪ್ರೊಡಕ್ಷನ್, ಡಬ್ಬಿಂಗ್ ಅಂತ ಸಾಕಷ್ಟು ಕೆಲಸಗಳು ಇರುತ್ತವೆ. ಹಾಗಾಗಿ ಸಿನಿಮಾ ಮತ್ತಷ್ಟು ತಡವಾಗಲಿದೆ. ಹಾಗೆ ನೋಡಿದರೆ 2022ರಲ್ಲಿ 'ಸಲಾರ್' ತೆರೆಗೆ ಬರುವುದೇ ಅನುಮಾನ.

'ಸಲಾರ್' ರಿಲೀಸ್ ಡೇಟ್ ಚಿತ್ರತಂಡದ ಗಿಮಿಕ್!

'ಸಲಾರ್' ರಿಲೀಸ್ ಡೇಟ್ ಚಿತ್ರತಂಡದ ಗಿಮಿಕ್!

ಮೊದಲು ಸಲಾರ್ 2022 ಏಪ್ರಿಲ್ 14ಕ್ಕೆ ರಿಲೀಸ್ ಎಂದಾಗ ಬಹುಶಃ ಚಿತ್ರ ಅದೇ ದಿನ ತೆರೆ ಕಾಣಬಹುದು ಎಂದು ಊಹಿಸಲಾಗಿತ್ತು. ಆದರೆ ಕೊರೊನಾದಿಂದ ಅದು ಸಾಧ್ಯವಾಗಿಲ್ಲ. ಹಾಗಾಗಿ ಆ ದಿನಾಂಕಕ್ಕೆ ಈಗ 'ಕೆಜಿಎಫ್ 2' ಚಿತ್ರವನ್ನು ರಿಲೀಸ್ ಮಾಡಲಾಗುತ್ತಿದೆ. ಹೀಗಿದ್ದರೂ, ಇನ್ನೂ ಕೂಡ ಚಿತ್ರತಂಡ ಸಲಾರ್ ಚಿತ್ರದ ರಿಲೀಸ್ ಡೇಟ್‌ ಅನ್ನು ಬದಲಾಯಿಸಿಲ್ಲ. ಈ ದಿನ 'ಸಲಾರ್' ರಿಲೀಸ್ ಸಾಧ್ಯ ಇಲ್ಲ ಎನ್ನುವುದು ಸ್ಪಷ್ಟವಾಗಿದೆ. ಆದರೂ 'ಸಲಾರ್' ಬಿಡುಗಡೆಯ ಬಗ್ಗೆ ಚಿತ್ರತಂಡ ಬಾಯಿಬಿಟ್ಟಿಲ್ಲ. ಜೊತೆಗೆ ಹೊಸ ರಿಲೀಸ್ ಡೇಟ್ ಅನ್ನೂ ಅನೌನ್ಸ್ ಮಾಡಿಲ್ಲ.

ಏಪ್ರಿಲ್ 14ಕ್ಕೆ ರಾಕಿ ಬಾಯ್ ಎಂಟ್ರಿ!

ಏಪ್ರಿಲ್ 14ಕ್ಕೆ ರಾಕಿ ಬಾಯ್ ಎಂಟ್ರಿ!

ಏಪ್ರಿಲ್ 14ಕ್ಕೆ 'ಕೆಜಿಎಫ್ 2' ರಿಲೀಸ್ ಆಗುತ್ತಿದೆ. ಅದಕ್ಕೂ ಮುನ್ನ ಚಿತ್ರದ ಮೊದಲ ಹಾಡು ಬಿಡುಗಡೆಯಾಗಲಿದೆ. ಈ ಹಾಡು ಸಿನಿಮಾದಲ್ಲಿ ರಾಕಿಭಾಯ್ ಖದರ್ ಹೇಗಿರುತ್ತೆ ಎನ್ನುವುದನ್ನು ಬಣ್ಣಿಸಲಿದೆ. ಇನ್ನು ಈ ಹಾಡಿನ ಬಳಿಕ ಚಿತ್ರತಂಡ ಟ್ರೈಲರ್ ರಿಲೀಸ್ ಮಾಡಲಿದೆ. ಈಗಾಗಲೇ ಟ್ರೈಲರ್ ರಿಲೀಸ್ ಡೇಟ್‌ ಅನ್ನು ಕೂಡ ಚಿತ್ರತಂಡ ಪ್ರಕಟ ಮಾಡಿದೆ. ಮಾರ್ಚ್ 27ಕ್ಕೆ ಸಿನಿಮಾದ ಟ್ರೈಲರ್ ರಿಲೀಸ್ ಆಗಲಿದ್ದು, ಹಾಡಿನ ಬಳಿಕವೇ ಟ್ರೈಲರ್ ರಿಲೀಸ್ ಆಗುತ್ತೆ. ಹಾಗಾಗಿ ಸಿನಿಮಾ ಮೇಲೆ ಮತ್ತಷ್ಟು ನಿರೀಕ್ಷೆ ಹುಟ್ಟುಹಾಕುವ ಯೋಜನೆ ಚಿತ್ರತಂಡಕ್ಕೆ ಇದೆ.

More from Filmibeat

English summary
Salaar Release Date Still On April 14th, This The Gimmick Of Movie Team, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X