ಜೀವನದಿ ಕಾವೇರಿ ಸೇರಿದಂತೆ ದೇಶದ ನದಿಗಳನ್ನು ಉಳಿಸಿ ಎಂದ ಸಲ್ಮಾನ್ ಖಾನ್
ದೇಶದ ನದಿಗಳನ್ನು ಉಳಿಸಿ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಕರೆ ಕೊಟ್ಟಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಾವು ಮಾತನಾಡಿರುವ ಸಣ್ಣ ವಿಡಿಯೋದ ಮೂಲಕ ಸಲ್ಮಾನ್ ನದಿಗಳ ಬಗ್ಗೆ ಅರಿವು ಮೂಡಿಸಿದ್ದಾರೆ.
''ದೇಶದ ನದಿಗಳಾದ ಕಾವೇರಿ, ಕೃಷ್ಣ, ಗಂಗಾ, ನರ್ಮದಾ ಇಂತಹ ನದಿಗಳು ನಮ್ಮನ್ನು ಉತ್ತಮವಾಗಿ ನೋಡಿಕೊಳ್ಳುತ್ತಿದೆ. ಆದರೆ ಇತ್ತೀಚಿಗೆ ಅವು ಮಾನವನ ಚಟುವಟಿಕೆಗಳಿಂದ ಬತ್ತಿ ಹೋಗುತ್ತಿದೆ. ನದಿಗಳು ಇಲ್ಲದೆ ನಾವು ಇಲ್ಲ. ಅದನ್ನು ಎಲ್ಲರೂ ಕಾಪಾಡಬೇಕಿದೆ'' ಅಂತ ಹೇಳಿದ್ದಾರೆ.

ಈ ಕುರಿತು ಆದ್ಯಾತ್ಮ ಗುರುಗಳಾದ ಜಗ್ಗಿ ವಾಸುದೇವ ನೇತೃತ್ವದಲ್ಲಿ ದೊಡ್ಡ ಮಟ್ಟದಲ್ಲಿ ಅಭಿಯಾನ ಶುರುವಾಗಿದ್ದು, ಸಲ್ಮಾನ್ ಖಾನ್ ಕೂಡ ಅದಕ್ಕೆ ತಮ್ಮ ಸಾಥ್ ನೀಡಿದ್ದಾರೆ. 'ದೇಶದ ನದಿಗಳನ್ನು ಉಳಿಸುವುದು ನಮ್ಮ ಜವಾಬ್ದಾರಿ' ಅಂತ ಸಲ್ಮಾನ್ ಅಭಿಮಾನಿಗಳಿಗೆ ತಿಳಿಸಿದ್ದಾರೆ.
More from Filmibeat
English summary
Bollywood actor Salman Khan is supporting rally for rivers campaign.


Click it and Unblock the Notifications











