For Quick Alerts
  ALLOW NOTIFICATIONS  
  For Daily Alerts

  ನಿಮ್ಮೂರಿಗೆ ಬರ್ತಿದೆ ದುನಿಯಾ ವಿಜಯ್ 'ಸಲಗ' ಸವಾರಿ!

  |

  ನಟ ದುನಿಯಾ ವಿಜಯ್ ಅಭಿನಯದ ಸಲಗ ಅದ್ದೂರಿ ಯಶಸ್ಸು ಕಂಡು ಸದ್ಯ ಗೆಲುವಿನ ನಗೆ ಬೀರಿದೆ. ಸಲಗ ಸಿನಿಮಾ ಸಾಕಷ್ಟು ನಿರೀಕ್ಷೆಯೊಂದಿಗೆ ಬಂದು ನಿರೀಕ್ಷೆಯ ಮಟ್ಟ ತಲುಪಿ ಯಶಸ್ಸು ಸಾಧಿಸಿದೆ. ಸಲಗ ಸಕ್ಸಸ್ ಕಂಡಿದೆ. ನಟ ದುನಿಯಾ ವಿಜಯ್ ನಿರ್ದೇಶನಕ್ಕೆ ಇಳಿದು ಅಂದು ಕೊಂಡಂತೆಯೇ ಸಿನಿಮಾ ನಿರ್ದೇಶನ ಮಾಡಿ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ದುನಿಯಾ ವಿಜಯ್‌ ಹೆಣೆದ ಕಥೆಯನ್ನು ಹಾಗೆಯೇ ತೆರೆ ಮೇಲೆ ತಂದಿದ್ದಾರೆ. ನಿರ್ದೇಶನಕ್ಕಿಳಿಯಲೇ ಬೇಕೆಂದು ವಿಜಯ್‌ ಪಣತೊಟ್ಟು ಈ ಸಲಗನೊಂದಿಗೆ ಬಂದಿದ್ದಾರೆ. ಸಲಗದ ಮೂಲಕ ವಿಜಯ್ ಒಬ್ಬ ಉತ್ತಮ ನಿರ್ದೇಶಕ ಅಂತಲೂ ಅನಿಸಿಕೊಂಡಿದ್ದಾರೆ. ಹಾಗಾಗಿ ಸಲಗ ತನಗೆ ಸಿಕ್ಕ ಯಶಸ್ಸನ್ನು ಸಂಭ್ರಮಿಸಲು ಮುಂದಾಗಿದೆ. ಹಾಗಾಗಿ ಕರ್ನಾಟಕದಾದ್ಯಂತೆ ಸಲಗ ಸವಾರಿ ಹೊರಟಿದೆ.

  ಸಲಗ ನಿರೀಕ್ಷೆ ಮೀರಿ ಗೆಲುವಿನ ನಗೆ ಬೀರಿದೆ. ಇನ್ನು ಬಾಕ್ಸಾಫೀಸ್ ಕಲೆಕ್ಷನ್‌ನಲ್ಲೂ ಸಲಗ ಜೋರಾಗಿಯೇ ಸದ್ದು ಮಾಡಿದೆ. ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಜೊತೆಗೆ ಇಡೀ ಚಿತ್ರ ತಂಡ ಗೆಲುವಿನ ಖುಷಿಯನ್ನು ಹಂಚಿಕೊಂಡಿತ್ತು. ಖುಷಿಗೆ ಕಾರಣವಾದ ಸಿನಿ ಪ್ರಿಯರನ್ನು ಭೇಟಿ ಮಾಡಲು ಸಲಗ ಚಿತ್ರತಂಡ ಆಯಾ ಊರುಗಳಿಗೆ ಪ್ರಯಾಣ ಬೆಳೆಸಿದೆ. ಇದೇ ಸಲುವಾಗಿ ಆರು ದಿನಗಳ ಕಾಲ ವಿಜಯಯಾತ್ರಯನ್ನು ಚಿತ್ರತಂಡ ಕೈಗೊಂಡಿದೆ.

  ವಿಜಯ ಯಾತ್ರೆ ಹೊರಟ ಸಲಗ ಚಿತ್ರತಂಡ!

