ಸುದೀಪ್ ಜೊತೆ ಕನ್ನಡದಲ್ಲೂ ಮಾತನಾಡಲಿದ್ದಾರೆ ಸಲ್ಮಾನ್ ಖಾನ್

Recommended Video

ಕನ್ನಡದಲ್ಲಿ ಮಾತನಾಡಲು ಸಲ್ಮಾನ್ ಖಾನ್ ರೆಡಿ..! |Sudeep

ಬಾಲಿವುಡ್ ನಟ ಸಲ್ಮಾನ್ ಖಾನ್ ಈ ಬಾರಿ ಕನ್ನಡ ಚಿತ್ರಾಭಿಮಾನಿಗಳ ಮುಂದೆ ಕನ್ನಡದಲ್ಲೆ ಮಾತನಾಡಲಿದ್ದಾರೆ. ಮೊದಲ ಬಾರಿಗೆ ಸಲ್ಲುಮೀಯಾ ಕನ್ನಡದಲ್ಲಿ ಮಾತನಾಡುವುದನ್ನು ನೋಡಲು ಅಭಿಮಾನಿಗಳು ಈಗಾಗಲೆ ಕಾತುರರಾಗಿದ್ದಾರೆ.

ಹೌದು, ಸಲ್ಮಾಖ್ ಮತ್ತು ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷೆಯ ದಬಾಂಗ್-3 ಕನ್ನಡದಲ್ಲೂ ಡಬ್ ಆಗುತ್ತಿದೆ. ಈ ಮೂಲಕ ಸಲ್ಮಾನ್ ಖಾನ್ ಕನ್ನಡಕ್ಕೂ ಎಂಟ್ರಿ ಕೊಡುತ್ತಿದ್ದಾರೆ. ದಬಾಂಗ್ ನಲ್ಲಿ ಚುಲ್ ಬುಲ್ ಪಾಂಡೆ ಪಾತ್ರದ ಮೂಲಕ ಖ್ಯಾತಿಗಳಿಸಿರುವ ಸಲ್ಮಾನ್ ಮೊದಲ ಬಾರಿಗೆ ಕನ್ನಡ ಮಾತನಾಡುತ್ತಿದ್ದಾರೆ.

ಸಲ್ಮಾನ್ ಬಾಯಲ್ಲಿ ಕನ್ನಡ

ಸಲ್ಮಾನ್ ಬಾಯಲ್ಲಿ ಕನ್ನಡ

ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷೆಯ ದಬಾಂಗ್-3 ಕನ್ನಡಕ್ಕೂ ಡಬ್ ಆಗಲಿದೆ. ಹಿಂದಿಯ ಸ್ಟಾರ್ ನಟನ ಸಿನಿಮಾವೊಂದು ಇಷ್ಟು ದೊಡ್ಡ ಮಟ್ಟಕ್ಕೆ ಕನ್ನಡದಲ್ಲಿ ಡಬ್ ಆಗಿ ರಿಲೀಸ್ ಆಗುತ್ತಿರುವುದು ಇದೆ ಮೊದಲು. ದಬಾಂಗ್-3 ಚಿತ್ರದ ನಿರ್ಮಾಪಕರಾದ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಕನ್ನಡಕ್ಕೆ ಡಬ್ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ದಾರಂತೆ.

ಸಲ್ಮಾನ್ ಗೆ ಸುದೀಪ್ ವಿಲನ್

ಸಲ್ಮಾನ್ ಗೆ ಸುದೀಪ್ ವಿಲನ್

ಈ ಚಿತ್ರದಲ್ಲಿ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಗೆ ಕನ್ನಡದ ಮಾಣಿಕ್ಯ ಕಿಚ್ಚ ಸುದೀಪ್ ವಿಲನ್ ಆಗಿ ಕಾಡಿದ್ದಾರೆ. ಮೊದಲ ಬಾರಿಗೆ ಸುದೀಪ್, ಸಲ್ಮಾನ್ ಖಾನ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಈಗಾಗಲೆ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರದಲ್ಲಿ ಸುದೀಪ್ ಸಿಕಂದರ್ ಭಾರದ್ವಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕನ್ನಡದಲ್ಲಿ ಬರ್ತಿದೆ ಸೈರಾ ನರಸಿಂಹ ರೆಡ್ಡಿ

ಕನ್ನಡದಲ್ಲಿ ಬರ್ತಿದೆ ಸೈರಾ ನರಸಿಂಹ ರೆಡ್ಡಿ

ಸುದೀಪ್ ಅಭಿನಯದ ತೆಲುಗು ಸಿನಿಮಾ ಸೈರಾ ನರಸಿಂಹ ರೆಡ್ಡಿ ಸಿನಿಮಾ ಸಿನಿಮಾ ಕನ್ನಡದಲ್ಲಿ ಡಬ್ ಆಗುತ್ತಿದೆ. ಸೈರಾ ಸಿನಿಮಾ ಐದು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಹಿಂದಿ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲು ರಿಲೀಸ್ ಆಗುತ್ತಿದೆ. ಸೈರಾ ಚಿತ್ರದ ಕನ್ನಡ ವರ್ಷನ್ ಗೆ ಸುದೀಪ್ ಪಾತ್ರಕ್ಕೆ ಸುದೀಪ್ ಅವರೆ ಡಬ್ ಮಾಡಲಿದ್ದಾರಂತೆ.

ಡಿಸೆಂಬರ್ ಗೆ ದಬಾಂಗ್-3 ರಿಲೀಸ್

ಡಿಸೆಂಬರ್ ಗೆ ದಬಾಂಗ್-3 ರಿಲೀಸ್

ಬಾಲಿವುಡ್ ನ ಬಹು ನಿರೀಕ್ಷೆಯ ಸಿರೀಸ್ 'ದಬಾಂಗ್-3' ಡಿಸೆಂಬರ್ ನಲ್ಲಿ ತೆರೆಗೆ ಬರುತ್ತಿದೆ. ವಿಶೇಷ ಅಂದ್ರೆ ಹಿಂದಿ ಮತ್ತು ಕನ್ನಡ ಎರಡರಲ್ಲೂ ಏಕಕಾಲಕ್ಕೆ ತೆರೆಗೆ ಬರುತ್ತಿದೆ. ಕನ್ನಡ ವರ್ಷನ್ ದಬಾಂಗ್-3 ನಲ್ಲಿ ಸುದೀಪ್ ಪಾರ್ಟ್ ಗೆ ಅವರೆ ವಾಯ್ಸ್ ನೀಡುತ್ತಿದ್ದಾರಂತೆ. ಇತ್ತೀಚಿನ ದಿನಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಏಕಕಾಲಕ್ಕೆ ಬಹು ಭಾಷೆಯಲ್ಲಿ ತೆರೆಗೆ ಬರುವ ಟ್ರೆಂಡ್ ಹೆಚ್ಚಾಗುತ್ತಿದೆ.

More from Filmibeat

English summary
Bollywood actor Salman Khan and Sudeep starrer Dabangg-3 dubbed in Kannada. Sudeep is playing villain role in this film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X