For Quick Alerts
  ALLOW NOTIFICATIONS  
  For Daily Alerts

  ಏಪ್ರಿಲ್ 10 ರಂದು ಹೊಸಪೇಟೆಯಲ್ಲಿ 'ಸಲಗ' ಸಂಭ್ರಮ

  |

  ದುನಿಯಾ ವಿಜಯ್ ನಟಿಸಿ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಸಲಗ ಸಿನಿಮಾ ಏಪ್ರಿಲ್ 15 ರಂದು ತೆರೆಗೆ ಬರಲು ಸಜ್ಜಾಗಿದೆ. ಈಗಾಗಲೇ ಚಿತ್ರದ ಪ್ರಚಾರ ಆರಂಭಿಸಿರುವ ಸಲಗ ಬಿಡುಗಡೆಗೂ ಮುಂಚೆ ಹೊಸಪೇಟೆಯಲ್ಲಿ ಸಂಭ್ರಮಿಸಲು ತಯಾರಿ ನಡೆಸಿದೆ.

  ಹೌದು, ಏಪ್ರಿಲ್ 10 ರಂದು ಸಲಗ ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮ ಆಯೋಜಿಸಲು ಚಿತ್ರತಂಡ ನಿರ್ಧರಿಸಿದ್ದು, ಹೊಸಪೇಟೆಯಲ್ಲಿ ಕಾರ್ಯಕ್ರಮ ನಿಗದಿಯಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

  ಹಾಡುಗಳು ಹಾಗೂ ಟೀಸರ್ ಮೂಲಕ ಸಲಗ ಚಿತ್ರ ಹೆಚ್ಚು ಸದ್ದು ಮಾಡ್ತಿದೆ. ಅದರಲ್ಲೂ 'ಸೂರಿ ಅಣ್ಣ...' ಸಾಂಗ್ ಹಾಗೂ ಸಲಗ ಶೀರ್ಷಿಕೆ ಗೀತೆ ಬಹಳ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದೆ.

  ಚಿತ್ರಮಂದಿರದಲ್ಲಿ ಮತ್ತೆ 50 ಪರ್ಸೆಂಟ್ ಪ್ರಸ್ತಾವನೆಗೆ ದುನಿಯಾ ವಿಜಯ್ ವಿರೋಧಚಿತ್ರಮಂದಿರದಲ್ಲಿ ಮತ್ತೆ 50 ಪರ್ಸೆಂಟ್ ಪ್ರಸ್ತಾವನೆಗೆ ದುನಿಯಾ ವಿಜಯ್ ವಿರೋಧ

  ಮೊದಲ ಬಾರಿಗೆ ದುನಿಯಾ ವಿಜಯ್ ನಿರ್ದೇಶನ ಮಾಡಿರುವ ಕಾರಣ ಸಲಗ ಚಿತ್ರ ಭಾರಿ ನಿರೀಕ್ಷೆ ಮೂಡಿಸಿದೆ. ಕೆಪಿ ಶ್ರೀಕಾಂತ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ.

  ದುನಿಯಾ ವಿಜಯ್ ನಾಯಕರಾಗಿ ನಟಿಸಿರುವ ಈ ಸಿನಿಮಾದಲ್ಲಿ ಸಂಜನಾ ಆನಂದ್ ಜೋಡಿಯಾಗಿದ್ದಾರೆ. ಅಂಡರ್‌ವರ್ಲ್ಡ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಡಾಲಿ ಧನಂಜಯ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ, ದುನಿಯಾ ವಿಜಯ್ ಮತ್ತು ಧನಂಜಯ್ ಕಾಂಬಿನೇಷನ್ ಹೆಚ್ಚು ಗಮನ ಸೆಳೆದಿದೆ.

  ಶಿವಮೊಗ್ಗದಲ್ಲಿ 'ಸಲಗ'ದ ಹವಾ | Duniya Vijay | Filmibeat Kannada

  ಅಂದ್ಹಾಗೆ, ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ಏಪ್ರಿಲ್ 23ಕ್ಕೆ ತೆರೆಗೆ ಬರಲಿದೆ. ಈ ಹಿನ್ನೆಲೆ ಏಪ್ರಿಲ್ 20 ರಂದು ಚಿತ್ರದುರ್ಗದಲ್ಲಿ ಕೋಟಿಗೊಬ್ಬ 3 ಪ್ರಿ-ರಿಲೀಸ್ ಕಾರ್ಯಕ್ರಮ ನಡೆಯಲಿದೆ.

  English summary
  Duniya Vijay First time Directional Salaga movie pre-release event likely in Hospet on April 10.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X