'ಪೈಲ್ವಾನ್' ಸಿನಿಮಾ ವೀಕ್ಷಿಸಿದ ಸಲ್ಮಾನ್ ಖಾನ್ ಕುಟುಂಬ

'ಪೈಲ್ವಾನ್' ಸಿನಿಮಾವನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ನೋಡಲಿದ್ದಾರೆ ಎಂದು ಸುದೀಪ್ ಕಳೆದ ವಾರ ತಿಳಿಸಿದ್ದರು. ಇದೀಗ ಸಲ್ಮಾನ್ ಮಾತ್ರವಲ್ಲದೆ, ಅವರ ಕುಟುಂಬ ಚಿತ್ರವನ್ನು ವೀಕ್ಷಿಸಿದೆ.

ಸಲ್ಮಾನ್ ಖಾನ್, ಅವರ ತಂದೆ ಸಲೀಮ್ ಖಾನ್, ಸಹೋದರ ಸೊಹೈಲ್ ಖಾನ್ 'ಪೈಲ್ವಾನ್' ಸಿನಿಮಾವನ್ನು ನೋಡಿದ್ದಾರೆ. ನಿನ್ನೆ (ಸಪ್ಟೆಂಬರ್ 14) ಮುಂಬೈನಲ್ಲಿ ಇವರಿಗಾಗಿ ವಿಶೇಷ ಪ್ರದರ್ಶನವನ್ನು ಏರ್ಪಾಡು ಮಾಡಲಾಗಿತ್ತು. ಹಿಂದಿ ವರ್ಷನ್ ಚಿತ್ರ ನೋಡಿದ ಸಲ್ಮಾನ್ ಕುಟುಂಬ ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದರು. ಸುದೀಪ್ ಬಳಿ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಸ್ವತಃ ಸಲ್ಮಾನ್ ಖಾನ್ ಅವರೇ ಸಿನಿಮಾವನ್ನು ನೋಡುವ ಇಂಗಿತವನ್ನು ಟ್ವಿಟ್ಟರ್ ಮೂಲಕ ತಿಳಿಸಿದ್ದರು. ಹೀಗಾಗಿ ಅವರಿಗಾಗಿ ವಿಶೇಷ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಸುದೀಪ್ ನಿನ್ನೆ ಮುಂಬೈಗೆ ಹೋಗಿ ಸಲ್ಮಾನ್ ಕುಟುಂಬಕ್ಕೆ ಸಿನಿಮಾ ತೋರಿಸಿದ್ದಾರೆ.

Salman Khan Family Watched Pailwaan Movie

'ದಬಾಂಗ್ 3' ಸಿನಿಮಾದಿಂದ ಸಲ್ಮಾನ್ ಹಾಗೂ ಸುದೀಪ್ ಸ್ನೇಹ ಹೆಚ್ಚಾಗಿದೆ. ಈ ಚಿತ್ರದ ಬಹು ಮುಖ್ಯ ಪಾತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ. ಪ್ರಭುದೇವ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ.

Salman Khan Family Watched Pailwaan Movie

ಸಲ್ಮಾನ್ ಖಾನ್ ನಂತರ ಮೆಗಾ ಸ್ಟಾರ್ ಚಿರಂಜೀವಿ ಕೂಡ ಸಿನಿಮಾ ನೋಡುವ ಸಾಧ್ಯತೆ ಇದೆ. ಚಿರಂಜೀವಿ ಜೊತೆಗೆ ಸುದೀಪ್ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Bollywood actor Salman Khan family watched Sudeep's 'Pailwaan' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X