ಸುದೀಪ್ ಮಗಳನ್ನು ಕರೆದು ತಾನೇ ಫೋಟೋ ತೆಗೆದುಕೊಂಡ ಸೂಪರ್ ಸ್ಟಾರ್
ನಟ ಕಿಚ್ಚ ಸುದೀಪ್ ಜೊತೆಗೆ ಫೋಟೋ ತೆಗೆದುಕೊಳ್ಳಬೇಕು ಎನ್ನುವುದು ಅನೇಕ ಅಭಿಮಾನಿಗಳ ಆಸೆ ಆಗಿರುತ್ತದೆ. ಅದೇ ರೀತಿ ಸುದೀಪ್ ಮಗಳು ಸಾನ್ವಿಗೆ ಕೂಡ ಒಬ್ಬ ಸ್ಟಾರ್ ಜೊತೆಗೆ ಫೋಟೋ ತೆಗೆದುಕೊಳ್ಳುವ ಆಸೆ ಇತ್ತು. ಆ ನಟ ಬೇರೆ ಯಾರು ಅಲ್ಲ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್.
ಸಲ್ಮಾನ್ ಖಾನ್ ಜೊತೆಗೆ ಸುದೀಪ್ ಮಗಳು ಕ್ಲಿಕ್ಕಿಸಿದ ಫೋಟೋವೊಂದು ಈ ಹಿಂದೆಯೇ ಹೊರಬಂದಿತ್ತು. ಆದರೆ, ಇದೀಗ ಈ ಫೋಟೋ ಹಿಂದಿನ ಘಟನೆ ತಿಳಿದಿದೆ. 'ದಬಾಂಗ್ 3' ಸಿನಿಮಾದ ಪ್ರಚಾರದ ವೇಳೆ ಸುದೀಪ್ ಈ ಬಗ್ಗೆ ಮಾತನಾಡಿದ್ದಾರೆ.
ಸುದೀಪ್ ಪುತ್ರಿ ಸಾನ್ವಿಗೆ ಸಲ್ಮಾನ್ ಖಾನ್ ಜೊತೆಗೆ ಫೋಟೋ ತೆಗೆದುಕೊಳ್ಳುವ ಆಸೆ ಇತ್ತು. ಈ ವಿಷಯ ಸಲ್ಮಾನ್ ಗಮನಕ್ಕೆ ಬಂತು. ಆಗ ಸಲ್ಮಾನ್ ತಾನೇ ಆಕೆಯನ್ನು ಕರೆದು, ತಮಗೆ ಫೋಟೋ ಬೇಕು ಎನ್ನುವ ಹಾಗೆ ಸಾನ್ವಿ ಜೊತೆಗೆ ಫೋಟೋ ತೆಗೆದುಕೊಂಡಿದ್ದಾರೆ. ಸಾನ್ವಿ ಕೇಳುವ ಮೊದಲೇ ಆಕೆಯ ಆಸೆಯನ್ನು ಈಡೇರಿಸಿದ್ದಾರೆ.

'ದಬಾಂಗ್ 3' ಚಿತ್ರದಿಂದ ನಟ ಸುದೀಪ್ ಹಾಗೂ ಸಲ್ಮಾನ್ ಖಾನ್ ಸ್ನೇಹ ತುಂಬ ಚೆನ್ನಾಗಿದೆ. ಒಮ್ಮೆ ಸುದೀಪ್ ಅವರ ಕುಟುಂಬ ಸಲ್ಮಾನ್ ರನ್ನು ಭೇಟಿ ಮಾಡಿದೆ. ಈ ಸಿನಿಮಾ ತಮಗೆ ಬಹಳಷ್ಟು ಪ್ರೀತಿ ನೀಡಿದೆ ಎಂದು ಸುದೀಪ್ ಹೇಳಿದ್ದಾರೆ.
ಅಂದಹಾಗೆ, 'ದಬಾಂಗ್ 3' ಸಿನಿಮಾ ಡಿಸೆಂಬರ್ 20 ರಂದು ಬಿಡುಗಡೆ ಆಗುತ್ತಿದೆ. ಸುದೀಪ್ ಸಿನಿಮಾದಲ್ಲಿ ಖಳನಾಯಕನ ಪಾತ್ರ ಮಾಡಿದ್ದಾರೆ. ಪ್ರಭುದೇವ ಈ ಸಿನಿಮಾದ ನಿರ್ದೇಶಕ.


Click it and Unblock the Notifications











