For Quick Alerts
  ALLOW NOTIFICATIONS  
  For Daily Alerts

  ದುನಿಯಾ ವಿಜಿಯ ಸಲಗ, ಶಿವಣ್ಣನ ಭಜರಂಗಿ-2 ಬಿಡುಗಡೆ ದಿನಾಂಕ ಫಿಕ್ಸ್

  |

  ಸ್ಯಾಂಡಲ್‌ವುಡ್ ಸ್ಟಾರ್ ನಿರ್ಮಾಪಕರು ಸಭೆ ಮಾಡಿದ ಬಳಿಕ ಒಂದೊಂದೆ ಚಿತ್ರಗಳು ಬಿಡುಗಡೆ ದಿನಾಂಕ ಘೋಷಣೆಯಾಗುತ್ತಿದೆ. ಸದ್ಯದ ಲೆಕ್ಕಾಚಾರ ಗಮನಿಸಿದರೆ ಪ್ರತಿಯೊಂದು ಚಿತ್ರಕ್ಕೂ ಎರಡು ವಾರಗಳು ಗ್ಯಾಪ್ ನೀಡಲಾಗುತ್ತಿದೆ. ಪ್ರತಿ ವಾರಕ್ಕೊಮ್ಮೆ ಸ್ಟಾರ್ ನಟರ ಚಿತ್ರಗಳು ತೆರೆಗೆ ಬರುತ್ತಿದೆ.

  ರಾಬರ್ಟ್ ಸಿನಿಮಾದ ಬಿಡುಗಡೆ ಘೋಷಣೆಯಾಗಿದೆ. ಪೊಗರು ಸಿನಿಮಾದ ರಿಲೀಸ್ ದಿನಾಂಕ ಅನೌನ್ಸ್ ಆಗಿದೆ. ಯುವರತ್ನ ಚಿತ್ರದ ಎಂಟ್ರಿ ದಿನಾಂಕವೂ ಪ್ರಕಟವಾಗಿದೆ. ಈಗ ಸಲಗ, ಭಜರಂಗಿ 2, ಕೋಟಿಗೊಬ್ಬ-3 ಚಿತ್ರಗಳ ನಿರ್ಮಾಪಕರು ರಿಲೀಸ್ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಬೇಕಿದೆ. ಈ ನಡುವೆ ಈ ಮೂರು ಚಿತ್ರಗಳ ಬಿಡುಗಡೆ ದಿನಾಂಕದ ಬಗ್ಗೆ ಫಿಲ್ಮಿಬೀಟ್‌ಗೆ ಮಾಹಿತಿ ಲಭ್ಯವಾಗಿದೆ. ಮುಂದೆ ಓದಿ....

  ಒಟಿಟಿಗೆ ನೋ ಎಂದ ದುನಿಯಾ ವಿಜಿ, ಸಲಗ ರಿಲೀಸ್ ಬಗ್ಗೆ ಕೊಟ್ರು ಬ್ರೇಕಿಂಗ್ಒಟಿಟಿಗೆ ನೋ ಎಂದ ದುನಿಯಾ ವಿಜಿ, ಸಲಗ ರಿಲೀಸ್ ಬಗ್ಗೆ ಕೊಟ್ರು ಬ್ರೇಕಿಂಗ್

  ಏಪ್ರಿಲ್ 15ಕ್ಕೆ ಸಲಗ

  ಏಪ್ರಿಲ್ 15ಕ್ಕೆ ಸಲಗ

  ದುನಿಯಾ ವಿಜಯ್ ಫೇಸ್‌ಬುಕ್ ಬಂದ ಸಂದರ್ಭದಲ್ಲಿ ಸಲಗ ಸಿನಿಮಾದ ಬಿಡುಗಡೆ ಬಗ್ಗೆ ಮಾಹಿತಿ ನೀಡಿದ್ದರು. ಈ ತಿಂಗಳ ಅಂತ್ಯಕ್ಕೆ ಅಥವಾ ಫೆಬ್ರವರಿ ಮೊದಲ ವಾರ ಸಲಗ ರಿಲೀಸ್ ದಿನಾಂಕವನ್ನು ಘೋಷಿಸುತ್ತೇವೆ ಎಂದು ಹೇಳಿದ್ದರು. ಈಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಸಲಗ ಸಿನಿಮಾ ಏಪ್ರಿಲ್ 15 ರಂದು ಬಿಡುಗಡೆಯಾಗಲು ನಿರ್ಧರಿಸಿದೆ. ಇದು ಅಧಿಕೃತ ಘೋಷಣೆಯಾಗಬೇಕಿದೆ.

