»   » 'ಕಿರಿಕ್ ಪಾರ್ಟಿ' ಗ್ಯಾಂಗ್ ಸೀನಿಯರ್ ಗೆ ಸಿಕ್ಕಿತು ಮತ್ತೊಂದು ದೊಡ್ಡ ಅವಕಾಶ

'ಕಿರಿಕ್ ಪಾರ್ಟಿ' ಗ್ಯಾಂಗ್ ಸೀನಿಯರ್ ಗೆ ಸಿಕ್ಕಿತು ಮತ್ತೊಂದು ದೊಡ್ಡ ಅವಕಾಶ

Posted By:
Subscribe to Filmibeat Kannada

'ಕಿರಿಕ್ ಪಾರ್ಟಿ' ಸಿನಿಮಾ ನೋಡಿದವರಿಗೆ ಆ ಸೀರಿಯರ್ ಪಾತ್ರವನ್ನು ಮರೆಯುವುದಕ್ಕೆ ಸಾಧ್ಯ ಇಲ್ಲ ಬಿಡಿ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅವರ ಗ್ಯಾಂಗ್ ಗೆ ಸಿಕ್ಕಾಪಟ್ಟೆ ಕಿರಿಕ್ ಮಾಡಿದ್ದ ಈ ಸೀನಿಯರ್ ಎಲ್ಲರಿಗೂ ತುಂಬ ಇಷ್ಟ ಆಗಿದ್ದರು. ಆದರೆ ಇದೀಗ ಈ ನಟನಿಗೆ ಮತ್ತೊಂದು ಸಿನಿಮಾ ಅವಕಾಶ ಸಿಕ್ಕಿದೆ.

'ವಾಸು ನನ್ ಪಕ್ಕ ಕಮರ್ಶಿಯಲ್' ಚಿತ್ರದಲ್ಲಿ ಈಗ 'ಕಿರಿಕ್ ಪಾರ್ಟಿ' ಸೀನಿಯರ್ ಸಲ್ಮಾನ್ ಅಹಮದ್ ನಟಿಸುತ್ತಿದ್ದಾರೆ. ತಮ್ಮ ವಿಭಿನ್ನ ಮ್ಯಾನರಿಸಂ ಮೂಲಕ ಎಲ್ಲರನ್ನು ನಗಿಸುವ ಈ ನಟ ಈಗ ಎರಡನೇ ಸಿನಿಮಾದಲ್ಲಿಯೂ ಮೋಡಿ ಮಾಡುವುದಕ್ಕೆ ಮುಂದಾಗಿದ್ದಾರೆ.

Salman Ahamed will playing a important role in 'Vasu Naan Pakka Commercial'

ಅಂದಹಾಗೆ, 'ವಾಸು ನನ್ ಪಕ್ಕ ಕಮರ್ಶಿಯಲ್' ಸಿನಿಮಾ ಅನೀಶ್ ನಟನೆಯ ಚಿತ್ರವಾಗಿದೆ. ಸದ್ಯ ಈ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಇದರಲ್ಲಿ ನಟ ಸಲ್ಮಾನ್ ಅಹಮದ್ ಕೂಡ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅನೀಶ್ ಗೆಳೆಯನ ಪಾತ್ರದಲ್ಲಿ ಸಲ್ಮಾನ್ ನಟಿಸಿದ್ದಾರೆ.

English summary
'Kirik Party' fame Salman Ahamed will playing a important role in 'Vasu Naan Pakka Commercial' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada