ಅಬ್ಬಾ.. ಸುದೀಪ್ 'ಪೈಲ್ವಾನ್' ಬಗ್ಗೆ 'ಸುಲ್ತಾನ್' ಸಲ್ಮಾನ್ ಟ್ವೀಟ್
ನಟ ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾದ ಟೀಸರ್ ಇಂದು ಸಂಜೆ 4.45ಕ್ಕೆ ಸರಿಯಾಗಿ ಬಿಡುಗಡೆಯಾಗಿದೆ. ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್ ಟ್ವೀಟ್ ಮಾಡಿದ್ದಾರೆ.
''ಕಿಚ್ಚ ಸುದೀಪ್ ನೀವು ನಮ್ಮ ಪ್ರಯತ್ನವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದೀರಿ. ಆಲ್ ದಿ ಬೆಸ್ಟ್. 'ಪೈಲ್ವಾನ್'ಗೆ ಅಭಿನಂದನೆಗಳು.'' ಎಂದು ಟ್ವೀಟ್ ಮಾಡಿದ್ದಾರೆ.

'ಕುಸ್ತಿ' ಬಗ್ಗೆ ಈ ಹಿಂದೆ ಸಲ್ಮಾನ್ ಖಾನ್ 'ಸುಲ್ತಾನ್' ಸಿನಿಮಾ ಮಾಡಿದ್ದರು. ಈ ಸಿನಿಮಾ ಸುದೀಪ್ ಅವರಿಗೆ ಬಹಳ ಇಷ್ಟ ಆಗಿತ್ತು. ಅದೇ ಕಾರಣಕ್ಕೆ ಕಿಚ್ಚ ಈ ಪ್ರಯತ್ನ ಶುರು ಮಾಡಿದರು.
'ಪೈಲ್ವಾನ್' ಚಿತ್ರದ 1 ನಿಮಿಷ 3 ಸೆಕೆಂಡ್ ನ ಟೀಸರ್ ಅಬ್ಬರಿಸುತ್ತಿದೆ. ಅರ್ಜುನ್ ಜನ್ಯ ಹಿನ್ನೆಲೆ ಸಂಗೀತ ಟೀಸರ್ ಅನ್ನು ಇನ್ನಷ್ಟು ಪ್ರಭಾವಗೊಳಿಸಿದೆ. ಈ ಬೇಸಿಗೆಗೆ ಸಿನಿಮಾ ಬಿಡುಗಡೆಯಾಗಲಿದೆ. 'ಪೈಲ್ವಾನ್' ಸಿನಿಮಾವನ್ನು ಕೃಷ್ಣ ನಿರ್ದೇಶಕ ಮಾಡುತ್ತಿದ್ದಾರೆ. 'ಹೆಬ್ಬುಲಿ' ಬಳಿಕ ಮತ್ತೆ ಕಿಚ್ಚನ ಜೊತೆಗೆ ಕೃಷ್ಣ ಸಿನಿಮಾ ಮಾಡಿದ್ದಾರೆ. ನಿರ್ದೇಶನ ಮಾತ್ರವಲ್ಲದೆ ಈ ಸಿನಿಮಾಗೆ ಅವರೇ ಬಂಡವಾಳ ಹಾಕಿದ್ದಾರೆ. ಆಕಾಂಕ್ಷ ಸಿಂಗ್ ಸಿನಿಮಾಗೆ ನಾಯಕಿಯಾಗಿದ್ದಾರೆ.


Click it and Unblock the Notifications











