For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಗೆ ಸಿಕ್ತು ಜಾಮೀನು: ಇಂದೇ ರಿಲೀಸ್ ಸಾಧ್ಯತೆ.!

  By Bharath Kumar
  |

  ಕಷ್ಣಮೃಗ ಬೇಟೆ ಪ್ರಕರಣದಲ್ಲಿ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗೆ ಜೋಧ್ ಪುರ್ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

  50 ಸಾವಿರ ಬಾಂಡ್ ನೀಡಬೇಕು ಎಂದು ಷರತ್ತು ವಿಧಿಸಿರುವ ನ್ಯಾಯಾಲಯ ಸಲ್ಮಾನ್ ಖಾನ್ ಅವರಿಗೆ ಬಿಡುಗಡೆ ಭಾಗ್ಯ ಕಲ್ಪಿಸಿದೆ. ಸಲ್ಲು ಜಾಮೀನು ಸಿಕ್ಕ ಬೆನ್ನಲ್ಲೆ ಬಾಲಿವುಡ್ ನಿರ್ಮಾಪಕರು ಹಾಗೂ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

  ವಿಚಾರಣೆ ವೇಳೆ, ಸಲ್ಮಾನ್‌ ಪರ ವಕೀಲರು, 1998ರ ಪ್ರಕರಣದಲ್ಲಿಯೂ ಅವರು ಶಸ್ತ್ರಾಸ್ತ್ರ ಬಳಸಿದ್ದಕ್ಕೆ ಯಾವುದೇ ಪುರಾವೆಯಿಲ್ಲ. ತನಿಖೆಯಲ್ಲಿ ಸಾಕಷ್ಟು ಲೋಪಗಳಾಗಿವೆ. ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಗಳು ನಂಬುವಂತೆ ಇಲ್ಲ ಎಂದು ವಾದಿಸಿದ್ದರು. ಇದಕ್ಕೆ ಮನ್ನಣೆ ನೀಡಿರುವ ನ್ಯಾಯಾಲಯ ಜಾಮೀನು ನೀಡಿದೆ. ಆದ್ರೆ, ಬಿಷ್ಣೋಯಾ ಸಮುದಾಯ ಮತ್ತೆ ಮೇಲ್ಮನವಿ ಸಲ್ಲಿಸುವ ಅವಕಾಶ ಇದೆ.

  ಸಲ್ಮಾನ್ ಖಾನ್ ಜೈಲು ಸೇರಿದ್ದಕ್ಕೆ ಅತೀವ ಸಂತಸಗೊಂಡ ನಟಿ.!ಸಲ್ಮಾನ್ ಖಾನ್ ಜೈಲು ಸೇರಿದ್ದಕ್ಕೆ ಅತೀವ ಸಂತಸಗೊಂಡ ನಟಿ.!

  ಇನ್ನು ನ್ಯಾಯಾಲಯ ನೀಡಿರುವ ಅದೇಶದ ಪ್ರತಿಯನ್ನ ಸಲ್ಮಾನ್ ಖಾನ್ ಪರ ವಕೀಲರು ಸ್ವೀಕರಿಸಿ, ಇಂದೇ ಜೋಧ್ ಪುರ್ ಸೆಂಟ್ರಲ್ ಜೈಲಿನಲ್ಲಿ ನೀಡಲಿದ್ದಾರೆ. ನಂತರ ಅಲ್ಲಿ ಕೆಲವು ಕಾನೂನು ಕ್ರಮಗಳು ನಡೆದ ನಂತರವೇ ಸಲ್ಲು ಜೈಲಿನಿಂದ ಹೊರಬರಲಿದ್ದಾರೆ.

  ಸಲ್ಮಾನ್ ಗೆ ಜಾಮೀನು ಸಿಕ್ಕಿಲ್ಲ ಅಂದ್ರೆ 800 ಕೋಟಿ ನಷ್ಟ.! ಎಲ್ಲಿಂದ ಎಷ್ಟು ಕೋಟಿ.?ಸಲ್ಮಾನ್ ಗೆ ಜಾಮೀನು ಸಿಕ್ಕಿಲ್ಲ ಅಂದ್ರೆ 800 ಕೋಟಿ ನಷ್ಟ.! ಎಲ್ಲಿಂದ ಎಷ್ಟು ಕೋಟಿ.?

  1998ರಲ್ಲಿ ರಾಜಸ್ಥಾನದ ಜೋಧಪುರ ಬಳಿ ಕೃಷ್ಣ ಮೃಗಗಳ ಬೇಟೆ ಪ್ರಕರಣಕ್ಕೆ ಸಂಬಂಧಿಸಿ, ಜೋಧ್ ಪುರ ನ್ಯಾಯಾಲಯ, ಗುರುವಾರ ಖಾನ್‌ ಗೆ 5 ವರ್ಷಗಳ ಜೈಲು ಹಾಗೂ 10,000 ದಂಡ ವಿಧಿಸಿತ್ತು. ತೀರ್ಪಿನ ಬೆನ್ನಲ್ಲೇ ಅವರನ್ನು ಜೈಲಿಗೆ ರವಾನಿಸಲಾಗಿತ್ತು.

  English summary
  Bollywood super star Salman Khan has been granted bail by Jodhpur Court in 1998 Blackbuck poaching Case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X