For Quick Alerts
  ALLOW NOTIFICATIONS  
  For Daily Alerts

  ಕರ್ನಾಟಕದ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ 'ದಬಾಂಗ್-3' ರಿಲೀಸ್

  |

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷೆಯ ಸಿನಿಮಾ ರಿಲೀಸ್ ಗೆ ಸಿದ್ಧವಾಗುತ್ತಿದೆ. ಮುಂದಿನ ತಿಂಗಳು 20ಕ್ಕೆ 'ದಬಾಂಗ್-3' ಸಿನಿಮಾ ತೆರೆಗೆ ಬರುತ್ತಿದೆ. ವಿಶೇಷ ಅಂದರೆ 'ದಬಾಂಗ್-3' ದಕ್ಷಿಣ ಭಾರತೀಯ ಮೂರು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಮೊದಲ ಬಾರಿಗೆ ಸಲ್ಮಾನ್ ಖಾನ್ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಕನ್ನಡಕ್ಕೆ ಡಬ್ ಆಗಿ ತೆರೆಗೆ ಬರುತ್ತಿದೆ.

  ಮೊದಲ ಬಾರಿಗೆ ಸಲ್ಮಾನ್ ಕನ್ನಡದಲ್ಲಿ ಅಬ್ಬರಿಸುತ್ತಿದ್ದಾರೆ. ಸಲ್ಮಾನ್ ಕನ್ನಡ ಮಾತನಾಡುವುದನ್ನು ಕೇಳಲು ಚಿತ್ತಾಭಿಮಾನಿಗಳು ಕಾತರರಾಗಿದ್ದಾರೆ. 'ದಂಬಾಗ್-3' ಕನ್ನಡ ವರ್ಷನ್ ಕರ್ನಾಟಕದಲ್ಲಿ ಬರೋಬ್ಬರಿ 250 ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ. ಮೊದಲ ಬಾರಿಗೆ ಡಬ್ಬಿಂಗ್ ಸಿನಿಮಾವೊಂದು ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ. ದಬಾಂಗ್-3 ಕನ್ನಡ ವಿತರಣೆ ಹಕ್ಕನ್ನು ವಿತರಕ ಜಾಕ್ ಮಂಜು ಪಡೆದುಕೊಂಡಿದ್ದಾರೆ.

  ಕಿಚ್ಚ ಸುದೀಪ್ ಡೈರೆಕ್ಟರ್ ಕ್ಯಾಪ್ ತೊಡುತ್ತಿರುವುದು 'ಈ' ಚಿತ್ರಕ್ಕಾ.?ಕಿಚ್ಚ ಸುದೀಪ್ ಡೈರೆಕ್ಟರ್ ಕ್ಯಾಪ್ ತೊಡುತ್ತಿರುವುದು 'ಈ' ಚಿತ್ರಕ್ಕಾ.?

  ಇನ್ನೂ 'ದಬಾಂಗ್-3' ದೇಶದಾದ್ಯಂತ ಸುಮಾರು 5400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುವ ಮೂಲಕ ದೊಡ್ಡ ಮಟ್ಟಕ್ಕೆ ಬಿಡುಗಡೆಯಾಗುತ್ತಿದೆ. ಸಲ್ಮಾನ್ ಖಾನ್ 'ದಬಾಂಗ್-3' ಸಿನಿಮಾ ಕನ್ನಡ ಚಿತ್ರಾಭಿಮಾನಿಗಳಿಗೆ ತುಂಬಾ ವಿಶೇಷ. ಕಿಚ್ಚ ಸುದೀಪ್ ಖಳ ನಟನಾಗಿ ಮಿಂಚಿದ್ದಾರೆ. ಹಾಗಾಗಿ ಚಿತ್ರದ ಮೇಲಿನ ನಿರೀಕ್ಷೆ ಇಮ್ಮಡಿಯಾಗಿದೆ.

  ಇನ್ನು ವಿಶೇಷ ಅಂದರೆ ದಬಾಂಗ್-3 ಕನ್ನಡ ಅವತರಣಿಕೆಗೆ ಸಲ್ಮಾನ್ ಖಾನ್ ಅವರೆ ಡಬ್ ಮಾಡುತ್ತಿದ್ದಾರಂತೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ನಲ್ಲೂ ಸಲ್ಮಾನ್ ಖಾನ್ ಅವರೆ ಕನ್ನಡ ಮಾತನಾಡಿದ್ದರು. ಅದರಂತೆ ಸಿನಿಮಾ ಪೂರ್ತಿ ಸಲ್ಮಾನ್ ಅವರ ಧ್ವನಿಯೆ ಇರಲಿದೆಯಂತೆ. ನಿಧಾನವಾದರು ಜಾಗರೂಕತೆಯಿಂದ ಕನ್ನಡದಲ್ಲಿ ಡಬ್ಬಿಂಗ್ ಮಾಡುತ್ತಿದ್ದಾರೆ.

  English summary
  Bollywood actor Salman Khan and Sudeep starrer Dabanng-3 Kannada version released in 250 theatres.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X