ಡಿಸೆಂಬರ್ 18ಕ್ಕೆ ದುನಿಯಾ ವಿಜಯ್ ತಂಡದಿಂದ ಸರ್ಪ್ರೈಸ್

'ಜಾನಿ ಜಾನಿ ಯಸ್ ಪಪ್ಪಾ' ಸಿನಿಮಾದ ಬಳಿಕ ನಿರ್ದೇಶನದ ಕಡೆ ಹೆಜ್ಜೆ ಇಟ್ಟಿರುವ ನಟ ದುನಿಯಾ ವಿಜಯ್, ಸಲಗ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಬಹಳ ಆಸೆಯಿಂದ, ಆಸಕ್ತಿಯಿಂದ ಈ ಚಿತ್ರ ನಿರ್ದೇಶನ ಮಾಡುತ್ತಿದ್ದು, ಪ್ರತಿ ಹಂತದಲ್ಲೂ ಕುತೂಹಲ ಮೂಡಿಸುತ್ತಿದೆ.

ಮೇಕಿಂಗ್ ಹಂತದಲ್ಲೇ ಇಷ್ಟೊಂದು ಸದ್ದು ಮಾಡುತ್ತಿರುವ ಸಲಗ ಈಗ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್ ಮಾಡಲು ತೀರ್ಮಾನಿಸಿದೆ. ಡಿಸೆಂಬರ್ 18ಕ್ಕೆ ಸಲಗ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆಯಾಗುತ್ತಿದೆ. ಈ ವಿಷಯವನ್ನು ಖುದ್ದು ದುನಿಯಾ ವಿಜಯ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ.

ದುನಿಯಾ ವಿಜಯ್ ನಾಯಕನಾಗಿರುವ ಈ ಚಿತ್ರದಲ್ಲಿ ಡಾಲಿ ಖ್ಯಾತಿಯ ಧನಂಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋ, ಬ್ಲ್ಯಾಕ್ ಕೋಬ್ರಾ ಮತ್ತು ಡಾಲಿಯ ಕಾಂಬಿನೇಷನ್ ಮೇಲೆ ನಿರೀಕ್ಷೆ ಹೆಚ್ಚಿದೆ.

Salaga Making Video Will Release On This Month 18

ವಿಶಿಷ್ಠ ಕಥಾಹಂದರ ರಾ ರೌಡಿಸಂ ಹಿನ್ನೆಲೆ ಹೊಂದಿರುವ ಸಲಗ ಚಿತ್ರ ಔಟ್ ಅಂಡ್ ಔಟ್ ಮಾಸ್ ಎಂಟರ್ ಟೈನ್ಮೆಂಟ್ ಎಂದು ಹೇಳಲಾಗ್ತಿದೆ. ಈ ಹಿಂದೆ ಟಗರು ಸಿನಿಮಾ ನಿರ್ಮಿಸಿದ್ದ ಕೆಪಿ ಶ್ರೀಕಾಂತ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಚಿತ್ರವನ್ನು ಅದ್ಧೂರಿಯಾಗಿ ತಯಾರಿಸುತ್ತಿದ್ದಾರೆ.

ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದು, ಮೇಕಿಂಗ್ ವಿಡಿಯೋ ಮೂಲಕವೇ ತಮ್ಮ ಕೈಚಳಕ ತೋರಿಸಲಿದ್ದಾರೆ. ಇನ್ನು 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಸಿನಿಮಾ ನಟಿ ಸಂಜನಾ ಸಲಗ ಚಿತ್ರಕ್ಕೆ ನಾಯಕಿಯಾಗಿದ್ದಾರೆ.

More from Filmibeat

English summary
Duniya Vijay's Debut directional Salaga movie making video will release on december 18th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X