For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಕನ್ನಡ ಕೇಳಿ ಖುಷಿಯಾದ ಕನ್ನಡಿಗರು

  |
  Salman Khan to dub his Dialogues in Kannada for Dabangg 3 | FILMIBEAT KANNADA

  ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಮತ್ತು ಸ್ಯಾಂಡಲ್ ವುಡ್ ಮಾಣಿಕ್ಯ ಕಿಚ್ಚ ಸುದೀಪ್ ಅಭಿನಯದ ದಬಾಂಗ್-3 ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿನಯ ಚಕ್ರವರ್ತಿಯ ಅಭಿನಯ, ಸ್ಟೈಲ್, ಖದರ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ವಿಶೇಷ ಅಂದರೆ ಸಲ್ಮಾನ್ ಖಾನ್ ಬಾಯಲ್ಲಿ ಕನ್ನಡ ಕೇಳಿ ಕನ್ನಡಿಗರು ಫುಲ್ ಖುಷ್ ಆಗಿದ್ದಾರೆ.

  ದಬಾಂಗ್ 3 ಟ್ರೈಲರ್: ಚುಲ್ ಬುಲ್ ಪಾಂಡೆ ದರ್ಬಾರ್, ಸುದೀಪ್ ಸೂಪರ್ದಬಾಂಗ್ 3 ಟ್ರೈಲರ್: ಚುಲ್ ಬುಲ್ ಪಾಂಡೆ ದರ್ಬಾರ್, ಸುದೀಪ್ ಸೂಪರ್

  ಸದ್ಯ ರಿಲೀಸ್ ಆಗಿರುವ ಕನ್ನಡ ವರ್ಷನ್ ಟ್ರೈಲರ್ ಗೆ ಸ್ವತಹ ಸಲ್ಮಾನ್ ಖಾನ್ ಧ್ವನಿ ನೀಡಿದ್ದಾರೆ. ಸಲ್ಲು ಭಾಯ್ ಕನ್ನಡದಲ್ಲಿ ಮಾತನಾಡಿದ್ದನ್ನು ನೋಡಿ ಕನ್ನಡಿಗರು ಹೆಮ್ಮೆ ಪಡುತ್ತಿದ್ದಾರೆ. ಸಲ್ಮಾನ್ ಸ್ಪಷ್ಟವಾಗಿ ಕನ್ನಡ ಮಾತನಾಡಿದ್ದರು ವಾಕ್ಯವನ್ನು ನಿಲ್ಲಿಸಿ ನಿಲ್ಲಿಸಿ ಮಾತನಾಡಿದ್ದಾರೆ. ಇದರಿಂದ ಅನೇಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಬಾಲಿವುಡ್ ನ ಸ್ಟಾರ್ ನೊಬ್ಬ ಕನ್ನಡದಲ್ಲಿ ಡಬ್ ಮಾಡಿರುವುದು ನಿಜಕ್ಕು ಸಂತಸ ತರುವಂತ ವಿಚಾರ ಎನ್ನುವುದು ಅನೇಕರ ಅಭಿಪ್ರಾಯ. ಸಲ್ಮಾನ್ ಖಾನ್ ಬಾಯಲ್ಲಿ ಕನ್ನಡ ಕೇಳಿ ಅಭಿಮಾನಿಗಳ ಜೊತೆಗೆ ಸ್ಯಾಂಡಲ್ ವುಡ್ ನ ಅನೇಕ ಸ್ಟಾರ್ಸ್ ಕೂಡ ಖುಷಿಪಟ್ಟಿದ್ದಾರೆ.

