'ಬಿಗ್ ಬಾಸ್' ಹೊಸ ಸೀಸನ್ ಗೆ ವೇದಿಕೆ ಸಜ್ಜು
ಆದರಿದು ಈಟಿವಿ ಕನಡ ವಾಹಿನಿಯ 'ಬಿಗ್ ಬಾಸ್' ಕನ್ನಡ ಕಾರ್ಯಕ್ರಮವಲ್ಲ. ಕಲರ್ಸ್ ವಾಹಿನಿಯಲ್ಲಿ ಸಲ್ಮಾನ್ ಖಾನ್ ನಡೆಸಿಕೊಡಲಿರುವ ಹಿಂದಿಯ ಬಿಗ್ ಬಾಸ್ ಕಾರ್ಯಕ್ರಮ. ಈಗ ಸೀಸನ್ 7ಕ್ಕೆ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ.
ಈ ಬಾರಿಯೂ ಕಾರ್ಯಕ್ರಮವನ್ನು 47ರ ಹರೆಯದ ನಟ ಸಲ್ಲು ನಿರೂಪಿಸಲಿದ್ದಾರೆ. 'ಬಿಗ್ ಬಾಸ್ 7'ರ ಪ್ರೊಮೋ ಶೀಘ್ರದಲ್ಲೇ ಬಿಡುಗಡೆಯಾಗಲಿದೆ . ಈ ಬಾರಿಯ ವಿಶೇಷ ಎಂದರೆ ಸಲ್ಮಾನ್ ಖಾನ್ ಅವರದು ದ್ವಿಪಾತ್ರ ನಿರೂಪಣೆ. ಅವರ 1997ರ ಹಿಟ್ ಚಿತ್ರ 'ಜುಡ್ವಾ' ಚಿತ್ರದ ದ್ವಿಪಾತ್ರಾಭಿನಯದಂತೆ ಇರುತ್ತದೆ.
'ಜುಡ್ವಾ' ಚಿತ್ರದ ಪಾತ್ರದಂತೆ ಅವರು ಎರಡು ಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಂಬಂಧ ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಈ ಬಾರಿ ತಮ್ಮ ಕಾರ್ಯಕ್ರಮವನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ ಎನ್ನುತ್ತವೆ ವಾಹಿನಿ ಮೂಲಗಳು.
'ಬಿಗ್ ಬಾಸ್' ಸೀಸನ್ 4ರಿಂದಲೂ ಸಲ್ಮಾನ್ ಖಾನ್ ಈ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದಾರೆ. ಒಂದಷ್ಟು ತಮಾಷೆ, ಸೀರಿಯಸ್, ಹುಡುಗಾಟ ಎಲ್ಲವನ್ನೂ ಮಾಡುವ ಮೂಲಕ ಸಲ್ಲು ತಮ್ಮ ಅಭಿಮಾನಿಗಳಿಗೆ ಇನ್ನೂ ಹತ್ತಿರವಾಗಿದ್ದರು. ಈ ಬಾರಿ ಡಬಲ್ ಧಮಾಕಾ ನೀಡುವ ಮೂಲಕ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತರುತ್ತಿದ್ದಾರೆ. (ಏಜೆನ್ಸೀಸ್)


Click it and Unblock the Notifications