  ಶಿವಣ್ಣನ ಭಜರಂಗಿ-2

  ಶಿವಣ್ಣನ ಭಜರಂಗಿ-2

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸಿ, ಹರ್ಷ ನಿರ್ದೇಶಿಸಿರುವ ಭಜರಂಗಿ 2 ಸಿನಿಮಾದ ಬಿಡುಗಡೆ ಬಗ್ಗೆ ಕುತೂಹಲ ಹುಟ್ಟಿಕೊಂಡಿದೆ. ಇದುವರೆಗೂ ಚಿತ್ರದ ಬಗ್ಗೆ ಯಾವುದೇ ಅಪ್‌ಡೇಟ್ ಹೊರಬಿದ್ದಿರಲಿಲ್ಲ. ಇದೀಗ, ಭಜರಂಗಿ 2 ಸಿನಿಮಾ ಮೇ 14 ರಂದು ಚಿತ್ರಮಂದಿರಕ್ಕೆ ಬರುವ ಲೆಕ್ಕಾಚಾರದಲ್ಲಿದೆ.

  ಸ್ಟಾರ್ ನಟರ ಚಿತ್ರಗಳ ರಿಲೀಸ್ ಬಗ್ಗೆ ನಿರ್ಮಾಪಕರ ಸಭೆ: ಯಾರೆಲ್ಲ ಸೇರಿದ್ದರು? ಏನು ಚರ್ಚಿಸಿದರು?ಸ್ಟಾರ್ ನಟರ ಚಿತ್ರಗಳ ರಿಲೀಸ್ ಬಗ್ಗೆ ನಿರ್ಮಾಪಕರ ಸಭೆ: ಯಾರೆಲ್ಲ ಸೇರಿದ್ದರು? ಏನು ಚರ್ಚಿಸಿದರು?

  ಕೋಟಿಗೊಬ್ಬ 3 ಏಪ್ರಿಲ್‌ಗೆ?

  ಕೋಟಿಗೊಬ್ಬ 3 ಏಪ್ರಿಲ್‌ಗೆ?

  ಸುದೀಪ್ ನಟಿಸಿರುವ ಕೋಟಿಗೊಬ್ಬ 3 ಸಿನಿಮಾದ ಬಿಡುಗಡೆ ಬಗ್ಗೆಯೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಆದರೆ, ಸದ್ಯದ ಲೆಕ್ಕಾಚಾರದ ಪ್ರಕಾರ, ಏಪ್ರಿಲ್ 23 ರಂದು ಕೋಟಿಗೊಬ್ಬ ಚಿತ್ರಮಂದಿರಕ್ಕೆ ಬರುವ ತಯಾರಿಯಲ್ಲಿದೆ.

  ಎಲ್ಲದಕ್ಕೂ ಎರಡು ವಾರ ಬ್ರೇಕ್

  ಎಲ್ಲದಕ್ಕೂ ಎರಡು ವಾರ ಬ್ರೇಕ್

  ನಿರ್ಮಾಪಕರು ಕುಳಿತುಕೊಂಡು ಚರ್ಚೆ ಮಾಡಿದ ಬಳಿಕ ಸ್ಟಾರ್ ನಟರ ಚಿತ್ರಗಳ ರಿಲೀಸ್ ದಿನಾಂಕ ಘೋಷಣೆಯಾಗುತ್ತಿದೆ. ಎಲ್ಲ ಚಿತ್ರಗಳಿಗೆ ಎರಡು ವಾರ ಬ್ರೇಕ್ ಸಿಗುತ್ತಿದೆ. ಮೊದಲೇ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ನಿರ್ಮಾಪಕರು ಪೈಪೋಟಿಗೆ ಬಿದ್ದು ನಷ್ಟ ಅನುಭವಿಸಬಾರದು ಎಂಬ ಉದ್ದೇಶದಿಂದ ಪ್ಲಾನ್ ಮಾಡಿ ರಿಲೀಸ್ ಮಾಡುತ್ತಿದ್ದಾರೆ.

  1st ಡೇ 1st ಶೋ ನಾನು ನಮ್ಮ ಅಣ್ಣನ್ ಜೊತೇನೆ ಸಿನಿಮಾ ನೋಡ್ತಿದ್ದೆ | Filmibeat Kannada
  English summary
  Duniya Vijay Starrer Salaga Movie To Release on April 15 and Shiva Rajkumar Starrer Bhajarangi 2 Movie to Release on May 14.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X