  ಸಲಗ ಚಿತ್ರತಂಡ ಕರ್ನಾಟಕದಾದ್ಯಂತ ವಿಜಯೋತ್ಸವವನ್ನು ಆಚರಿಸಲು ನಿರ್ಧರಿಸಿದೆ. ಇದೇ ನವೆಂಬರ್ 1ನೇ ತಾರೀಕಿನಿಂದ ಕರ್ನಾಟಕದಾದ್ಯಂತ ಸಲಗ ಸಕ್ಸಸ್ ಖುಷಿಯನ್ನ ಸಂಭ್ರಮಿಸಲು ಅಡಿಯಿಟ್ಟಿದೆ. ನವೆಂಬರ್ 1 ನೇ ತಾರೀಕಿನಂದು ಮೈಸೂರು, ಮಂಡ್ಯ, ಮದ್ದೂರು, ಚನ್ನಪಟ್ಟಣಕ್ಕೆ ಭೇಟಿ ನೀಡುವ ಯೋಜನೆ ಹಾಕಿಕೊಂಡಿದೆ. ಅಲ್ಲಿನ ಸಿನಿ ಪ್ರೇಕ್ಷಕರೊಂದಿಗೆ ಚಿತ್ರತಂಡ ಮಾತುಕತೆ ನಡೆಸಲಿದೆ. ಅಂತೆಯೇ ನವೆಂಬರ್ 2ರಂದು ಕನಕಪುರ, ಮಾವಳ್ಳಿಗೆ ಭೇಟಿ ನೀಡಲಿದೆ. ಇನ್ನೂ ನವೆಂಬರ್ 4ರಂದು ತುಮಕೂರು, ಚಿತ್ರದುರ್ಗ, ದಾವಣಗೆರೆಗೆ ಸಲಗ ತಂಡ ಹಾಜರಾಗಲಿದೆ. ನಂತರ ನವೆಂಬರ್ ಐದರಂದು ಸಲಗ ತಂಡದ ಪಯಣ ಹುಬ್ಬಳ್ಳಿಯ ಕಡೆಗೆ ಸಾಗಲಿದೆ. ಹುಬ್ಬಳ್ಳಿ, ಗದಗ ಮುಗಿಸಿ ನಂತರ ನವೆಂಬರ್ ಆರನೇ ತಾರೀಕಿನಂದು ಬಳ್ಳಾರಿ ಮತ್ತು ಹೊಸ ಪೇಟೆಗೆ ಭೇಟಿ ನೀಡಿ ಅಲ್ಲಿನ ಸಿನಿಪ್ರೇಕ್ಷಕರೊಂದಿಗೆ ಚಿತ್ರತಂಡ ಖುಷಿಯನ್ನು ಹಂಚಿಕೊಳ್ಳಲಿದೆ.

  ಆಯಾ ಊರುಗಳ ಸಲಗ ರಿಲೀಸ್‌ ಆಗಿರುವ ಪ್ರಮುಖ ಚಿತ್ರಮಂದಿರಗಳಿಗೆ ಸಲಗ ಟೀಮ್‌ ಭೇಟಿ ನೀಡಲಿದೆ. ಜೊತೆಗೆ ಅಲ್ಲಿನ ಪ್ರೇಕ್ಷಕರೊಂದಿಗೆ ಇಡೀ ಚಿತ್ರತಂಡ ಸಿನಿಮಾ ನೋಡಲಿದೆ. ದುನಿಯಾ ವಿಜಯ್ ಮತ್ತು ಚಿತ್ರತಂಡ ಪ್ರೇಕ್ಷಕರನ್ನು ಕುರಿತು ಸಿನಿಮಾದ ಬಗ್ಗೆ ಒಂದಷ್ಟು ಮಾತುಕತೆಯನ್ನು ನಡೆಸಲಿದೆ.

  Salaga Movie Team Plans To Celebrate Success In several Districts

  ಸಲಗ ಚಿತ್ರತಂಡ ಅಂದುಕೊಂಡಂತೆಯೇ ಯಶಸ್ಸಿನ ಕಂಡಿರುವ ಕಾರಣದಿಂದ ಈ ವಿಜಯಯಾತ್ರೆಯನ್ನು ಆಚರಿಸಲು ಚಿತ್ರತಂಡ ನಿರ್ಧರಿಸಿದೆ. ಇದೀಗ ಪ್ರತಿ ಊರುಗಳಿಗೆ ಭೇಟಿ ನೀಡುವ ಮೂಲಕ ಸಲಗ ಮತ್ತಷ್ಟು ಪ್ರೇಕ್ಷಕರಿಗೆ ಹತ್ತಿರವಾಗುವ ಪ್ರಯತ್ನ ಮಾಡುತ್ತಿದೆ. ಈಗ ಸಲಗನ ಸವಾರಿ ನಿಮ್ಮ ಊರಿಗೆ ಬರುತ್ತಿದೆ. ನಿಮಗೂ ಸಲಗ ತಂಡವನ್ನು ಭೇಟಿ ಮಾಡುವ ಆಸೆ ಇದ್ದರೆ, ನವೆಂಬರ್ ಒಂದರಿಂದ ಆರನೇ ತಾರೀಕಿನವರೆಗೆ ನೀವೂ ಸಿದ್ದವಾಗಿರಿ. ಚಿತ್ರದ ಬಗೆಗಿನ ನಿಮ್ಮ ಅನಿಸಿಕೆಯನ್ನೂ ಚಿತ್ರತಂಡದೊಂದಿಗೆ ಹಂಚಿಕೊಳ್ಳಬಹುದು.

  English summary
  Actor Duniya Vijya Going Across Karnataka To meet fans And Celebrate Salaga Success

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X