  ಕನ್ನಡದಲ್ಲಿ ಟ್ವೀಟ್ ಮಾಡಿದ ಸಲ್ಮಾನ್ ಖಾನ್

  ಕನ್ನಡದಲ್ಲಿ ಟ್ವೀಟ್ ಮಾಡಿದ ಸಲ್ಮಾನ್ ಖಾನ್

  ದಬಾಂಗ್-3 ಕನ್ನಡ ಟ್ರೈಲರ್ ಗೆ ಸಲ್ಮಾನ್ ಖಾನ್ ಡಬ್ ಮಾಡಿರುವ ಜೊತೆಗೆ ಕನ್ನಡದಲ್ಲೆ ಟ್ವೀಟ್ ಮಾಡಿದ್ದಾರೆ. ಸಲ್ಮಾನ್ ಕನ್ನಡ ಪ್ರೀತಿಗೆ ಕನ್ನಡಿಗರು ತಲೆಬಾಗಿದ್ದಾರೆ. "ದಯವಿಟ್ಟು, ದಬಾಂಗ್-3 ಕನ್ನಡ ಟ್ರೈಲರ್ ನೋಡುವುದಕ್ಕಾಗಿ ನಿಮ್ಮ ಅಮೂಲ್ಯ ಸಮಯದಲ್ಲಿ 3 ನಿಮಿಷಗಳನ್ನು ನಮಗಾಗಿ ಕೊಡಬಹುದಾ" ಎಂದು ಟ್ವೀಟ್ ಮಾಡಿದ್ದಾರೆ.

  ಕರ್ನಾಟಕ ರಕ್ಷಣ ವೇದಿಕೆ ಉಪಾಧ್ಯಕ್ಷರು ಹೇಳಿದ್ದೇನು?

  ಕರ್ನಾಟಕ ರಕ್ಷಣ ವೇದಿಕೆ ಉಪಾಧ್ಯಕ್ಷರು ಹೇಳಿದ್ದೇನು?

  "ಭಾರತ ದೇಶದ ಬೇರೆ ಬೇರೆ ರಾಜ್ಯದ, ಬೇರೆ ಭಾಷೆಯ ನಟರೆಲ್ಲಾ ಕನ್ನಡದಲ್ಲಿ ಮಾತನಾಡಲಿಕ್ಕೆ ಕಾರಣವೇ ನೀವು ಸರ್, ಕನ್ನಡ ಕಟ್ಟುವ ಕೆಲಸ ಇದೇ ಸರ್, ಅಖಂಡ ಕನ್ನಡದ ಜನತೆ ಪರವಾಗಿ ನಿಮಗೆ ಹೃದಯಾಂತರಾಳದ ಅಭಿಮಾನದ ಅಭಿನಂದನೆಗಳು" ಎಂದು ಕರ್ನಾಟಕ ರಕ್ಷಣ ವೇದಿಕೆ ಉಪಾಧ್ಯಕ್ಷರು ಹೇಳಿದ್ದಾರೆ.

  ರಕ್ಷಿತ್ ಶೆಟ್ಟಿಗೆ ಸವಾಲಾಗಿ ನಿಂತ ಭಾರತದ ಇಬ್ಬರು ಸೂಪರ್ ಸ್ಟಾರ್ಸ್!ರಕ್ಷಿತ್ ಶೆಟ್ಟಿಗೆ ಸವಾಲಾಗಿ ನಿಂತ ಭಾರತದ ಇಬ್ಬರು ಸೂಪರ್ ಸ್ಟಾರ್ಸ್!

  ಸುನೀಲ್ ಶೆಟ್ಟಿ ಹೇಳಿದ್ದೇನು?

  ಸುನೀಲ್ ಶೆಟ್ಟಿ ಹೇಳಿದ್ದೇನು?

