For Quick Alerts
  ALLOW NOTIFICATIONS  
  For Daily Alerts

  ರಾಜಕೀಯ ತಿರುವು ಪಡೆದ ಸಲ್ಮಾನ್ ಖಾನ್ ದಬಾಂಗ್ 3 ವಿವಾದ

  |
  ಬಿಡುಗಡೆಗೂ ಮುನ್ನ ರಾಜಕೀಯ ತಿರುವು ಪಡೆದ ಕಿಚ್ಚನ ಸಿನೆಮಾ

  ನಟ ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷೆಯ ದಂಬಾಂಗ್-3 ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಮಧ್ಯ ಪ್ರದೇಶದ ಇಂದೋರ್ ನಲ್ಲಿ ಚಿತ್ರದ ಹಾಡಿನ ಚಿತ್ರೀಕರಣ ಮಾಡಲಾಗುತ್ತಿದೆ. ನರ್ಮದಾ ನದಿ ತೀರದಲ್ಲಿ ಸೆಟ್ ಹಾಕಿ ದಂಬಾಂಗ್-3 ಚಿತ್ರದ ಅದ್ಧೂರಿ ಶೂಟಿಂಗ್ ಮಾಡಲಾಗುತ್ತಿದೆ.

  ಆದ್ರೀಗ ಈ ಚಿತ್ರೀಕರಣ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಕಾರಣ ಚಿತ್ರದಲ್ಲಿ ಶಿವಲಿಂಗವನ್ನು ಬಳಸಲಾಗಿದ್ದು ಈ ಶಿವಲಿಂಗವನ್ನು ಮರದ ಹಲಗೆಗಳ ಅಡಿ ಇಡಲಾಗಿದೆ. ಈ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಶಿವಲಿಂಗಕ್ಕೆ ಅವಮಾನ ಮಾಡಲಾಗಿದೆ, ಹಿಂದೂ ಧಾರ್ಮಿಕ ಭಾವನೆಗಳಿಗೆ ಸಲ್ಮಾನ್ ಖಾನ್ ಧಕ್ಕೆ ತರುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

  'ದಬಾಂಗ್ 3' ಚಿತ್ರೀಕರಣಕ್ಕೆ ಸುದೀಪ್ ಯಾವಾಗ ಹೋಗ್ತಾರೆ?

  ಈ ಘಟನೆ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಇದೇ ವಿವಾದವನ್ನು ಬಳಸಿಕೊಂಡು ರಾಜಕೀಯ ಲಾಭ ಪಡೆಯಲು ಕಿತ್ತಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬೋಪಾಲ್ ಜಿಲ್ಲೆಯ ಹಾಜಿಪುರ್ ಬಿಜೆಪಿ ಶಾಸಕ ರಾಮೇಶ್ವರ್ ಶರ್ಮಾ, 'ಕಾಂಗ್ರೆಸ್ ನೇತೃತ್ವದ ಕಮಲ್ ನಾಥ್ ಸರ್ಕಾರ ಬಂದ ಮೇಲೆ ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ಕೆಲಸಗಳು ಹೆಚ್ಚಾಗುತ್ತಿವೆ. ಶಿವನಿಗೆ ಅಪಮಾನ ಮಾಡಿದವರ ವಿರುದ್ದ ಎಫ್ ಐ ಆರ್ ಧಾಖಲಿಸಬೇಕೆಂದು' ಎಂದು ಒತ್ತಾಯಿಸಿದ್ದಾರೆ.

  ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರೆ ಶೋಭ ಓಝಾ. 'ಬಿಜೆಪಿ ಮುಖಂಡರು ಸಂಕುಚಿತ ಮನೋಭಾವದವರು. ನಾವು ಶರ್ಮ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸಲ್ಮಾನ್ ಖಾನ್ ಒಬ್ಬ ಅದ್ಭುತ ಹಾಗೂ ಧಾರ್ಮಿಕ ಸಾಮರಸ್ಯ ಹೊಂದಿರುವ ನಟ. ಆದ್ರೆ ಬಿಜೆಪಿ ಈ ಘಟನೆಯನ್ನು ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ' ಎಂದು ಹೇಳಿದ್ದಾರೆ.

  ಸಲ್ಮಾನ್ ಮತ್ತು ಸುದೀಪ್ ಜೋಡಿಯ 'ದಬಾಂಗ್ 3' ಚಿತ್ರಕ್ಕೆ ಮುಹೂರ್ತ

  ಈ ವಿವಾದ ದೊಡ್ಡದಾಗುತ್ತಿದ್ದಂತೆ ನಟ ಸಲ್ಮಾನ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. 'ಶಿವಲಿಂಗ ಹಾಳಾಗಬಾರದು ಎನ್ನುವ ಕಾರಣಕ್ಕೆ ಮರದ ಹಲಗೆ ಕೆಳಗೆ ಇಟ್ಟಿರುವುದು. ಚಿತ್ರೀಕರಣ ಮುಗಿದ ಬಳಿಕ ತೆಗೆಯುತ್ತೇವೆ' ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

  ದಬಾಂಗ್-3 ಪ್ರಭುದೇವ ನಿರ್ದೇಶದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

  English summary
  Bollywood actor Salman Khan starrer Dabangg-3 movie facing major controversy before its release. Shivling covered with wooden planks during the shooting of the Dabangg-3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X