'ಸೂರಿ ಅಣ್ಣ' ಸಾಂಗ್ ರಿಲೀಸ್: ಎಲ್ಲೆಲ್ಲೂ ಟ್ರೆಂಡಿಂಗ್ 'ಸಲಗ' ಹಾಡು
Recommended Video
ನಿರೀಕ್ಷೆ ಮೂಡಿಸಿದ್ದ ಸೂರಿ ಅಣ್ಣ ಹಾಡು ಕೊನೆಗೂ ಬಿಡುಗಡೆಯಾಗಿದೆ. ದುನಿಯಾ ವಿಜಯ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಸಲಗ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಎಲ್ಲೆ ನೋಡಿದ್ರು ಸೂರಿ ಅಣ್ಣ ಜಪ ಮಾಡ್ತಿದ್ದಾರೆ.
ಹ್ಯಾಟ್ರಿಕ್ ಹೀರೋ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಸೂರಿ ಅಣ್ಣ ಲಿರಿಕಲ್ ವಿಡಿಯೋ ಹಾಡನ್ನ ಅದ್ಧೂರಿಯಾಗಿ ಬಿಡುಗಡೆ ಮಾಡಿದ್ದಾರೆ. A2 ಆಡಿಯೋ ಮೂಲಕ ಸಲಗ ಹಾಡುಗಳು ಜನರ ಮುಂದೆ ಬರ್ತಿದ್ದು, ಮೊದಲ ಹಾಡು ಸೆನ್ಸೇಷನ್ ಹುಟ್ಟುಹಾಕುತ್ತಿದೆ.
ಈ ಹಿಂದೆ ಟಗರು ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿ ಜನರ ಮನಗೆದ್ದಿದ್ದ ಚರಣ್ ರಾಜ್ ಸಲಗ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಟಗರು ಸಿನಿಮಾದ ಶೀರ್ಷಿಕೆ ಹಾಡಿನಂತೆ ಸೂರಿ ಅಣ್ಣ ಹಾಡನ್ನು ಕಂಪೋಸ್ ಮಾಡಿದ್ದು, ಈ ಹಾಡು ದೊಡ್ಡ ಹಿಟ್ ಆಗಲಿದೆ ಎಂದು ಶಿವಣ್ಣ ಭವಿಷ್ಯ ನುಡಿದಿದ್ದಾರೆ.

ವಿಶೇಷ ಅಂದ್ರೆ ದುನಿಯಾ ವಿಜಯ್ ಮತ್ತು ಕಿರಣ್ ಈ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ಟಗರು ಹಾಡು ಹಾಡಿದ್ದ ಆಂಟೋನಿ ದಾಸ್ ಸೂರಿ ಅಣ್ಣನಿಗೆ ಧ್ವನಿಯಾಗಿರುವುದು ಮತ್ತಷ್ಟು ವಿಶೇಷವೆನಿಸಿದೆ.
ವರ್ಷದ ಆರಂಭದಲ್ಲಿ ಸಲಗ ಸಿನಿಮಾದ ಮೊದಲ ಹಾಡು ಸದ್ದು ಮಾಡ್ತಿದ್ದು, 2020ರ ದಿ ಬೆಸ್ಟ್ ಸಾಂಗ್ ಎನಿಸಿಕೊಳ್ಳಬಹುದು ಎಂಬ ಮಾತುಗಳು ಕೇಳಿಬರ್ತಿದೆ. ಒಟ್ಟು ಐದು ಹಾಡುಗಳಿದ್ದು, ಒಂದೊಂದೆ ಹಾಡುಗಳು ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ.

ಈ ಹಿಂದೆ ಟಗರು ಚಿತ್ರ ನಿರ್ಮಿಸಿದ್ದ ಕೆ.ಪಿ ಶ್ರೀಕಾಂತ್ ಸಲಗ ಚಿತ್ರಕ್ಕೂ ಬಂಡವಾಳ ಹಾಕಿದ್ದಾರೆ. ತಾಂತ್ರಿಕವಾಗಿ ಟಗರು ಚಿತ್ರತಂಡವೇ ಇಲ್ಲಿಯೂ ಮುಂದುವರಿದಿದೆ. ದುನಿಯಾ ವಿಜಯ್ ನಾಯಕನಾಗಿದ್ದು, ಧನಂಜಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಜನಾ ಆನಂದ್ ನಾಯಕಿಯಾಗಿದ್ದು, ಕಾಕ್ರೋಚ್ ಖ್ಯಾತಿಯ ಸುಧೀ ಕೂಡ ನಟಿಸಿದ್ದಾರೆ.


Click it and Unblock the Notifications