  "ಸೂಪರ್ ಕಿಚ್ಚ..ಲುಕ್, ಬಾಡಿ ಲಾಂಗ್ವೇಜ್ ಮತ್ತು ಆಟಿಟ್ಯೂಡ್ ಅದ್ಭುತವಾಗಿದೆ. ಒಳ್ಳೆಯದಾಗಲಿ ಕಿಚ್ಚ" ಎಂದು ಸುನೀಲ್ ಶೆಟ್ಟಿ ಹೇಳಿದ್ದಾರೆ. ಸುದೀಪ್ ಮತ್ತು ಸುನೀಲ್ ಶೆಟ್ಟಿ ಪೈಲ್ವಾನ್ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದರು. ಪೈಲ್ವಾನ್ ಮೂಲಕ ಸುನೀಲ್ ಶೆಟ್ಟಿ ಮೊದಲ ಬಾರಿಗೆ ಕನ್ನಡ ಚಿತ್ರ ಪ್ರೇಕ್ಷಕರ ಮುಂದೆ ಬಂದಿದ್ದರು.

  ಚುಲ್ ಬುಲ್ ಪಾಂಡೆಗೆ ಸ್ವಾಗತ

  ಚುಲ್ ಬುಲ್ ಪಾಂಡೆಗೆ ಸ್ವಾಗತ

  "ನಿಮಗೆ ಸ್ವಾಗತ ಕೋರುತ್ತೇವೆ..ಚುಲ್ ಬುಲ್ ಪಾಂಡೆ. ಸುದೀಪ್ ಬಂದಾಗ ಟ್ರೇಲರ್ ನಲ್ಲೇ ಶಿಳ್ಳೆ ಹೊಡೆಯೋಣ ಎನಿಸಿತು" ಎಂದು ನಿರ್ದೇಶಕ ಸಿಂಪಲ್ ಸುನಿ ಹೇಳಿದ್ದಾರೆ. ಸಲ್ಮಾನ್ ಖಾನ್ ಬಾಯಲ್ಲಿ ಕನ್ನಡ ಕೇಳಿ ಸಿಂಪಲ್ ಸುನಿ ಕೂಡ ಫಿದಾ ಆಗಿದ್ದಾರೆ.

  ಕನ್ನಡದಲ್ಲಿ ಬರ್ತಿರುವ ಅರ್ನಾಲ್ಡ್ ಸಿನಿಮಾಗೆ ಕಿಚ್ಚ ಸುದೀಪ್ ಸಾಥ್ಕನ್ನಡದಲ್ಲಿ ಬರ್ತಿರುವ ಅರ್ನಾಲ್ಡ್ ಸಿನಿಮಾಗೆ ಕಿಚ್ಚ ಸುದೀಪ್ ಸಾಥ್

  ಸುದೀಪ್ ಪ್ರತಿಕ್ರಿಯೆ

  ಸುದೀಪ್ ಪ್ರತಿಕ್ರಿಯೆ

  ಸಲ್ಮಾನ್ ಖಾನ್ ಕನ್ನಡದಲ್ಲಿ ಡಬ್ ಮಾಡಿರುವುದನ್ನು ಕೇಳುವುದೆ ಚಂದ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. "ಪ್ರೀತಿಯಿಂದ ಕನ್ನಡದಲ್ಲಿ ಮಾತನಾಡುವುದನ್ನು ನೋಡುವುದೇ ಒಂದು ಹೆಮ್ಮೆ. ಜೈ ಕನ್ನಡ" ಎಂದು ಸುದೀಪ್ ಹೇಳಿದ್ದಾರೆ. ದಬಾಂಗ್-3 ಚಿತ್ರದಲ್ಲಿ ಸುದೀಪ್ ಬಲ್ಲಿ ಸಿಂಗ್ ಪಾತ್ರದಲ್ಲಿ ಮಿಂಚಿದ್ದಾರೆ. ಕಿಚ್ಚ ಚಿತ್ರದಲ್ಲಿ ಸಖತ್ ಸ್ಟೈಲೀಶ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ದಬಾಂಗ್-3 ಡಿಸೆಂಬರ್ 20ಕ್ಕೆ ತೆರೆಗೆ ಬರುತ್ತಿದೆ.

  English summary
  Bollywood actor Salman Khan to dub his dialogues in kannada version of Dabanng-3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X