'ಸಲಗ' ಚಿತ್ರದ 'ರಾ' ಮೇಕಿಂಗ್ ನೋಡಿ ಜನ ಹಾಕಿದ್ರು ಜೈಕಾರ

ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಈಗ ಡೈರೆಕ್ಟರ್ ಆಗಿದ್ದಾರೆ. 'ಸಲಗ' ಅವರ ಮೊದಲ ನಿರ್ದೇಶನದ ಸಿನಿಮಾ. ಈ ಸಿನಿಮಾ ಮೇಕಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆದಿದೆ.

ಸಿಕ್ಕಾಪಟ್ಟೆ 'ರಾ' ಆಗಿ ಸಿನಿಮಾವನ್ನು ಚಿತ್ರೀಕರಣ ಮಾಡಲಾಗಿದೆ. ಇದು ಸಿನಿಮಾದ ಮೇಕಿಂಗ್ ವಿಡಿಯೋ ಮೂಲಕ ತಿಳಿಯುತ್ತಿದೆ. ಮೇಕಿಂಗ್ ವಿಡಿಯೋದಲ್ಲಿನ ಮ್ಯೂಸಿಕ್ ಕಿಲ್ಲಿಂಗ್ ಆಗಿದೆ. ಚರಣ್ ರಾಜ್ ಸಂಗೀತ ಮತ್ತೆ ಸದ್ದು ಮಾಡುತ್ತಿದೆ.

ಮೈನವಿರೇಳಿಸುವ ಸಾಹಸ ದೃಶ್ಯಗಳು, ಖಡಕ್ ಡೈಲಾಗ್ ಗಳು ಸೇರಿ ಅಂಡರ್ ವರ್ಲ್ಡ್ ಅನ್ನು ಹಸಿ ಹಸಿಯಾಗಿ ತೋರಿಸಲಾಗಿದೆ. ಮೇಕಿಂಗ್ ವಿಡಿಯೋ ಯೂ ಟ್ಯೂಬ್ ನಲ್ಲಿ 7 ಲಕ್ಷಕ್ಕೂ ಅಧಿಕ ಹಿಟ್ಸ್ ಪಡೆದುಕೊಂಡಿದೆ. ಒಳ್ಳೆಯ ಕಾಮೆಂಟ್ಸ್ ಗಳು ಸಿಕ್ಕಿವೆ.

Salaga Movie Making Video Got Good Response In Youtube

ಧನಂಜಯ್ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಮಾಡಿದ್ದಾರೆ. ಯಶ್ವಂತ್ ಶೆಟ್ಟಿ ಸಿನಿಮಾದ ವಿಲನ್ ಆಗಿದ್ದಾರೆ. 'ಟಗರು' ಚಿತ್ರದ ಕಾಕ್ರೋಜ್ ಇಲ್ಲಿ ಕಾಣಿಸಿಕೊಂಡಿದ್ದಾರೆ. ಸಂಜನಾ ಆನಂದ್ ಸಿನಿಮಾದ ನಾಯಕಿಯಾಗಿದ್ದಾರೆ. ಶಿವರಾಜ್ ಕುಮಾರ್ ಪುನೀತ್ ರಾಜ್ ಕುಮಾರ್ ಸೇರಿದಂತೆ ಅನೇಕರು ಮೇಕಿಂಗ್ ವಿಡಿಯೋ ಮೆಚ್ಚಿಕೊಂಡಿದ್ದಾರೆ.

'ಟಗರು' ನಂತರ ಕೆಪಿ ಶ್ರೀಕಾಂತ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಶಿವಸೇನಾ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಸಿನಿಮಾ ಫೆಬ್ರವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

More from Filmibeat

English summary
Salaga kannada movie making video got good response in youtube.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X